ರಾಜ್ಯ

ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆ ದುರಂತ: ರಥ ಬೀಳುವುದಕ್ಕೂ ಮುನ್ನ ನಡೆದಿತ್ತು ಪವಾಡ

Shilpa D

ಬಳ್ಳಾರಿ: ಕಳೆದು ತಿಂಗಳು ಬಳ್ಳಾರಿ ಜಿಲ್ಲೆಯ ಕೊಟ್ಟೂರೇಶ್ವರ ಜಾತ್ರೆಯಲ್ಲಿ ದೇವರ ರಥ ಬಿದ್ದು ಭಕ್ತರನ್ನು ಆತಂಕಕ್ಕೀಡು ಮಾಡಿತ್ತು. ಆದ್ರೆ ರಥ ಬೀಳುವ ಮೊದಲೇ ಅದರ ಬಗ್ಗೆ ಸೂಚನೆ ಸಿಕ್ಕಿತ್ತು ಎಂದು ಹೇಳಲಾಗುತ್ತಿದೆ.

ರಥ ಬೀಳುವ ಮೂರು ನಿಮಿಷಗಳ ಮೊದಲು ದೇವಸ್ಥಾನಕ್ಕೆ ಸೇರಿದ್ದ ಗೂಳಿಯೊಂದು ಜನರಿದ್ದ ಗುಂಪಿಗೆ ನುಗ್ಗಿ ಭಕ್ತರನ್ನ ಓಡಿಸಿದೆ. ಆಶ್ಚರ್ಯ ಅಂದ್ರೆ ರಥ ಬೀಳುವ ಜಾಗದಲ್ಲಿದ್ದ ಭಕ್ತರನ್ನೇ ಚದುರಿಸಿದ್ದು, ಯಾರಿಗೂ ಹೆಚ್ಚಿನ ಪ್ರಮಾಣದಲ್ಲಿ ಗಾಯವಾಗಿಲ್ಲ. ಬಸವಣ್ಣನ ಎಚ್ಚರಿಕೆಯಿಂದಲೇ 60 ಅಡಿ ರಥ ನೆಲಕ್ಕೆ ಉರುಳಿದ್ರೂ ಯಾವುದೇ ಸಾವು ಸಂಭವಿಸಿಲ್ಲ,  ಇದು ಪವಾಡವೋ, ಕಾಕತಾಳಿಯವೋ, ದೇವರ ಕೃಪೆಯೋ ಅಥವಾ ದೇವರ ರೂಪದಲ್ಲಿ ಬಸವನೇ ಬಂದು ಭಕ್ತರನ್ನು ಕಾಪಾಡಿದನೋ. ಒಟ್ಟಿನಲ್ಲಿ ಆಗಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಲು ಈ ಬಸವ ಕಾರಣವಾಗಿರುವುದಕ್ಕೆ ಕೊಟ್ಟೂರಿನಲ್ಲೀಗ ಬಸವನ ಆರಾಧನೆ ನಡೆಯುತ್ತಿದೆ. ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ ಫೆಬ್ರವರಿ 22ರಂದು ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರುಬಸವೇಶ್ವರ ರಥೋತ್ಸವದ ವೇಳೆಯಲ್ಲಿ ಚಕ್ರದ ಅಚ್ಚು ಮುರಿದು ರಥ ಮಗುಚಿ ಬಿದ್ದಿತ್ತು.

SCROLL FOR NEXT