ರಾಜ್ಯ

ಮೌಢ್ಯ ನಿಷೇಧ ಕಾಯ್ದೆ: ಮುಂದಿನ ಅಧಿವೇಶನದಲ್ಲಿ ಜಾರಿ

Shilpa D
ಬೆಂಗಳೂರು: ರಾಜ್ಯಾದ್ಯಾಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮೌಢ್ಯ ನಿಷೇಧ ಕಾಯ್ದೆಯ ಕರಡುಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ.
ಸರ್ಕಾರ ತರಲು ಉದ್ದೇಶಿಸಿರುವ ಮೌಢ್ಯ ನಿಷೇಧ ಮಸೂದೆ ಸೌಮ್ಯ ರೂಪದಲ್ಲಿ ಇರಲಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಮಸೂದೆಯನ್ನು ಪರಾಮರ್ಶಿಸಲು ನನ್ನ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ  ಸಚಿವ ಸಂಪುಟ ಉಪಸಮಿತಿ ಕರಡು ಮಸೂದೆಯನ್ನು ಪರಿಷ್ಕರಿಸಿದೆ.  ಸದ್ಯ ಅದು ಕಾನೂನು ಇಲಾಖೆ ಪರಿಶೀಲನೆಯಲ್ಲಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು’ ಎಂದು ತಿಳಿಸಿದರು.
ಮಡೆ ಸ್ನಾನ, ಜ್ಯೋತಿಷ್ಯದ ಹೆಸರಿನಲ್ಲಿ ಜನರ ಶೋಷಣೆ, ಮೌಢ್ಯದ ಹೆಸರಿನಲ್ಲಿ ಮಹಿಳೆಯರ ಮೇಲಿನ ಹಿಂಸೆ, ಅಘೋರ ಅಚರಣೆ, ಮಾಟ ಮಂತ್ರ  ನಿರ್ಬಂಧಿಸಲು ಮಸೂದೆ ಅವಕಾಶ ಕಲ್ಪಿಸಲಿದೆ. ಕೇವಲ ಕಾನೂನು ಮಾಡುವುದರಿಂದ ಮೌಢ್ಯಾಚರಣೆ ತಡೆಯಲಾಗದು. ಜನರಲ್ಲಿ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ’ ಎಂದು ಅವರು ಹೇಳಿದರು.
ಮೌಢ್ಯ ನಿಷೇಧ ಮಸೂದೆ 2016ರ ಜುಲೈ 13ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿತ್ತು. ಹಿರಿಯ ಸಚಿವರು ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಸಚಿವ ಸಂಪುಟ ಉಪ ಸಮಿತಿಗೆ ವಹಿಸಲಾಗಿತ್ತು.
ಈ ಸಂಪ್ರದಾಯ ಅನುಕರಣೆಗಳಿಂದ ಉಂಟಾಗುವ  ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. 
SCROLL FOR NEXT