ಬೆಂಗಳೂರು : ದೇವನಹಳ್ಳಿ ಜೆಡಿಎಸ್ ಶಾಸಕ ಪಿಳ್ಳ ಮುನಿಶಾಮಪ್ಪ ಅವರ ಗನ್‌ಮ್ಯಾನ್‌ನಿಂದ ರಿವಾಲ್ವರ್ ಕದ್ದೊಯ್ದಿದ್ದ ಇಬ್ಬರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಕುಳಾಯಿ ಗ್ರಾಮದ ಧನುಷ್ (19) ಹಾಗೂ ಆಶ್ರಯ ಕಾಲೊನಿಯ ವಿಜಯ್ (21) ಎಂಬುವವರನ್ನು ಬಂಧಿಸಲಾಗಿದೆ.
ಫೆಬ್ರವರಿ 24 ರಂದು ಗನ್ ಮ್ಯಾನ್ ನರಸಿಂಹ ಮೂರ್ತಿ ಉನ್ನಿಕೃಷ್ಣನ್ ರಸ್ತೆಯ ತಿರುಮಲ ಡಾಬಾ ಬಳಿಕುಸಿದು ಬಿದ್ದಿದ್ದರು ಈ ವೇಳೆ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ನರಸಿಂಹಮೂರ್ತಿ ಅವರಿಂದ ಸರ್ವಿಸ್ ರಿವಾಲ್ವರ್, 2 ಮೊಬೈಲ್‌ಗಳು ಹಾಗೂ 6.5 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ನರಸಿಂಹ ಮೂರ್ತಿ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಗನ್‌ಮ್ಯಾನ್‌ನಿಂದ ದೋಚಿದ ಮೊಬೈಲ್‌ಗಳನ್ನು ಆರೋಪಿಗಳು ಮಂಗಳೂರಿನ ಬೈಕಂಪಾಡಿಯ ಮೊಬೈಲ್ ಅಂಗಡಿಯೊಂದಕ್ಕೆ ಮಾರಾಟ ಮಾಡಿದ್ದರು. ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು.ಐಎಂಇಐ ಸಂಖ್ಯೆ ಆಧರಿಸಿ ತನಿಖೆ ಪ್ರಾರಂಭಿಸಿದಾಗ, ಮೊಬೈಲ್ ಯಾವ ಪ್ರದೇಶದಿಂದ ನಿರ್ವಹಣೆಯಾಗುತ್ತಿದೆ ಎಂಬುದು ತಿಳಿಯಿತು. ಮೊಬೈಲ್ ಖರೀದಿಸಿದವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಧನುಷ್‌ನ ವಿವರ ಸಿಕ್ಕಿತು.