ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಊಟ ಕೊಡಿಸುವ ಆಮೀಷ ನೀಡಿ ಹೂ ಮಾರುವ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಅಪರಿಚಿತ ವ್ಯಕ್ತಿಯೊಬ್ಬ ಊಟ ಕೊಡಿಸುವುದಾಗಿ ಹೇಳಿ ಹೂ ಮಾರುವ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ...

ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಊಟ ಕೊಡಿಸುವುದಾಗಿ ಹೇಳಿ ಹೂ ಮಾರುವ  ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಹದಿಮೂರು ವರ್ಷದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ. ಬುಧವಾದ ಮಧ್ಯಾಹ್ನ ಕರೆದೊಯ್ದು ದುಷ್ಕರ್ಮಿಯೊಬ್ಬ ಈ ಕೃತ್ಯ ನಡೆಸಿದ್ದಾನೆ.

ಊಟ ಕೊಡಿಸುತ್ತೇನೆಂದು ಆಸೆ ತೋರಿಸಿ ಕರೆದೊಯ್ದ ಕಿಡಿಗೇಡಿ ಆ ಬಳಿಕ ರಾಜನಗುಂಟೆ- ದೊಡ್ಡಬಳ್ಳಾಪುರ ರಸ್ತೆಯ  ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಅದಾದ ನಂತರ ವಾಪಸ್‌ ಸಂಜಯನಗರಕ್ಕೆ ಕರೆದುಕೊಂಡು ಬಂದು ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ನಂತರ ಬಾಲಕಿ ತನ್ನ ಪೋಷಕರ ಬಳಿ ಹೇಳಿದ್ದಾಳೆ. ನಂತರ ಬಾಲಕಿ ಪೋಷಕರು ಸಂಜಯನಗರ ಠಾಣೆಗೆ ದೂರು ನೀಡಿದ್ದು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂನಲ್ಲಿ AN-32 ಸಾರಿಗೆ ವಿಮಾನ ಪತನ: ಐವರು IAF ಸಿಬ್ಬಂದಿ ಸಾವು; ತನಿಖೆಗೆ ಆದೇಶ

ಪ್ರೀತಿಯ ಬೆಲೆ ಗೊತ್ತಿಲ್ಲ?: ವಿಚ್ಛೇದನ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ನಟಿ ನಿವೇದಿತಾ ಗೌಡ

ಪ್ರಧಾನಿ ಮೋದಿ 'ಅಘೋರಿ', ಔರಂಗಜೇಬನ ನಾಡಿನಿಂದ ಬಂದವರು: ಸಂಜಯ್ ರಾವತ್

ಬಿಹಾರದಲ್ಲಿ 132 ಅಡಿ ಮೊಬೈಲ್ ಟವರ್ ಅನ್ನೇ ಕದ್ದೊಯ್ದ ಖತರ್ನಾಕ್ ಕಳ್ಳರು! ಬೆಳಕಿಗೆ ಬಂದಿದ್ದೇ ರೋಚಕ

ಭೂ ಪರಿಹಾರ ಕೊಡದೇ ಸತಾಯಿಸುತ್ತಿದ್ದ ಬಿಟಿಡಿಎ ಸಿಬ್ಬಂದಿ: ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ರೈತ! Video

SCROLL FOR NEXT