ರಾಜ್ಯ

ಮಂಗಳೂರು: ಈದ್ ದಿನಾಂಕದ ಬಗ್ಗೆ ಗೊಂದಲ- ಎರಡು ಗುಂಪುಗಳ ನಡುವೆ ಘರ್ಷಣೆ

Shilpa D
ಮಂಗಳೂರು: ಈದ್ ದಿನಾಂಕದ ಬಗ್ಗೆ ಉಂಟಾದ ಗೊಂದಲದಿಂದಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಘಟನೆ ಮಂಗಳೂರಿನ ಉಲ್ಲಾಳ ದರ್ಗಾದಲ್ಲಿ ನಡೆದಿದೆ.
ಉಳ್ಳಾಲದ ನಾಲ್ಕು ಮಸೀದಿಗಳ ವ್ಯಾಪ್ತಿಯಲ್ಲಿ ಈದ್‌ ಉಲ್‌ ಫಿತ್ರ್‌ ಆಚರಣೆ ವಿಚಾರದಲ್ಲಿ ಗೊಂದಲ ಉಂಟಾಯಿತು. ಉಳ್ಳಾಲ ಖಾಜಿ  ಸೂಚನೆಯಂತೆ  ಕೆಲ ಮುಸ್ಲಿ ಮರು ಭಾನುವಾರವೂ ಉಪವಾಸ ವ್ರತ ಕೈಗೊಂಡರು. 
ಭಟ್ಕಳದಲ್ಲಿ ಶನಿವಾರ ಚಂದ್ರ ಕಾಣಿಸಿಕೊಂಡಿತ್ತು. ಹೀಗಾಗಿ  ಕಾಜಿಗಳು ಭಾನುವಾರ ರಂಜಾನ್ ಆಚರಿಸಿದರು.  ಆದರೆ ಉಲ್ಲಾಳ ದರ್ಗಾ ಸಮಿತಿ ಸೋಮವಾರ  ಈದ್ ಆಚರಿಸಲು ನಿರ್ಧರಿಸಿ ಉಲ್ಲಾಳ ದರ್ಗಾಗೆ ಬೀಗ ಹಾಕಲಾಗಿತ್ತು.
ಎಸ್ ಎಸ್ ಎಫ್ ಹಿಂಬಾಲಕರು ದರ್ಗಾಗೆ ನುಗ್ಗಿ ಮೊಹಮದ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಸ್ಥಳಕ್ಕೆ ಬಂದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೆ.ಎಂ ಶಾಂತರಾಜು, ಪರಿಸ್ಥಿತಿ ನಿಯಂತ್ರಣಕ್ಕೆ ತಂದು ದರ್ಗಾದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟರು. ಬಂಟ್ವಾಳ ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಅಹಿತಕರ ಘಟನೆಗಳು ನಡೆ ಯುತ್ತಿರುವ ಕಾರಣದಿಂದ ಜಿಲ್ಲೆಯಾ ದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. 
SCROLL FOR NEXT