ಸಾಂದರ್ಭಿಕ ಚಿತ್ರ 
ರಾಜ್ಯ

ಬೆಳಗಾವಿ: ಸಾರ್ವಜನಿಕರ ಎದುರೇ ಬೆಂಕಿಹಚ್ಚಿಕೊಂಡು ರೈಲಿಗೆ ತಲೆಕೊಟ್ಟ ವಿದ್ಯಾರ್ಥಿನಿ

20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸಾರ್ವಜನಿಕರ ಎದುರೇ ಬೆಂಕಿಹಚ್ಚಿಕೊಂಡು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ...

ಬೆಳಗಾವಿ: 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸಾರ್ವಜನಿಕರ ಎದುರೇ ಬೆಂಕಿಹಚ್ಚಿಕೊಂಡು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಬೆಳಗಾವಿಯ ಟಿಳಕವಾಡಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿ ಮರಾಠ ಮಂಡಲ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಮೊದಲ ವರ್ಷ ಬಿಇ ವಿದ್ಯಾರ್ಥಿನಿ ಸಂಜನಾ ಅನಗೋಳಕರ್ (19) ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಂಜನಾ ಬೆಳಗಾವಿಯ ಟಿಳಕವಾಡಿಯ ಒಂದನೇ ರೈಲ್ವೆ ಗೇಟ್ ಬಳಿ ಮೈಮೇಲೆ ಸೀಮೆಎಣ್ಣೆ ಸುರಿದು ಕೊಂಡು, ಬೆಂಕಿಹಚ್ಚಿಕೊಂಡು ಬಳಿಕ ವೇಗವಾಗಿ ಬರುತ್ತಿದ್ದ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿ ಪತ್ತೆಯಾದ ಆಕೆಯ ಬ್ಯಾಗ್ ನಲ್ಲಿ ಸಿಕ್ಕ ಕೆಲವು ದಾಖಲೆಗಳ ಆಧಾರದ ಮೇಲೆ ವಿದ್ಯಾರ್ಥಿನಿ ಗುರುತು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೊದಲ ವರ್ಷದ ಬಿಇ ವಿದ್ಯಾರ್ಥಿನಿಯಾಗಿರುವ ಸಂಜನಾ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಸಂಜನಾ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ED ದೂರಿನ ಹಿಂದೆ ಬಿಜೆಪಿಯ ಕೈವಾಡವಿದೆ: ಚಿನ್ನದ ಗಣಿಗಾರಿಕೆ ಕುರಿತ ಆರೋಪ ಸಾಬೀತುಪಡಿಸಲಿ- ಸತೀಶ್ ಜಾರಕಿಹೊಳಿ ಸವಾಲು!

ನಾಗೇಂದ್ರ ಆಯ್ತು, ಈಗ ಡಿಕೆಶಿ ಸಂಪುಟದ 2ನೇ ವಿಕೆಟ್ ಪತನಕ್ಕೆ ಎದುರು ನೋಡ್ತಾ ಇರುವ ಬಿಜೆಪಿ!

"ನಾವು ಕೈ ಜೋಡಿಸೋಣ": ಗಲ್ವಾನ್ ಸಂಘರ್ಷದ ಬಳಿಕ ಮೊದಲ ಮಾತುಕತೆ ವೇಳೆ Narendra Modi ಗೆ Xi Jinping ಸಂದೇಶ; ಭಾರತದೆದುರು ಮಂಡಿಯೂರಿದ ಚೀನಾ?

ಪ್ರಶ್ನೆ ಪತ್ರಿಕೆ ಸೋರಿಕೆ ಸಹಿಸಲ್ಲ: KPSC ವಿರುದ್ಧ ಹೋರಾಟಕ್ಕೆ CJP ಎಂಟ್ರಿ: ನೊಂದ ಅಭ್ಯರ್ಥಿಗಳಿಗೆ ನ್ಯಾಯದ ಭರವಸೆ

ಮೈಸೂರಿನ 'ಪೇಟೆ ರೌಡಿ' ಪೊಲೀಸ್ ಠಾಣೆಗೆ ನುಗ್ಗಿದ್ರೆ ನಾನು ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುತ್ತೇನೆ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನ್