ಬೆಂಗಳೂರು: ಕಳೆದ ಒಂದು ವಾರದಿಂದ ಬೆಂಗಳೂರಿನ ಮನೆಯೊಂದರಿಂದ 15 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ತಮ್ಮ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಬಂಡೆಪಾಳ್ಯ ಪೊಲೀಸ್ ಠಾಣೆ ಸರಹದ್ದಿನಲ್ಲಿ ಈ ಘಟನೆ ನಡೆದಿದೆ. ಹತ್ತಿರದ ಸರ್ಕಾರಿ ಶಾಲೆಯಲ್ಲಿ ಬಾಲಕಿ 9ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ದಿನಗೂಲಿ ನೌಕರರಾಗಿರುವ ಬಾಲಕಿಯ ಪೋಷಕರು ಮಂಗಮ್ಮನಪಾಳ್ಯದಲ್ಲಿ ವಾಸಿಸುತ್ತಿದ್ದಾರೆ.ಪೋಷಕರ ದೂರಿನ ಮೇರೆಗೆ ಪೊಲೀಸರು ಕಾಣೆಯಾದ ಕೇಸು ದಾಖಲಿಸಿಕೊಂಡಿದ್ದಾರೆ. ಬಾಲಕಿ ಸ್ಥಳೀಯ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದು ಆತ ಕೂಡ ಅಪ್ರಾಪ್ತನಾಗಿದ್ದಾನೆ. ಇಬ್ಬರೂ ಒಟ್ಟಿಗೆ ಇರುವುದನ್ನು ನೋಡಿ ಬಾಲಕಿಯ ತಾಯಿ ಇತ್ತೀಚೆಗೆ ಹುಡುಗನಿಗೆ ಬೈದಿದ್ದರಂತೆ ಎಂದು ಪೊಲೀಸರು ಹೇಳುತ್ತಾರೆ.
ತನಗೆ ಆದ ಅವಮಾನವನ್ನು ಸಹಿಸಲಾರದೆ ಬಾಲಕ ತಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂಬುದು ಪೋಷಕರ ದೂರು. ಆದರೆ ಪಲೀಸರು ಬಾಲಕನನ್ನು ಪ್ರಶ್ನಿಸಿದಾಗ ಯಾವುದೇ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ನಿಜವಾಗಿಯೂ ಬಾಲಕಿಯ ತಾಯಿ ಬೈದ ನಂತರ ಆತ ಆ ಹುಡಿಗೆ ಬಳಿ ಮಾತನಾಡಿರಲಿಲ್ಲ.
ಹೆಚ್ಎಸ್ಆರ್ ಲೇ ಔಟ್ ನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ ಎಂದು ವದಂತಿ ಹಬ್ಬಿತ್ತು. ಆದರೆ ಪೊಲೀಸರು ಹುಡುಕಾಡಿದಾಗ ಏನೂ ಸಿಕ್ಕಿರಲಿಲ್ಲ.