ರಾಜ್ಯ

ಕೊಲ್ಲೂರಿಗೆ ಮೊದಲ ಬಾರಿ ರಾಷ್ಟ್ರಪತಿ ಭೇಟಿ: ಮೂಕಾಂಬಿಕೆ ಸನ್ನಿಧಿಯಲ್ಲಿ 45 ನಿಮಿಷ ಕಳೆದ ಪ್ರಣಬ್

Shilpa D
ಕುಂದಾಪುರ: ಭಾನುವಾರ ಬಿಗಿ ಭದ್ರತೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೊಲ್ಲೂರಿಗೆ ಆಗಮಿಸಿದರು. 1200 ವರ್ಷ ಪುರಾತನ ದೇವಾಲಯವಾದ ಕೊಲ್ಲೂರು ಮೂಕಾಂಬಿಕೆ ದೇವಾಸ್ಥಾನಕ್ಕೆ ಪ್ರಣಬ್ ಮೊದಲ ಬಾರಿಗೆ ಭೇಟಿ ನೀಡಿದರು.
ದೇವಾಲಯದ ಆಡಳಿತ ಮಂಡಳಿ ರಾಷ್ಟ್ರಪತಿಗಳಿಗೆ ಹರುಷದಿಂದ ಸ್ವಾಗತ ಕೋರಿತು. ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ಬಂದ ಪ್ರಣಬ್ ಮುಖರ್ಜಿ ಅಲ್ಲಿಂದ ಶ್ರೀ ಕೃಷ್ಣ ಮಠಕ್ಕೆ ತೆರಳಿದರು, ನಂತರ ಅಲ್ಲಿಂದ ಐಬಿಯಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದರು. ನಂತರ ಕೊಲ್ಲೂರಿಗೆ ತೆರಳಿ ದೇವಾಲಯದ ಗರ್ಭಗುಡಿಯಲ್ಲಿ ಸುಮಾರು 3.45 ರಿಂದ 4.30ರ ವರೆಗೂ ಸಮಯ ಕಳೆದರು. 
ಕೇಂದ್ರ ಗುಪ್ತಚರ ಇಲಾಖೆ ಸಿಬ್ಬಂದಿ ಹೊರತು ಪಡಿಸಿ, ಉಡುಪಿ ಪೊಲೀಸರು ಸುಮಾರು 600 ಮಂದಿಯನ್ನು ರಾಷ್ಟ್ರಪತಿಗಳ ಭದ್ರತೆಗೆ ನಿಯೋಜಿಸಿದ್ದರು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಡುಪಿಯ ಪ್ರಸಿದ್ಧ ಆಹಾರ ತಿನಿಸುಗಳನ್ನು ಮಿಸ್ ಮಾಡಿಕೊಂಡರು. ಅವರ ಊಟ ಮತ್ತು ಸಂಜೆಯ ಟೀ ವ್ಯವಸ್ಥೆಯನ್ನು ಮಂಗಳೂರಿನಿಂದಲೇ ವ್ಯವಸ್ಥೆ ಮಾಡಲಾಗಿತ್ತುಪ. ಮಂಗಳೂರು ಮೂಲದ ಹೊಟೇಲ್ ಎಲ್ಲಾ ರೀತಿಯ ಆಹಾರಗಳನ್ನು ತರಿಸಲಾಗಿತ್ತು. 
ಉಡುಪಿಯ ಪೇಜಾವರ ಸ್ವಾಮೀಜಿ, ರಾಷ್ಟ್ರಪತಿಗಳಿಗೆ ಕೃಷ್ಣ ಮಠದ ಪಂಚರತ್ನ ಪ್ರಸಾದ ನೀಡಿದರು. ಉಡುಪಿಯ ಹೆಸರಾಂತ ಅಡುಗೆ ಪರಿಣಿತ ವಾಸುದೇವ ಭಟ್ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರಿಗೆ 32 ರೀತಿಯ ಎಲ್ಲಾ ಉಡುಪಿ ಆಹಾರಗಳನ್ನು ತಯಾರಿಸಿ ಆದಮಾರು ಮಠದಲ್ಲಿ ಬಡಿಸಿದ್ದನ್ನು ಸ್ಮರಿಸಿಕೊಳ್ಳಬಹುದು.
SCROLL FOR NEXT