ಡಿ.ಕೆ ಶಿವಕುಮಾರ್ 
ರಾಜ್ಯ

ಬಿಐಎಎಲ್ ಷೇರುಗಳನ್ನು ಜಿವಿಕೆ ಮಾರಾಟ ಮಾಡದಂತೆ ತಡೆಯಿರಿ: ಸಿಎಂ ಗೆ ಶಿವಕುಮಾರ್ ಮನವಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾಲುದಾರ ಸಂಸ್ಥೆಯಾಗಿರುವ ಜಿವಿಕೆಯು ತನ್ನ ಪಾಲಿನ ಷೇರುಗಳನ್ನು ಕೆನಡಿಯನ್ ಫೇರ್ ಪಾಕ್ಸ್

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾಲುದಾರ ಸಂಸ್ಥೆಯಾಗಿರುವ ಜಿವಿಕೆಯು ತನ್ನ ಪಾಲಿನ ಷೇರುಗಳನ್ನು ಕೆನಡಿಯನ್ ಫೇರ್ ಪಾಕ್ಸ್ ಕಂಪನಿಗೆ ಮಾರಾಟ ಮಾಡುವುದನ್ನು ತಡೆಯಬೇಕೆಂದು ಇಂಧನ ಸಚಿವ  ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ,
ವಿಮಾನ ನಿಲ್ದಾಣ ಸಂಸ್ಥೆಯಲ್ಲಿ ಜಂಟಿ ಪಾಲುದಾರಿಕೆ ಹೊಂದಿರುವ ರಾಜ್ಯ ಸರ್ಕಾರ ವಿಮಾನ ನಿಲ್ದಾಣದ ಆಡಳಿತ ಖಾಸಗಿ ವಿದೇಶಿ ಸಂಸ್ಥೆಯ ಕೈ ವಶವಾಗದಂತೆ ತಡೆಗಟ್ಟಬೇಕೆಂದು ಕೋರಿದ್ದಾರೆ.
2008 ರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣ ಸಂಸ್ಥೆಯ ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ, ಸೀಮೆನ್ಸ್ ಮತ್ತು ಜ್ಯೂರಿಚ್  ವಿಮಾನ ನಿಲ್ದಾಣ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಆರಂಭವಾಯಿತು. ಅದಾಗಲೇ ಮುಂಬೈ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದ್ದ ಜಿವಿಕೆ ಸಮೂಹ ಸಂಸ್ಥೆಯು ಶೇ. 43 ಷೇರುಗಳನ್ನು ಪಡೆದು ಪ್ರಧಾನ ಕಾರ್ಯನಿರ್ಹಾಹಕ ಅಧಿಕಾರಿಯಾಗಿ ನೇಮಕವಾಗಿತ್ತು.
ಆದರೆ ಇದೀಗ ಜಿವಿಕೆ ಸಂಸ್ಥೆ ತನ್ನ ಷೇರುಗಳ ಪೈಕಿ ಶೇ. 35ರಷ್ಟು ಷೇರುಗಳನ್ನು ಕೆನಡಿಯನ್ ಫೇರ್ ಫಾಕ್ಸ್ ಸಂಸ್ಥೆಗೆ ವರ್ಗಾಯಿಸುವುದಾಗಿ  ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರಾದ ಸೀಮೆನ್ಸ್, ಹಾಗೂ ಫೇರ್ ಪಾಕ್ಸ್ ಸಂಸ್ಥೆ ಒಟ್ಟು ಸೇರಿದರೆ, ಶೇ.74 ರಷ್ಟು ಷೇರುಗಳು ವಿದೇಶಿ ಸಂಸ್ಥೆಗಳ ಪಾಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ನಿರ್ವಹಣೆ ಹಾಗೂ ಸ್ಥಾಪಿಸಿದ ಉದ್ದೇಶ ಈಡೇರದೆ ಹಿನ್ನಡೆಯಾಗಲಿದೆ ಎಂದು ಆರೋಪಿಸಿದ್ದಾರೆ.
2ನೇ ಟರ್ಮಿನಲ್ ವಿಸ್ತರಣೆಯ ಕಾರ್ಯಪ್ರಗತಿಯಲ್ಲಿರುವಾಗ ವಿದೇಶಿ ಸಂಸ್ಥೆಗಳು ಬಹುಪಾಲು ಷೇರುಗಳ ಮೇಲೆ ನಿಯಂತ್ರಣ ಹೊಂದುವುದು ದೇಶದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಇದನ್ನು ಪರಿಗಣಿಸಿ ರಾಜ್ಯ ಸರ್ಕಾರ ತಕ್ಷಣವೇ ಜಿವಿಕೆ ಹೊಂದುವುದು ದೇಶದ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ. ಇದನ್ನು ಪರಿಗಣಿಸಿ ರಾಜ್ಯ ಸರ್ಕಾರವೇ ಜಿವಿಕೆ ಸಂಸ್ಥೆ ತನ್ನುಳಿದ ಶೇ.10 ರಷ್ಟು ಷೇರುಗಳನ್ನು ಮಾರಾಟ ಮಾಡದಂತೆ  ನಿರ್ಬಂಧಿಸಬೇಕು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗುಹೋಗುಗಳ ಬಗ್ಗೆ ರಾಜ್ಯ ಸರ್ಕಾರ ಸಂಪೂರ್ಣ ನಿಯಂತ್ರಣ ಸಾಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

4 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ