ರಾಜ್ಯ

ವಾಚ್ ಎಫೆಕ್ಟ್: ಚಿನ್ನದ ಪದಕ, ಬೆಳ್ಳಿ ಗೋವು ಉಡುಗೊರೆ ಬೇಡ ಎಂದ ಸಿಎಂ ಸಿದ್ದು

Manjula VN
ಕಲಬುರಗಿ: ಹ್ಯೂ ಬ್ಲೋಟ್ ವಾಚ್ ಪ್ರಕರಣದ ಬಳಿಕ ದುಬಾರಿ ಬೆಲೆಯ ಉಡುಗೊರೆ ಕಂಡರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರ ಉಳಿಯುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಕಲಬುರಗಿ ವಿಶ್ವವಿದ್ಯಾಲಯಲ್ಲಿ ಶನಿವಾರ ನಡೆದ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಉದ್ಘಾಟನಾ ಕಾರ್ಯಕ್ರಮ ಸಾಕ್ಷಿಯಾಯಿತು. 
ಉತ್ತರಮ ರಾಜ್ಯ ಬಜೆಟ್ ಮಂಡಿಸಿದ್ದಕ್ಕಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನೀಡಿದ್ದ ಬಂಗಾರದ ಪದಕ ಹಾಗೂ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಸ್ಥಾಪಿಸಿದ್ದಕ್ಕಾಗಿ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ನೀಡಿದ್ದ ಬೆಳ್ಳಿ ಗೋವು ಉಡುಗೊರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರಸ್ಕರಿಸಿದ್ದಾರೆ. 
ನಂತರ ಉಡುಗೊರೆ ನಿರಾಕರಣೆ ಬಗ್ಗೆ ಮಾತನಾಡಿದ ಅವರು, ದುಬಾರಿ ವಾಚ್ ಪ್ರಕರಣ ವಿವಾದವಾಗಿ, ರಾಜಕೀಯವಾಗಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದ ಬಳಿಕ ಮೈಪೂರಾ ಕಣ್ಣಾಗಿರಿಸಿಕೊಂಡಿದ್ದೇನೆ. ಇದೀಗ ನಾನು ಯಾವುದೇ ಬೆಲೆಬಾಳುವ ಉಡುಗೊರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳಿದರು. 
ಗೆಲೆಯ ಡಾ.ವರ್ಮಾ ಉಡುಗೊರೆ ನೀಡಿದ್ದ ವಾಚ್ ಕಟ್ಟಿಕೊಂಡೇ ಪಡಬಾರದ ಫಜೀತಿ ಪಟ್ಟಿದ್ದೇನೆ. ಮತ್ತೊಂದು ಉಡುಗೊರೆಯನ್ನು ತೆಗೆದುಕೊಳ್ಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸುವುದು ನನಗಿಷ್ಟವಿಲ್ಲ. ಈಗ ರಾಯರೆಡ್ಡಿ ನೀಡಿದ ಚಿನ್ನದ ಪದಕ ಹಾಗೂ ದರ್ಶನಾಪುರ ನೀಡಿರುವ ಬೆಳ್ಳಿ ಗೋವು ಎರಡನ್ನೂ ಗುಲ್ಬರ್ಗ ವಿಶ್ವವಿದ್ಯಾಲಯ ಆಡಳಿತಕ್ಕೆ ಕೊಡುಗೆ ರೂಪದಲ್ಲಿ ಬಿಟ್ಟು ಹೋಗುತ್ತಿದ್ದೇನೆ. ಅವು ಎರಡೂ ಉಡುಗೊರೆಗಳು ಇಲ್ಲೇ ಇರಲಿ ನನ್ನ ಹಾಗೂ ರಾಯರೆಡ್ಡಿಯವರ ನೆನಪಿಗೆ ಭದ್ರವಾಗಿರಲಿ ಎಂದು ತಿಳಿಸಿದರು. 
SCROLL FOR NEXT