

ದಾವೋಸ್(ಸ್ವಿಡ್ಜರ್ಲಾಂಡ್): ಜಾಗತಿಕ ಹೂಡಿಕೆದಾರರಲ್ಲಿ ದೇಶದ ಅಗ್ರ ಹೂಡಿಕೆ ತಾಣವಾಗಿ ಕರ್ನಾಟಕದ ಸಾಮರ್ಥ್ಯದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಾವೋಸ್ ನಲ್ಲಿ ಮಾತನಾಡಿದ್ದಾರೆ. ಜಗತ್ತು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತದೆ ಎಂದು ಹೇಳಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಸಂದರ್ಭದಲ್ಲಿ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಡಿ ಕೆ ಶಿವಕುಮಾರ್, ದಾವೋಸ್ ನಲ್ಲಿ ಕಲಿಯಲು ಬಹಳಷ್ಟು ವಿಷಯಗಳಿವೆ. ಪ್ರಪಂಚದಾದ್ಯಂತದ ವಿವಿಧ ನಾಯಕರನ್ನು ನಾನು ಈ ಸಭೆಯಲ್ಲಿ ಭೇಟಿ ಮಾಡಿದ್ದೇನೆ. ಬೆಂಗಳೂರಿನ ಮೂಲಕ ಭಾರತವನ್ನು ವಿಶ್ವದ ನಾಯಕರು ನೋಡುತ್ತಿದ್ದಾರೆ ಎಂದರು.
ಈ ವಿಶ್ವ ಆರ್ಥಿಕ ವೇದಿಕೆಯಲ್ಲಿ ನಾನು ಅವರಿಗೆ ಕರ್ನಾಟಕದ ಮಹತ್ವವನ್ನು ಮತ್ತು ಅದು ಕೆಲಸ ಮಾಡಲು ಉತ್ತಮ ರಾಜ್ಯ ಎಂದು ಸಾರುತ್ತಿದ್ದೇನೆ ಎಂದರು.
ಮೊದಲ ಬಾರಿಗೆ ಇಲ್ಲಿಗೆ ಬಂದಿರುವ ಡಿ ಕೆ ಶಿವಕುಮಾರ್, ಕರ್ನಾಟಕವು ಉದ್ಯಮದ ಎಲ್ಲಾ ವಿಭಾಗಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ ಎಂದು ಹೇಳಿದರು.
ಕಳೆದ ವರ್ಷವೂ ಇಲ್ಲಿಗೆ ಬರಬೇಕಿತ್ತು ಆದರೆ ಬರಲು ಸಾಧ್ಯವಾಗಲಿಲ್ಲ, ತಂತ್ರಜ್ಞಾನ, ಆರೋಗ್ಯ ರಕ್ಷಣೆ ಮತ್ತು ಕೃತಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಲ್ಲಿ ಹಲವಾರು ಅವಕಾಶಗಳು ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿದೆ ಎಂದರು.
ಬೆಂಗಳೂರು ನಗರ ಪ್ರಶಸ್ತ
ಜಾಗತಿಕ ಹೂಡಿಕೆದಾರರು ಇಡೀ ರಾಜ್ಯದ ಚಲನಶೀಲತೆಯ ಕುರಿತು ನಾವು ಮಾಡುತ್ತಿರುವ ಕೆಲಸವನ್ನು ನೋಡುತ್ತಿದ್ದಾರೆ, ಅವರು ದ್ವಿತೀಯ ಶ್ರೇಣಿ ಮತ್ತು ತೃತೀಯ ಶ್ರೇಣಿ ನಗರಗಳಲ್ಲಿನ ಕೆಲಸದಲ್ಲಿಯೂ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ, ನಾವು ಮೆಟ್ರೋ, ಫ್ಲೈಓವರ್‌ಗಳು, ಅಂಡರ್ ಪಾಸ್ ಗಳು ಸುರಂಗಗಳು, ಇನ್ನೂ ಅನೇಕ ವಿಷಯಗಳಿಗೆ ಸಾಕಷ್ಟು ಹಣವನ್ನು ಹೂಡಿಕೆ ಮಾಡುತ್ತಿದ್ದೇವೆ. ಬೆಂಗಳೂರು ತುಂಬಾ ಸುರಕ್ಷಿತವಾಗಿದೆ, ಮಾಲಿನ್ಯವಿಲ್ಲ ಮತ್ತು ಹವಾಮಾನ ಮತ್ತು ಸಂಸ್ಕೃತಿ ಉತ್ತಮವಾಗಿದೆ ಎಂದು ಎಲ್ಲರೂ ಭಾವಿಸುತ್ತಾರೆ ಎಂದು ಹೇಳಿದರು.
ಡಿ ಕೆ ಶಿವಕುಮಾರ್ ಅವರು ಅಮೆರಿಕ, ಯುರೋಪ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವಾರು ವಿದೇಶಿ ಸರ್ಕಾರಿ ನಾಯಕರನ್ನು ಸಹ ಭೇಟಿ ಮಾಡುತ್ತಿದ್ದೇನೆ ಎಂದು ಹೇಳಿದರು.
ನಾವು ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡುತ್ತಿದ್ದೇವೆ, ನಮಗೆ ಸಿಗುತ್ತಿರುವುದು ಅಲ್ಪ
ವಿಶ್ವದ ಹೂಡಿಕೆದಾರರಿಗೆ ಆಸಕ್ತಿಯ ಕ್ಷೇತ್ರಗಳ ಕುರಿತು, ಅವರು ಜಿಸಿಸಿ, ಸೆಮಿಕಂಡಕ್ಟರ್‌ಗಳು, ಕೃತಕ ಬುದ್ಧಿಮತ್ತೆ, ಸ್ಟಾರ್ಟ್‌ಅಪ್‌ಗಳು ಮತ್ತು ಆರೋಗ್ಯ ರಕ್ಷಣೆಯನ್ನು ಪಟ್ಟಿ ಮಾಡಿದರು.
ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದ ಆರ್ಥಿಕತೆಯು ತುಂಬಾ ಪ್ರಬಲವಾಗಿದೆ, ಇದು ಅನೇಕ ರಾಜ್ಯಗಳಿಗಿಂತ ಹೆಚ್ಚಿನ ತೆರಿಗೆಗಳನ್ನು ನೀಡುತ್ತದೆ. ಕೇಂದ್ರವು ಕರ್ನಾಟಕದಿಂದ ಶೇಕಡಾ 43 ರಷ್ಟು ತೆರಿಗೆಯನ್ನು ಪಡೆಯುತ್ತದೆ, ಆದರೆ ನಾವು ಶೇಕಡಾ 30 ರಷ್ಟು ಮಾತ್ರ ಕೇಂದ್ರದಿಂದ ಪಡೆಯುತ್ತೇವೆ, ಅದು ಬೇರೆ ವಿಚಾರ ಎಂದರು.
ಜಗತ್ತು ಭಾರತವನ್ನು ಕರ್ನಾಟಕ ಮೂಲಕ ಅದರಲ್ಲೂ ಬೆಂಗಳೂರು ಮೂಲಕ ನೋಡುತ್ತಿದೆ ಎಂದರು.
Advertisement