ಬೆಂಗಳೂರು: ತಂದೆ-ತಾಯಿಯ ಕಣ್ಣೇದುರೆ ರೌಡಿ ಶೀಟರ್‌ನೊಬ್ಬನನ್ನು ಮನೆಯಿಂದ ಹೊರಗೆಳೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಕಮಲಾನಗರದ ಚಂದ್ರಪ್ಪ ರಸ್ತೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ಸುನಿಲ್ (28) ಎಂಬ ರೌಡಿಶೀಟರ್ ನ ಮನಗೆ ನುಗ್ಗಿದ ನಾಲ್ಕೈದು ದುಷ್ಕರ್ಮಿಗಳು, ಆತನನ್ನು ಮನೆಯಿಂದ ಹೊರಗೆ ಎಳೆದು ಕುಟುಂಬದವರ ಎದುರೇ ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಮಗನನ್ನು ಬಿಟ್ಟು ಬಿಡಿ ಎಂದು ತಾಯಿ ಅಂಗಲಾಚಿ ಬೇಡಿಕೊಂಡರೂ ಬಿಡದ ರೌಡಿಗಳು ಬರ್ಬರವಾಗಿ ಕೊಚ್ಚಿದ್ದಾರೆ.
ಹತ್ಯೆಯ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವಣ ನಿರ್ಮಾಣವಾಗಿದ್ದು ಬಸವೇಶ್ವರನಗರ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.
ಹಳೆ ವೈಷಮ್ಯದ ಹಿನ್ನಲೆಯಲ್ಲಿ ಸ್ಪಾಟ್ ನಾಗನ ಕಡೆಯವರು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ದೃಶ್ಯವನ್ನು ಕೆಲವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ನೋಡಲು ಭಯಾನಕವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics