ಮರಿಗಾದಿ ಅವರ ಮನೆ ಪರಿಶೀಲಿಸಿ ಹೊರಬರುತ್ತಿರುವ ಅಧಿಕಾರಿಗಳು 
ರಾಜ್ಯ

ಹೂವಿನಹಡಗಲಿ ಪ್ರಭಾರ ಉಪ ನೋಂದಣಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಅಕ್ರಮ ಆಸ್ತಿ ಜೊತೆಗೆ ಅಧಿಕಾರಿಗೆ 3 ಪತ್ನಿಯರು

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪ್ರಭಾರ ಉಪ ನೋಂದಣಾಧಿಕಾರಿ ಕೆ. ಮರಿಗಾದಿ ಅವರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ಗುರುವಾರ ಬೆಳಿಗ್ಗೆ ...

ಹೊಸಪೇಟೆ: ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪ್ರಭಾರ ಉಪ ನೋಂದಣಾಧಿಕಾರಿ ಕೆ. ಮರಿಗಾದಿ ಅವರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ಗುರುವಾರ ಬೆಳಿಗ್ಗೆ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಮಾಡಿದೆ.

ಮರಿಗಾದಿ ಅವರ ಬಳಿ  ಆದಾಯಕ್ಕಿಂತ ಅಧಿಕ ಆಸ್ತಿಯಿರುವ ಜೊತೆಗೆ ಮೂರು ಪತ್ನಿರು ಇರುವುದು ಎಸಿಬಿ ದಾಳಿ ವೇಳೆ ಬೆಳಕಿಗೆ ಬಂದಿದೆ.

ಬೆಳಗ್ಗೆ 7 ಗಂಟೆ ಸುಮಾರಿಗೆ ಹೊಸಪೇಟೆಯ ಬಸವೇಶ್ವರ ನಗರ, ಕಡಲಬಾಳು ಗ್ರಾಮ ಮತ್ತು ಹರಿಗಬೊಮ್ಮನಹಳ್ಳಿ ಹಾಗೂ ಹಬವಿನಹಡಗಲಿಯ ಕಚೇರಿ ಮೇಲೆ ಅಧಿಕಾರಿಗಳು ಏಕಕಲಾದಲ್ಲಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ  3.5 ಲಕ್ಷ ನಗದು ಮತ್ತು ಹೊಸಪೇಟೆಯಲ್ಲಿ ಮರಿಗಾದಿ ಮಗನ ಹೆಸರಿನಲ್ಲಿ ಅಪಾರ್ಟ್‌ಮೆಂಟ್‌ ಇರುವುದೂ ಪತ್ತೆಯಾಗಿದೆ. ಒಂದು ಕಾರು, ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ’ ಎಂದು ಎಸಿಬಿ ಎಸ್ ಪಿ ಅನಿತಾ ಹಡ್ಡೆಣ್ಣನವರ್ ತಿಳಿಸಿದ್ದಾರೆ.

ಹುಲಿಗೆಮ್ಮ ಹಾಗೂ ಸುಧಾ, ಮರಿಗಾದಿ ಅವರ ಮೊದಲ ಹಾಗೂ ಮೂರನೇ ಹೆಂಡತಿ ಎಂದು ದಾಳಿ ವೇಳೆ ಹೇಳಿಕೊಂಡಿದ್ದಾರೆ. ಆದರೆ, ವಿವಾಹ ನೋಂದಣಿಗೆ ಸಂಬಂಧಿಸಿದ ಯಾವ ದಾಖಲೆಗಳನ್ನು ಹಾಜರುಪಡಿಸಿಲ್ಲ. ಇನ್ನೊಬ್ಬರು (ಎರಡನೇ) ಪತ್ನಿ ಯಲ್ಲಮ್ಮ ವಿಚ್ಛೇದನ ಕೋರಿ ಸಿರುಗುಪ್ಪ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ.ಸುಧಾ ಅವರ ಹೆಸರಿನಲ್ಲಿ ಎಂಟು ಕಡೆಗಳಲ್ಲಿ ನಿವೇಶನ, ಮನೆ ಇರುವುದು ಪತ್ತೆಯಾಗಿದೆ’ ಎಂದು ಕಲಬುರ್ಗಿ ಹಾಗೂ ಬಳ್ಳಾರಿ ಎ.ಸಿ.ಬಿ ಎಸ್ಪಿ ಅನಿತಾ ಹದ್ದೆಣ್ಣನವರ  ತಿಳಿಸಿದ್ದಾರೆ.

ಬಸವೇಶ್ವರ ಬಡಾವಣೆಯಲ್ಲಿ ಕೆ. ಮರಿಗಾದಿ ಅವರ ಮೊದಲ ಹೆಂಡತಿ ಹುಲಿಗೆಮ್ಮ, ಮೂರನೇ ಹೆಂಡತಿ ಸುಧಾ ಹಾಗೂ ಮರಿಗಾದಿ ಆಪ್ತ, ಡೀಡ್‌ ರೈಟರ್‌ ಅಲ್ತಾಫ್‌ ಮನೆ ಸೇರಿವೆ. ಮರಿಗಾದಿ ಆಪ್ತರಾದ ಕಡಲಬಾಳು ಗ್ರಾಮದ ಎ.ಎಂ.ಕೊಟ್ರೇಶ, ಕಡಲೆಕಾಳು ಕ್ಯಾಂಪಿನ ಸೂರ್ಯನಾರಾಯಣ ಅವರ ಮನೆಗಳಲ್ಲಿನ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಹೈದರಾಬಾದ್ ನೀಡಿದ 220 ರನ್ ಟಾರ್ಗೆಟ್ ಬೆನ್ನತ್ತಿ ಗೆದ್ದ ಪಂಜಾಬ್ ಕಿಂಗ್ಸ್!

ಹಳ್ಳ ಹಿಡೀತಾ ಸಂಧಾನ ಮಾತುಕತೆ?: ಹಾರ್ಮೊಜ್ ದಾಟಿದ ಅಮೆರಿಕದ 2 ಯುದ್ಧ ನೌಕೆಗಳು!

ಒಂದು ಕಡೆ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ, ಮತ್ತೊಂದು ಕಡೆ ಲೆಬನಾನ್‌ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

SCROLL FOR NEXT