ಗೌರವ ಸಲ್ಲಿಸಲು ಯಡ್ಯೂರಪ್ಪ ಕಾಲಿಗೆ ಬೀಳುತ್ತಿರುವ ಕಾರ್ಯಕರ್ತರು: ವಿಡಿಯೋ ವೈರಲ್ 
ರಾಜ್ಯ

ಗೌರವ ಸಲ್ಲಿಸಲು ಯಡ್ಯೂರಪ್ಪ ಕಾಲಿಗೆ ಬೀಳುತ್ತಿರುವ ಕಾರ್ಯಕರ್ತರು: ವಿಡಿಯೋ ವೈರಲ್

ಸಂಸ್ಕೃತಿ, ಶಿಸ್ತಿನ ಪಕ್ಷ ಎಂದೇ ಹೇಳಿಕೊಳ್ಳುವ ಬಿಜೆಪಿಯಲ್ಲಿ ತಮಿಳುನಾಡು ರಾಜಕಾರಣದ ಮಾದರಿಯ ಶಿಸ್ತು ಬೆಳೆಯುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ರಾಜ್ಯ ಬಿಜೆಪಿಯ ಅಧ್ಯಕ್ಷ, ಮಾಜಿ ಸಿಎಂ ಯಡಿಯೂರಪ್ಪ ಅವರ

ಬೆಂಗಳೂರು: ಸಂಸ್ಕೃತಿ, ಶಿಸ್ತಿನ ಪಕ್ಷ ಎಂದೇ ಹೇಳಿಕೊಳ್ಳುವ ಬಿಜೆಪಿಯಲ್ಲಿ ತಮಿಳುನಾಡು ರಾಜಕಾರಣದ ಮಾದರಿಯ ಶಿಸ್ತು ಬೆಳೆಯುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ರಾಜ್ಯ ಬಿಜೆಪಿಯ ಅಧ್ಯಕ್ಷ, ಪ್ರಭಾವಿ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಅವರ ನಡೆ ಇಂತಹ ಪ್ರಶ್ನೆ ಎದುರಾಗಲು ಕಾರಣವಾಗಿದೆ. 
ರಾಜಕಾರಣಿಗಳು, ಪ್ರಮುಖವಾಗಿ ಅಧಿಕಾರದಲ್ಲಿರುವ ರಾಜಕಾರಣಿಗಳ ಸೋಮಾರಿತನ, ದುರಹಂಕಾರ, ದರ್ಪ ಅಂಗರಕ್ಷಕರಿಂದ, ಪೊಲೀಸ್ ಪೇದೆಗಳಿಂದ ಶೂ ಲೇಸ್ ಕಟ್ಟಿಸಿಕೊಳ್ಳುವ ರೀತಿಯ ಪ್ರಕರಣಗಳಿಗೆ ಸೀಮಿತವಾಗಿತ್ತು ಎಂದುಕೊಂಡಿದ್ದೆವು ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಇದನ್ನೂ ಮೀರಿಸುವಂತಹ ಪ್ರಕರಣವನ್ನು ಬಯಲು ಮಾಡಿದ್ದು, ಬಿಜೆಪಿಯ ಕಾರ್ಯಕರ್ತರು ಗೌರವ ಸಲ್ಲಿಸಲು ಯಡಿಯೂರಪ್ಪನವರ ಕಾಲಿಗೆ ಎರಗುತ್ತಿರುವುದು ದೃಶ್ಯಾವಳಿಯಲ್ಲಿ ಸೆರೆಯಾಗಿದೆ. 
ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಒಂದಷ್ಟು ಜನ ಕಾರ್ಯಕರ್ತರು ಯಡಿಯೂರಪ್ಪನವರ ಕಾಲು ಮುಟ್ಟಿ ನಮಸ್ಕರಿಸುತ್ತಿರುವುದು ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಪಕ್ಷದ ಶಾಸಕರು, ಕಾರ್ಯಕರ್ತರು ನಮಸ್ಕರಿಸುತ್ತಿದ್ದ ರೀತಿ ಹಾಗೂ ಎಐಎಡಿಎಂಕೆ ಪಕ್ಷದಲ್ಲಿದ್ದ ಸಂಸ್ಕೃತಿಯನ್ನೇ ನೆನಪಿಸುತ್ತಿದೆ. ಸಂಸ್ಕೃತಿ, ಶಿಸ್ತಿನ ಪಕ್ಷ ಎಂದೇ ಹೇಳಿಕೊಳ್ಳುವ ಬಿಜೆಪಿಯಲ್ಲಿ ಇಂತಹ ಬೆಳವಣಿಗೆ ನಡೆದಿರುವುದು ಅಚ್ಚರಿ ಮೂಡಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel