ಮಡಿಕೇರಿ: ಬೈಕ್ ಮೇಲೆ ಆನೆ ದಾಳಿ ಮಾಡಿದ ಪರಿಣಾಮ ಕೆಳಗೆ ಬಿದ್ದ ಯುವತಿಯನ್ನು ಆನೆ ತುಳಿದಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿರಾಜ ಪೇಟೆ ತಾಲೂಕಿನ ತಿಥಿಮಥಿ ಯಲ್ಲಿ ನಡೆದಿದೆ.
ಸುಫಾನಾ ಮುಸ್ತಾಫಾ ಮೃತ ಯುವತಿ, 19 ವರ್ಷದ ಈಕೆ ವಿರಾಜಪೇಟೆಯ ಕಾವೇರಿ ಮಹಿಳಾ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ತನ್ನ ಸಹೋದರನ ಜೊತೆ ಬೈಕ್ ನಲ್ಲಿ ತೆರಳುವಾಗ ಆನೆ ದಾಳಿ ಮಾಡಿದೆ, ಈ ವೇಳೆ ಕೆಳಗೆ ಬಿದ್ದ ಆಕೆಯನ್ನು ಆನೆ ತುಳಿದು ಸಾಯಿಸಿದೆ, ಆಕೆಯ ಸಹೋದರ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ಘಟನೆ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಆನೆಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ವಿರಾಜಪೇಟೆ ಡಿಸಿಎಫ್ ಡಾ. ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics