ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ವಾಮಾಚಾರ: ಮಾಟ ಮಂತ್ರಗಳಿಗೆ ಬಲಿಯಾಗುತ್ತಿದ್ದಾರೆ ಮುಗ್ಧರು

ರಾಜ್ಯ ಸರ್ಕಾರ ಒಂದೆಡೆ ಮೂಢನಂಬಿಕೆ ವಿರೋಧಿ ಕಾಯಿದೆ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಆದರೆ ಮತ್ತೊಂದೆಡೆ ರಾಜ್ಯದ್ಯಾಂತ ವಾಮಾಚಾರ ಎಗ್ಗಿಲ್ಲದೇ ..

ಬೆಂಗಳೂರು: ರಾಜ್ಯ ಸರ್ಕಾರ ಒಂದೆಡೆ ಮೂಢನಂಬಿಕೆ ವಿರೋಧಿ ಕಾಯಿದೆ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಆದರೆ ಮತ್ತೊಂದೆಡೆ ರಾಜ್ಯದ್ಯಾಂತ ವಾಮಾಚಾರ ಎಗ್ಗಿಲ್ಲದೇ ನಡೆಯುತ್ತಿದೆ. ಇತ್ತೀಚೆಗೆ ಮಾಗಡಿಯಲ್ಲಿ 10 ವರ್ಷದ ಬಾಲಕಿಯನ್ನು ಬಲಿ ಕೊಟ್ಟ ಪ್ರಕರಣ ಇದಕ್ಕೆ ಜ್ವಲಂತ ಉದಾಹರಣೆ.

ವಾಮಾಚಾರಕ್ಕೆ ಆಗಾಗ್ಗೆ ಮಾನವ ಬಲಿ, ನಿಂಬೆಹಣ್ಣು, ಮೆಣಸಿನಕಾಯಿ, ಕೆಂಪು ಬಟ್ಟೆಯಲ್ಲಿ ಕುಂಕುಮ ಸುತ್ತಿ ಇಡುವುದು ಕಾಣಿಸುತ್ತದೆ. ಈ ಹಳೇಯ ವಾಮಾಚಾರ ಪದ್ಧತಿಗೆ ಬಗ್ಗೆ ಜನರಿಗೆ ಇನ್ನೂ ಜಾಗೃತಿ ಮೂಡಿಲ್ಲ. ರಾಜ್ಯಾದ್ಯಂತ ವಾಮಾಚಾರ ಬೇರು ಬಿಟ್ಟಿದೆ.

ಚಾಮರಾಜನಗರ, ಕಲಬುರಗಿ ಮತ್ತು ಬಳ್ಳಾರಿಗಳಂತ ಹಿಂದುಳಿದ ಜಿಲ್ಲೆಗಳಲ್ಲಿ ಬ್ಲ್ಯಾಕ್ ಮ್ಯಾಜಿಕ್  ಸಾರಸಗಟಾಗಿ ಮುಂದುವರಿದಿದೆ. ನಿಧಿಗಾಗಿ, ಶತ್ರಗಳ ನಾಶಕ್ಕಾಗಿ ಮಹಿಳೆ ವಶಕ್ಕಾಗಿ ಮತ್ತು ಚುನಾವಣೆಗಳಿಗಾಗಿ ಈ ವಾಮಾಚಾರ ನಡೆಯುತ್ತಿದೆ.

ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬ್ಲ್ಯಾಕ್ ಮ್ಯಾಜಿಕ್ ಭಯ ಹಲವರನ್ನು ಕಾಡುತ್ತಿದೆ. ಇಂಥ ಜಿಲ್ಲೆಗಳಲ್ಲಿ ಜನ  ಬೇರೆಯವರ ಮನೆಗಳಲ್ಲಿ ನೀರು ಕುಡಿಯಲು ಭಯಪಡುತ್ತಾರೆ,

ಇಂಥ ಪ್ರದೇಶಗಳಲ್ಲಿ ನೀರು ಕುಡಿಯುವುದರಿಂದ ತಾವು ಅನಾರೋಗ್ಯಕ್ಕೊಳಗಾಗಿ, ಸಾಯುತ್ತೇವೆಂಬ ಭಯದಲ್ಲಿ ಬದುಕುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಈ ವಾಮಾಚಾರ ಎಂಬುದು ಬಹು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ, ಚುನಾವಣೆ ವೇಳೆ ಬೂತ್ ಗಳಲ್ಲಿ ನಿಂಬೆ ಹಣ್ಣು ಬೊಂಬೆ ಮುಂತಾದವುಗಳು ಕಾಣುತ್ತವೆ. ಇವುಗಳನ್ನು ತಮ್ಮ ವಿರೋಧಿಗಳನ್ನು ಸೋಲಿಸಲು ಬಳಸುತ್ತಾರೆ.

ವಾಮಾಚಾರದ ಮತ್ತೊಂದು ಪ್ರಮುಖ ಆಘಾತಕಾರಿ ಅಂಶವೆಂದರೇ ಮಾನವ ಬಲಿ. 2015 ರ ಮಾರ್ಚ್ ತಿಂಗಳಲ್ಲಿ  ಚಾಮರಾಜನಗರ ಜಿಲ್ಲೆಯ  ಸಂತೇಮಾರನಹಳ್ಳಿಯಲ್ಲಿ ಇಬ್ಬರು ದಲಿತರ ತಲೆ ಕತ್ತರಿಸಲಾಗಿತ್ತು. ಇದು ವಾಮಾಚಾರಕ್ಕೆ ನಡೆದ ಬಲಿಯಾಗಿತ್ತು. ಇಂಥಹ ಹಲವು ಪ್ರಕರಣಗಳು ನಡೆಯುತ್ತವೆ, ಆದರೆ ಪೊಲೀಸರು ಇವುಗಳನ್ನು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸುತ್ತಾರೆ.

ಕರ್ನಾಟಕ ಮತ್ತು ತೆಲಂಗಾಣಗಳಲ್ಲಿ ಭಾನಾಮತಿ ಆಚರಣೆ ಸರ್ವೆ ಸಾಮಾನ್ಯವಾಗಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ  ಮಾಂತ್ರಿಕನೊಬ್ಬ ಕಮ್ಯುನಿಸ್ಟ್ ಮುಖಂಡ ಎಂ ಬಿ ಸಜ್ಜನ್  ಅವರ ತಂದೆ ವಿರೂಪಾಕ್ಷಪ್ಪ ಸಜ್ಜನ್ ಅವರ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ತಲೆಬುರುಡೆಯನ್ನು ತನ್ನ ಎಡಗೈಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಎಂದು ಕಲಬುರಗಿಯ ಫರ್ತಾಬಾದ್ ನಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಇದುವರೆಗೂ ಆರೋಪಿಯ ಪತ್ತೆಯಾಗಿಲ್ಲ. ಭಾನಾಮತಿ ಮತ್ತು ವಾಮಾಚಾರ ಎಂಬುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಸಂಗತಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT