ರಾಜ್ಯ

ನಗರದ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲೂ ಇನ್ಮುಂದೆ ಏಕರೂಪ ದರ ಜಾರಿಗೆ!

Manjula VN
ಬೆಂಗಳೂರು: ನಗರದಲ್ಲಿರುವ ಪ್ರತಿಷ್ಠಿತ 32 ಪ್ರಮುಖ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಇನ್ನು ಮುಂದೆ ಏಕಪೂರ ದರ ಜಾರಿಗೆ ತರಲು ಬೆಂಗಳೂರು ಅಸೋಸಿಯೇಷನ್ ಆಫ್ ಡಯಾಗ್ನೋಸ್ಟಿಕ್ ಸೆಂಟರ್ ತೀರ್ಮಾನಿಸಿದೆ.
ನಗರದಲ್ಲಿರುವ ವಿವಿಧ ಡಯಾಗ್ನೋಸ್ಟಿಕ್ ಗಳಲ್ಲಿ ಒಂದೊಂದು ರೀತಿಯ ದರಗಳನ್ನು ವಿಧಿಸಲಾಗುತ್ತಿತ್ತು. ಒಂದೇ ಸೇವೆಗೆ ಕೆಲವು ಕಡೆಗಳಲ್ಲಿ ರೂ.5 ಸಾವಿರ ಪಡೆದರೆ, ಇನ್ನು ಕೆಲವು ಕಡೆಗಳಲ್ಲಿ ರೂ.12 ಸಾವಿರ ಪಡೆಯುತ್ತಿದ್ದರು. ವೈದ್ಯರು ಸಿಟಿ ಸ್ಕ್ಯಾನ್ ಹಾಗೂ ಎಂಆರ್'ಐ ಸ್ಕ್ಯಾನ್ ಬರೆದುಕೊಟ್ಟರೆ, ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗುತ್ತಿತ್ತು. 
ಹೀಗಾಗಿ ಜನರ ಸಮಸ್ಯೆಗಳನ್ನು ನಿವಾರಿಸಲು ಬೆಂಗಳೂರು ಅಸೋಸಿಯೇಷನ್ ಆಫ್ ಡಯಾಗ್ನೋಸ್ಟಿಕ್ ಸೆಂಟರ್ ನಿರ್ಧಾರ ಕೈಗೊಂಡಿದ್ದು, ನಗರದ ಪ್ರತಿಷ್ಠಿತ ಡಯಾಗ್ನೋಸ್ಟಿಕ್ ಸೆಂಟರ್ ಸೇರಿ ಒಂದು ಸಂಘಟನೆ ಮಾಡಿಕೊಂಡು ಈ ಮೂಲಕ ಏಕರೂಪ ದರ ಜಾರಿಗೆ ತರಲು ನಿರ್ಧರಿಸಿದೆ 
ವೈದ್ಯಕೀಯ ತುರ್ತು ಸಮಯದಲ್ಲಿ ಜನರು ಸಮಸ್ಯೆ ಎದುರಿಸುತ್ತಿರುತ್ತಾರೆ. ಏಕರೂಪ ದರ ನಿಗದಿಯಿಂದ ಕೇಂದ್ರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಿವಿಧ ಡಯಾಗ್ನೋಸ್ಟಿಕ್ ಗಳಲ್ಲಿ ವಿವಿಧ ದರಗಳನ್ನು ನಿಗದಿಪಡಿಸಲಾಗಿರುತ್ತದೆ. ಆದರೆ, ಪ್ರಮುಖ ಡಯಾಗ್ನೋಸ್ಟಿಕ್ ಕೇಂದ್ರಗಳುಮಾತ್ರ ಸಿಟಿ ಹಾಗೂ ಎಂಆರ್'ಐ ಸ್ಕ್ಯಾನ್ ಗಳ ದರ ಇಳಿಸಲು ನಿರ್ಧರಿಸಿವೆ ಎಂದು ಅಸೋಸಿಯೇಷನ್ ಆಫ್ ಡಯಾಗ್ನೋಸ್ಟಿಕ್ ಸೆಂಟರ್ ಹೇಳಿದೆ.
ಏಕರೂಪ ದರ ಜಾರಿಯಾಗಿರುವ ಹಿನ್ನಲೆಯಲ್ಲಿ ನಗರದ  ಆನಂದ್, ಎಲ್ ಬಿಟ್, ಇಶಾ, ಕನ್ವಾ, ಮೆಡಿಸಿಟಿ ಹಾಗೂ ಇನ್ನಿತರೆ ಡಯಾಗ್ನೋಸ್ಟಿಕ್ ಸೆಂಟರ್ ಗಳು ಸಿಟಿ ಹಾಗೂ ಎಂಆರ್ ಐ ಸ್ಕ್ಯಾನ್ ಗಳಿಗೆ ನೂತನ ದರಗಳನ್ನು ಅಳವಡಿಕೆ ಮಾಡಿಕೊಂಡಿವೆ. 
ಅಸೋಸಿಯೇಷನ್ ಆಫ್ ಡಯಾಗ್ನೋಸ್ಟಿಕ್ ಸೆಂಟರ್ ನ ಈ ನಿರ್ಧಾರವನ್ನು ಹೊಸ್ಮಾಟ್ ನಿರ್ದೇಶಕ ಹಾಗೂ ಮೂಳೆಚಿಕಿತ್ಸೆಯ ಮುಖ್ಯಸ್ಥ ಥಾಮಸ್ ಚಂಡಿ ಅವರು ಸ್ವಾಗತಿಸಿದ್ದಾರೆ. 33 ಪ್ರಮುಖ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಏಕರೂಪ ದರ ಜಾರಿಗೆ ತರುವುದರಿಂದ ರೋಗಿಗಳಿಗೆ ಸಹಾಯಕವಾಗಲಿದೆ ಎಂದಿದ್ದಾರೆ. 
SCROLL FOR NEXT