ಪಲ್ಟಿಯಾದ ಟ್ಯಾಂಕರ್ ನಿಂದ ಡೀಸೆಲ್ ಸಂಗ್ರಹಕ್ಕಾಗಿ ಮುಗಿ ಬಿದ್ದಿರುವ ಜನ 
ರಾಜ್ಯ

ಪಾಕಿಸ್ತಾನ ಆಯ್ತು, ಈಗ ಕರ್ನಾಟಕ, ಪಲ್ಟಿಯಾದ ಟ್ಯಾಂಕರ್ ನಿಂದ ಡೀಸೆಲ್ ಗೆ ಮುಗಿ ಬಿದ್ದ ಜನ!

ಹೆದ್ದಾರಿಯಲ್ಲಿ ಪಲ್ಟಿಯಾದ ಟ್ಯಾಂಕರ್ ನಿಂದ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಬೆಂಕಿ ದುರಂತ ಸಂಭವಿಸಿ 157 ಮಂದಿ ಸತ್ತ ಪಾಕಿಸ್ತಾನದ ಘಟನೆ ಹಸಿರಾಗಿರುವಾಗಲೇ ಅಂತಹುದೇ ಘಟನೆ ಕರ್ನಾಟಕದಲ್ಲೂ ಸಂಭವಿಸಿದೆ.

ಕಲಬುರಗಿ: ಹೆದ್ದಾರಿಯಲ್ಲಿ ಪಲ್ಟಿಯಾದ ಟ್ಯಾಂಕರ್ ನಿಂದ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಬೆಂಕಿ ದುರಂತ ಸಂಭವಿಸಿ 157 ಮಂದಿ ಸತ್ತ ಪಾಕಿಸ್ತಾನದ ಘಟನೆ ಹಸಿರಾಗಿರುವಾಗಲೇ ಅಂತಹುದೇ ಘಟನೆ ಕರ್ನಾಟಕದಲ್ಲೂ ಸಂಭವಿಸಿದೆ.

ಕರ್ನಾಟಕದ ಕಲಬುರಗಿ ಜಿಲ್ಲೆಯ ನದಿಸಿನ್ನೂರು ಗ್ರಾಮದ ಸಮೀಪದ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿತ್ತು. ಪಲ್ಟಿಯಾದ ಟ್ಯಾಂಕರ್ ನಿಂದ ಡೀಸೆಲ್ ಸೋರಿಕೆಯಾಗುತ್ತಿತ್ತು. ಈ ವಿಚಾರ ತಿಳಿದ  ಸ್ಥಳೀಯ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಧಾವಿಸಿ ಟ್ಯಾಂಕರ್ ನಿಂದ ಸೋರಿಕೆಯಾಗುತ್ತಿದ್ದ ಡೀಸೆಲ್ ಅನ್ನು ಸಂಗ್ರಹಿಸಿದ್ದಾರೆ.

ಅದೃಷ್ಟವಶಾತ್ ಡೀಸೆಲ್ ಸಂಗ್ರಹಸುವ ವೇಳೆ ಯಾವುದೇ ದುರಂತ ಸಂಭವಿಸಿಲ್ಲ, ಒಂದು ವೇಳೆ ಪಾಕಿಸ್ತಾನದಲ್ಲಿ ನಡೆದಂತೆ ಟ್ಯಾಂಕರ್ ಗೆ ಬೆಂಕಿ ತಗುಲಿದ್ದರೆ, ಪಾಕಿಸ್ತಾನದ ದುರ್ಘಟನೆ ಕರ್ನಾಟಕದಲ್ಲೂ ಮರುಕಳಿಸುತ್ತಿತ್ತು.  ಜನರು ಡೀಸೆಲ್ ಸಂಗ್ರಹಿಸುವಾಗ ಸ್ಥಳೀಯ ಪೊಲೀಸರು ಇದ್ದರಾದರೂ ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜನರು ಡೀಸೆಲ್ ಸಂಗ್ರಹಿಸುತ್ತಿದ್ದರು.

ಇನ್ನು ಬೇರೆ ಮಾರ್ಗವಿಲ್ಲದೇ ಪೊಲೀಸರು ಕ್ರೇನ್ ಮೂಲಕ ಪಲ್ಟಿಯಾದ ಟ್ಯಾಂಕರ್ ಅನ್ನು ಸ್ಥಳಾಂತರಿಸುವ ಕಾರ್ಯ ಮಾಡಿದರು.

ಪಾಕಿಸ್ತಾನ ಟ್ಯಾಂಕರ್ ದುರಂತಕ್ಕೆ ಸಂಬಂಧಿಸಿದಂತೆ ವಿಶ್ವದ್ಯಾಂತ ವ್ಯಾಪಕ ಚರ್ಚೆಗಳಾಗುತ್ತಿದೆ. ಅಂದಿನ ಘಟನೆಯಲ್ಲಿ ಅಪಾಯದ ಮುನ್ಸೂಚನೆ ಇಲ್ಲದೇ ಬಿಟ್ಟಿ ಪೆಟ್ರೋಲ್ ಸಿಗುತ್ತದೆ ಎಂದು ಮುಗಿಬಿದ್ದ ಅಲ್ಲಿನ ಜನ ಪೆಟ್ರೋಲ್  ಸಂಗ್ರಹಿಸಲು ಹೋಗಿ ಪ್ರಾಣ ಬಿಟ್ಟಿದ್ದರು. ಇಂದಿಗೂ ಆ ಘಟನೆಗೆ ಸಂಬಂಧಿಸಿದ ವಿಡಿಯೋಗಳು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ಇದಾವುದರ ಪರಿವೇ ಇಲ್ಲದೆ ಕಲಬುರಗಿ ಜನ ಡೀಸೆಲ್ ಗಾಗಿ ಮುಗಿ ಬಿದ್ದಿರುವುದು ಮಾತ್ರ  ಶೋಚನೀಯ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!