ರಾಜ್ಯ

ಶಾಸಕರ ಹಾಜರಾತಿ ನಿಯಮಬದ್ಧಗೊಳಿಸಲು ಬಯೊಮೆಟ್ರಿಕ್‌ ವ್ಯವಸ್ಥೆಗೆ ಚಿಂತನೆ: ಸ್ಪೀಕರ್

Shilpa D
ಬೆಂಗಳೂರು: ವಿಧಾನ ಸಭೆಗೆ ಶಾಸಕರ ಹಾಜರಾತಿ ನಿಯಮಬದ್ಧಗೊಳಿಸಲು ಬಯೊಮೆಟ್ರಿಕ್‌ ವ್ಯವಸ್ಥೆ ಜಾರಿಮಾಡಲು ಚಿಂತನೆ ನಡೆಸಲಾಗಿದೆ ಎಂದು ಸ್ಪೀಕರ್ ಕೋಳಿವಾಡ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಸಕರ ಹಾಜರಾತಿ, ಕಲಾಪದಲ್ಲಿ ಪಾಲ್ಗೊಳ್ಳುವ ಮಾಹಿತಿ ಸಂಗ್ರಹಿಸುವ ತಂತ್ರಾಂಶ ಅಭಿವೃದ್ಧಿಪಡಿಸಲು ಯೋಚಿಸಲಾಗಿದೆ ಎಂದು ತಿಳಿಸಿದ್ದಾರೆ.ವಿಧಾನಸಭೆ ಕಲಾಪದಲ್ಲಿ  ಸಕ್ರಿಯವಾಗಿ ಪಾಲ್ಗೊಳ್ಳದ ಶಾಸಕರ ಮಾಹಿತಿಯನ್ನು ಆಯಾ ದಿನವೆ ಬಹಿರಂಗಪಡಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದ್ದಾರೆ,
ಕಲಾಪದಲ್ಲಿ ಶಾಸಕರು ಸಕ್ರಿಯವಾಗಿ ಭಾಗಿಯಾಗುವುದಿಲ್ಲ, ಜ್ವಲಂತ ಚರ್ಚೆಗಳು ನಡೆಯುವಾಗ ಸಭಾಂಗಣ ಖಾಲಿ ಇರುತ್ತದೆ, ಶಾಸಕರು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ  ತಮ್ಮ ವಯಕ್ತಿಕ ಕೆಲಸ ಕಾರ್ಯಗಳ ಸಲುವಾಗಿ ಹೊರಹೋಗುತ್ತಾರೆ ಎಂಬ ಟೀಕೆ ಇದೆ. ಇದನ್ನು ತಪ್ಪಿಸಲು ಈ ಬಾರಿ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 
ಹಾಜರಾತಿ ಕಡ್ಡಾಯಗೊಳಿಸಿದರು ಸದನದಲ್ಲಿ ಶಾಸಕರು ಇರುವುದಿಲ್ಲ. ತಡವಾಗಿ ಬಂದವರಿಗೆ ಸಹಿ ಹಾಕಲು ಅವಕಾಶ ಇರುವುದಿಲ್ಲ. ಆಯಾ ದಿನದ ಕಲಾಪ ಮುಗಿದ ಬಳಿಕ ಶಾಸಕರು ಎಷ್ಟು ಹೊತ್ತು ಸದನದಲ್ಲಿದ್ದರು, ಪ್ರಶ್ನೆ ಕೇಳಿ, ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆಯೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು  ಎಂದು ಹೇಳಿದರು.
SCROLL FOR NEXT