ಎಸ್.ಎಂ.ಕೃಷ್ಣ 
ರಾಜ್ಯ

ಎಸ್.ಎಂ.ಕೃಷ್ಣ, ಅಮಿತ್ ಶಾ ಭೇಟಿ ಇಂದು: ವಾರದೊಳಗೆ ಬಿಜೆಪಿ ಸೇರ್ಪಡೆ ಸಾಧ್ಯತೆ

ಹಿರಿಯ ರಾಜಕೀಯ ನಾಯಕ ಎಸ್.ಎಂ.ಕೃಷ್ಣ ಅವರು ಸೋಮವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಸಾ ಅವರನ್ನು ಭೇಟಿ ಮಾಡಲಿದ್ದು, ವಾರದೊಳಗಾಗಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆಂದು...

ಬೆಂಗಳೂರು: ಹಿರಿಯ ರಾಜಕೀಯ ನಾಯಕ ಎಸ್.ಎಂ.ಕೃಷ್ಣ ಅವರು ಸೋಮವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಸಾ ಅವರನ್ನು ಭೇಟಿ ಮಾಡಲಿದ್ದು, ವಾರದೊಳಗಾಗಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ.
ಇಂದು ನವದೆಹಲಿಗೆ ತೆರಳಲಿರುವ ಎಸ್.ಎಂ.ಕೃಷ್ಣ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಭೇಟಿ ವೇಳೆ ಬಿಜೆಪಿ ಸೇರ್ಪಡೆ ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆಂದು ಹೇಳಲಾಗುತ್ತಿದೆ. 
ಇನ್ನು ಕೃಷ್ಣ ಬಿಜೆಪಿ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಹಾಗೂ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಅವರು, ಕೃಷ್ಣ ಅವರನ್ನು ಬಿಜೆಪಿ ಸೇರ್ಪಡೆಗೊಳಿಸಿಕೊಳ್ಳದಂತೆ ಅಮಿತ್, ಪ್ರಧಾನಿ ಮೋದಿ ಮತ್ತು ಅರುಣ್ ಜೇಟ್ಲಿಯವರಿಗೆ ಪತ್ರವನ್ನು ಬರೆದಿದ್ದಾರೆ. 
ಈ ಕುರಿತಂತೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೃಷ್ಣ ಅವರು ಹಲವು ಅಕ್ರಮಗಳನ್ನು ಭಾಗಿಯಾಗಿದ್ದಾರೆ. ಅಳಿಯ ಸಿದ್ಧರ್ಥ್ ಅವರು ಅಕ್ರಮ ಆಸ್ತಿ ಗಳಿಸಲು ಸಹಾಯ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಹೋರಾಟ ನಡೆಸುತ್ತಿದ್ದು, ಹೀಗಾಗಿ ಕೃಷ್ಣ ಅವರನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಜೊತೆ ಯಾವುದೇ ವ್ಯವಹಾರಿಕ, ಆತ್ಮೀಯತೆಯಿಲ್ಲ, ಅಪಪ್ರಚಾರ ಮಾಡುವವರಿಗೆ ದೇವರೇ ಬುದ್ಧಿ ಕೊಡಲಿ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ

ಮತ್ತೆ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದಲ್ಲಿ ರೈಲು ಕೈಕೊಟ್ಟಿದ್ದೇಕೆ? ಅಸಲಿ ಕಾರಣ ಬಿಚ್ಚಿಟ್ಟ BMRCL

ಪಾಕಿಸ್ತಾನದಂತೆ ಭಾರತದಲ್ಲೂ ಬಹುಪತ್ನಿತ್ವ ಜಾರಿ ಮಾಡಿ: ವಿಧಾನಸಭೆಯಲ್ಲಿ NCP ಶಾಸಕಿ ಸನಾ ಮಲಿಕ್ ವಿವಾದಾತ್ಮಕ ಹೇಳಿಕೆ

ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: SIT ತನಿಖೆ ವಿರುದ್ಧ ಅಯೋಧ್ಯೆ ಅರ್ಚಕರು ಆಕ್ರೋಶ; ಸಿಎಂ ಯೋಗಿಗೆ ಹೇಳಿದ್ದೇನು?

ಕೆ ಆರ್ ಪುರ ತ್ರಿವಳಿ ಕೊ*ಲೆ ಪ್ರಕರಣ: ಕೊನೆಗೂ ಪ್ರಿಯಕರ ಕೆನ್ನೆತ್ ಬಂಧನ, ಆರೋಪಿ ಶ್ವೇತಾಗೆ 7 ದಿನ ಪೊಲೀಸ್ ಕಸ್ಟಡಿ