ಬೆಂಗಳೂರು: ರಾಜ್ಯದಲ್ಲಿರುವ ನಕಲಿ ವೈದ್ಯರಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ನೊಂದಣಿ ವಿಧೇಯಕಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಮಾಡಲು ನಿರ್ಧಾರ ಕೈಗೊಂಡಿದೆ.
ರಾಜ್ಯದ ವೈದ್ಯರು ವೈದ್ಯಕೀಯ ವಿಜ್ಞಾನದಲ್ಲಾಗುತ್ತಿರುವ ಬದಲಾವಣೆ ಹಾಗೂ ಸಂಶೋಧನೆಗಳ ಕುರಿತು ಜ್ಞಾನ ಹೊಂದುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಹಾಗೂ ನಕಲಿ ವೈದ್ಯರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ನೋಂದಣಿ ವಿಧಾಯಕಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಸರ್ಕಾರ ಮಾಡಿದೆ. ಈ ತಿದ್ದುಪಡಿ ವಿಧೇಯಕವು ನಿನ್ನೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು, ವಿಧೇಯಕದಂತೆ, ಇನ್ನು ಮುಂದೆ ರಾಜ್ಯದ ವೈದ್ಯರು ಸರ್ಕಾರದ ಬಳಿ ನೋಂದಣಿ ಮಾಡಿಸಿಕೊಳ್ಳಬೇಕಿದ್ದು, ನೋಂದಣಿಯಾದ ಬಳಿಕ ಆಧಾರ್ ಹಾಗೂ ಬಯೋಮೆಟ್ರಿಕ್ ವಿವರಗಳನ್ನು ಸಲ್ಲಿಸುವ ಮೂಲಕ ಪ್ರತೀ ಐದು ವರ್ಷಕ್ಕೊಮ್ಮೆ ನೋಂದಣಿಯನ್ನು ನವೀಕರಣ ಮಾಡಿಸಿಕೊಳ್ಳಬೇಕಿದೆ.
ಈ ಕುರಿತಂತೆ ವಿಧಾನಸಭೆಯಲ್ಲಿ ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿಣ ಶರಣ ಪ್ರಕಾಶ್ ಪಾಟೀಲ್ ಅವರು, ರಾಜ್ಯದಲ್ಲಿ ಒಟ್ಟು 1.16 ಲಕ್ಷ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 10 ಸಾವಿರ ವೈದ್ಯರು ಹೊರ ದೇಶದಲ್ಲಿ ನೆಲೆಯೂರಿದ್ದಾರೆ. 10 ವೈದ್ಯರೂ ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಹಿಂದಿದ್ದ ಕಾಯ್ದೆಯ ಪ್ರಕಾರ ವೈದ್ಯರು ಒಮ್ಮೆ ನೋಂದಣಿ ಮಾಡಿಸಿಕೊಂಡರೆ ಸಾಕಿತ್ತು. ಇದರಿಂದ ನಕಲಿ ವೈದ್ಯರ ಸಂಖ್ಯೆಯ ಕೂಡ ಹೆಚ್ಚಾಗತೊಡಗಿದೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿತ್ತು. ನಕಲಿ ವೈದ್ಯರಿಗೆ ಕಡಿವಾಣ ಹಾಕಲುವ ಸಲುವಾಗಿ ಐದು ವರ್ಷಕ್ಕೊಮ್ಮೆ ನವೀಕರಣ ಮಾಡಿಸಬೇಕೆಂದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವೈದ್ಯರು ಸದಾ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಲೇ ಇರಬೇಕು. ಹೊಸ ಹೊಸ ಆವಿಷ್ಕಾರಗಳು ಚಿಕಿತ್ಸಾ ಪದ್ಧತಿಗಳ ಕುರಿತು ಅವರಿಗೆ ಅರಿವು ಮೂಡಬೇಕು. ಈ ನಿಟ್ಟಿನಲ್ಲಿ ಮುಂದುವರೆಕೆ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳಲ್ಲಿ ವೈದ್ಯರು ಪಾಲ್ಗೊಳ್ಳಬೇಕು.
ರಾಜ್ಯದ ಕೇಂದ್ರ ಸ್ಥಳದಲ್ಲಿ ಅಥವಾ ಪ್ರಾದೇಶಿಕ ಸ್ಥಳದಲ್ಲಿ ಜಿಲ್ಲಾ ಕೇಂದ್ರ ಅಥವಾ ಬೋಧನಾ ಆಸ್ಪತ್ರೆ/ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುವ ವಿಚಾರಸಂಕಿರಣಗಳಲ್ಲಿ ವೈದ್ಯರು ಪಾಲ್ಗೊಳ್ಳಬೇಕು. ಕರ್ನಾಟಕ ವೈದ್ಯಕೀಯ ಪರಿಷತ್ತು ನಡೆಸುವ ಅಥವಾ ವೈದ್ಯಕೀಯ ಪರಿಷತ್ತು ಅನುಮೋದಿಸಬಹುದಾದ ವೈದ್ಯಕೀಯ ಸಮ್ಮೇಳನಗಳು/ವಿಚಾರಸಂಕಿರಣ/ಕಾರ್ಯಾಗಾರಗಳಲ್ಲಿ ವೈದ್ಯರು ಭಾಗವಹಿಸಬೇಕೆಂದು ಹೇಳಿದ್ದಾರೆ.
ಪ್ರಾಕ್ಟೀಸ್ ಮಾಡುತ್ತಿರುವ ವೈದ್ಯರುಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. 65 ವರ್ಷ ದಾಟಿದ ವೈದ್ಯರುಗಳಿಗೆ, ರಾಜಕಾರಣ ಮೊದಲಾಗಿ ಬೇರೆಬೇರೆ ವಲಯಗಳಲ್ಲಿರುವವರಿಗೆ ವಿನಾಯ್ತಿಯನ್ನು ನೀಡಲಾಗುತ್ತದೆ. ವೈದ್ಯನಾಗಿ ವೈದ್ಯರ ಹಿತ ಕಾಯಲು ಈ ತಿದ್ದುಪಡಿ ಮಾಡುತ್ತಿಲ್ಲ. ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಮತ್ತು ಉನ್ನತೀಕರಣಗೊಂಡ ಸೇವೆ ಸಿಗಬೇಕೆಂಬ ಆಶಯಗೊಂದಿಗೆ ತಿದ್ದುಪಡಿ ಮಂಡಿಸಿರುವುದಾಗಿ ತಿಳಿಸಿದರು.
ಪ್ರಾಕ್ಟೀಸ್ ಮಾಡುತ್ತಿರುವ ವೈದ್ಯರುಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. 65 ವರ್ಷ ದಾಟಿದ ವೈದ್ಯರುಗಳಿಗೆ, ರಾಜಕಾರಣ ಮೊದಲಾಗಿ ಬೇರೆ ಬೇರೆ ವಲಯಗಳಲ್ಲಿರುವವರಿಗೆ ವಿನಾಯ್ತಿ ನೀಡಲಾಗುವುದು ಎಂದರು. ವೈದ್ಯನಾಗಿ ವೈದ್ಯರ ಹಿತ ಕಾಯಲು ಈ ತಿದ್ದುಪಡಿ ಮಾಡುತ್ತಿಲ್ಲ. ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಮತ್ತು ಉನ್ನತೀಕರಣಗೊಂಡ ಸೇವೆ ಸಿಗಬೇಕೆಂಬ ಆಶಯದೊಂದಿಗೆ ತಿದ್ದುಪಡಿ ಮಂಡಿಸಿರುವುದಾಗಿ ಹೇಳಿದರು.