ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ನಾಗರಿಕರಿಗೆ ತಲೆ ನೋವಾಗಿರುವ ತೆರಿಗೆ ಪಾವತಿ ಅವ್ಯವಸ್ಥೆ

ವಲಯಗಳ ಮರು ವಿಂಗಡಣೆ ಮತ್ತು ತೆರಿಗೆ ಪರಿಷ್ಕರಣೆಯ ಹೊರತಾಗಿಯೂ ನಾಗರಿಕರು ಶೇಕಡಾ 20ಕ್ಕಿಂತ...

ಕಳೆದ ವರ್ಷ ಹೆಚ್ಚುವರಿ ತೆರಿಗೆ ಪಾವತಿಸಿ ಮರುಪಾವತಿಯಾಗದೆ ಈ ವರ್ಷ ಬಿಬಿಎಂಪಿ ಕಚೇರಿಗೆ ವಿಚಾರಿಸಲೆಂದು ಆಗಮಿಸುವ ಜನತೆ.
Sumana Upadhyaya
Updated On : 15 Jun 2017, 12:19 pm
ಬೆಂಗಳೂರು: ವಲಯಗಳ ಮರು ವಿಂಗಡಣೆ ಮತ್ತು ತೆರಿಗೆ ಪರಿಷ್ಕರಣೆಯ ಹೊರತಾಗಿಯೂ ನಾಗರಿಕರು ಶೇಕಡಾ 20ಕ್ಕಿಂತ ಹೆಚ್ಚು ಆಸ್ತಿ ತೆರಿಗೆಯನ್ನು ಪರಿಷ್ಕೃತ ತೆರಿಗೆಯಡಿ ಕಟ್ಟುವ ಅಗತ್ಯವಿಲ್ಲವೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೆದ ವರ್ಷ ಏಪ್ರಿಲ್ ನಲ್ಲಿ ಭರವಸೆ ನೀಡಿತ್ತು. ಆದರೆ ಪರಿಷ್ಕೃತ ತೆರಿಗೆಗೆ ಸಂಬಂಧಪಟ್ಟಂತೆ ಸ್ಪಷ್ಟೀಕರಣ ಬರುವ ಹೊತ್ತಿಗೆ ಸುಮಾರು 2 ಲಕ್ಷ ಜನ ತೆರಿಗೆ ಪಾವತಿಸಿದ್ದರು. ಹೆಚ್ಚಿನ ತೆರಿಗೆ ಪಾವತಿಸಿದವರ ಹೆಚ್ಚುವರಿ ಹಣವನ್ನು ಮುಂದಿನ ವರ್ಷದ ತೆರಿಗೆಯಲ್ಲಿ ಪರಿಗಣಿಸಲಾಗುವುದೆಂದು ಬಿಬಿಎಂಪಿ ಹೇಳಿದ್ದರೂ ಅದರಂತೆ ಆಗಲಿಲ್ಲ.
ಕಳೆದ ಮೂರು ದಿನಗಳಿಂದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಭಾರೀ  ಅವ್ಯವಸ್ಥೆ ಕಂಡುಬರುತ್ತಿದೆ. ಈ ವರ್ಷದ ಆಸ್ತಿ ತೆರಿಗೆಯಲ್ಲಿ ಹೆಚ್ಚಿನ ಹಣ ಪಾವತಿ ಮಾಡಿದವರ ಹಣ ಸಿಗಲು ಜನರು ಬಿಬಿಎಂಪಿ ಕಚೇರಿಗೆ ಆಗಮಿಸುತ್ತಿದ್ದಾರೆ. ಆಸ್ತಿ ತೆರಿಗೆಯಲ್ಲಿ ಶೇಕಡಾ 5ರಷ್ಟು ರಿಯಾಯಿತಿ ಪಡೆಯಲು ಇಂದು ಕೊನೆಯ ದಿನವಾಗಿದೆ.
ಬಿಬಿಎಂಪಿ ಸ್ಥಾಯಿ ಸಮಿತಿಯ ತೆರಿಗೆ ಮತ್ತು ಹಣಕಾಸು ವಿಭಾಗದ ಅಧ್ಯಕ್ಷ ಎಂ.ಕೆ.ಗುಣಶೇಖರ್ ಈ ವರ್ಷ 10,22,000 ಆಸ್ತಿ ಮಾಲೀಕರು ತೆರಿಗೆ ಪಾವತಿಸಿರುವುದು ಸಂತಸದ ವಿಷಯವಾಗಿದೆ. ಕಳೆದ ವರ್ಷ 7 ಲಕ್ಷ ಜನ ಆಸ್ತಿ ಮಾಲೀಕರು ತೆರಿಗೆ ಪಾವತಿಸಿದ್ದರು ಎಂದು ಹೇಳಿದರು.

Advertisement

Advertisement

ಆದರೆ ಜನರ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಗೆ ನಿತ್ಯವೂ ಸಾವಿರಾರು ಮಂದಿ ಸಮಸ್ಯೆಗಳನ್ನು ಹೊತ್ತು ಬರುತ್ತಿದ್ದಾರೆ. 
ಇದಕ್ಕೆ ಉತ್ತರಿಸುವ ಗುಣಶೇಖರ್ ಸಾಫ್ಟ್ ವೇರ್ ಸಮಸ್ಯೆಯಿಲ್ಲ  ಎನ್ನುತ್ತಾರೆ. ತಾವು ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಮಾಹಿತಿ ಕೇಂದ್ರದ ಅಧಿಕಾರಿಗಳ ಜೊತೆ ನಾಲ್ಕು ಸಭೆಗಳನ್ನು ನಡೆಸಿದ್ದೇನೆ. ಸಾಫ್ಟ್ ವೇರ್ ನಲ್ಲಿರುವ 20 ಸಮಸ್ಯೆಗಳ ಪಟ್ಟಿಯನ್ನು ನೀಡಿದ್ದೇನೆ. ಅದರಲ್ಲಿ ಕೆಲವು ಸಮಸ್ಯೆಗಳನ್ನು ಅವರು ಬಗೆಹರಿಸಿದ್ದಾರೆ ಎಂದು ಹೇಳಿದರು.
ಈ ವರ್ಷ 2,600 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅವುಗಳಲ್ಲಿ 1,206 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಮುಂದಿನ 10 ತಿಂಗಳಲ್ಲಿ ಬಿಬಿಎಂಪಿ ತನ್ನ ಗುರಿ ತಲುಪಲಿದೆ ಎಂದು ಗುಣಶೇಖರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement