ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಾಯವಾಣಿಗೆ ಬರುವ ಹಲವಾರು ಕರೆಗಳು ಲೈಂಗಿಕ ಸಹಕಾರ ಕೋರಿ ಬರುವ ಕರೆಗಳಾಗಿದ್ದು ಅಸಭ್ಯ ಭಾಷೆಗಳನ್ನು ಕೇಳಬೇಕಾದ ಪರಿಸ್ಥಿತಿ ಇಲ್ಲಿನ ಸಿಬ್ಬಂದಿಗಳದ್ದು.
ಹೀಗೆ ಕಿರುಕುಳಕ್ಕೆ ಒಳಗಾಗುವ ಸಹಾಯವಾಣಿಗಳು ವನಿತಾ ಸಹಾಯವಾಣಿ 1091 ಮತ್ತು ಹಿರಿಯ ನಾಗರಿಕಾಗಿ ಇರುವ 1090 ಸಂಖ್ಯೆಗೆ ಪ್ರತಿನಿತ್ಯ ಹಲವಾರು ಕರೆಗಳು ಬರುತ್ತಿದ್ದು ಅವುಗಳಲ್ಲಿ ಅನೇಕ ಕರೆಗಳು ಲೈಂಗಿಕ ಪ್ರಚೋದನೆ ನೀಡುವ ಅಸಭ್ಯ, ಕೆಟ್ಟ ಭಾಷೆಗಳನ್ನು ಬಳಸಿ ಮಹಿಳಾ ಸಿಬ್ಬಂದಿಗಳಲ್ಲಿ ಮಾತನಾಡುತ್ತಾರೆ. ಆದರೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.
''ಇಂತಹ ಕರೆಗಳು ಬರುವುದು ದಿನಚರಿಯಾಗಿದೆ. ವಾರಾಂತ್ಯಗಳಲ್ಲಿ ಮತ್ತು ರಜಾದಿನಗಳಲ್ಲಿ ಇಂತಹ ಕರೆಗಳು ಅಸಂಖ್ಯಾತ ಬರುತ್ತವೆ. ಕರೆ ಮಾಡುವವರು ಲೈಂಗಿಕತೆಯನ್ನು ಬಯಸಿ ಕೇಳುತ್ತಾರೆ. ನೀವು ಈ ತರಹ ಮಾತನಾಡಬೇಡಿ ಎಂದಾಗ ನಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ಬೈಯಲು ಆರಂಭಿಸುತ್ತಾರೆ. ನಾವು ಆಗ ಕರೆಯನ್ನು ಕಡಿತಗೊಳಿಸುತ್ತೇವೆ. ಆ ಸಂದರ್ಭದಲ್ಲಿ ನಮಗೆ ತೀಕ್ಷ್ಣ ಪ್ರತಿಕ್ರಿಯೆ ಕೊಡಬೇಕೆಂದು ಅನಿಸುತ್ತದೆ. ಆದರೆ ಇದು ಸಹಾಯವಾಣಿಯಾಗಿರುವುದರಿಂದ ನಾವು ಘನತೆ ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ವನಿತಾ ಸಹಾಯವಾಣಿಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ವೊಬ್ಬರು ಹೇಳುತ್ತಾರೆ.
ನಾವು ಈ ಬಗ್ಗೆ ದೂರು ನೀಡಿಲ್ಲ. ಆದರೆ ಆಯುಕ್ತರ ಕಚೇರಿಯಲ್ಲಿರುವ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ.
ಹಿರಿಯ ನಾಗರಿಕರ ಸಹಾಯವಾಣಿಯಲ್ಲಿ ಕೆಲಸ ಮಾಡುವ ಸಂಧ್ಯಾ, ನಾವು ದಿನಕ್ಕೆ 12 ಗಂಟೆ ಕೆಲಸ ಮಾಡುತ್ತೇವೆ. ಒಂದು ದಿನ ಕೂಡ ಕೆಟ್ಟ ಕರೆ ಬರದೆ ನಮ್ಮ ದಿನ ಕೊನೆಯಾಗುವುದಿಲ್ಲ. ಪುರುಷರು ಕರೆ ಸ್ವೀಕರಿಸಿದರೆ ಕರೆ ಕಡಿತವಾಗುತ್ತದೆ. ಸ್ವಲ್ಪ ಹೊತ್ತಿನ ನಂತರ ಮತ್ತೆ ಕರೆ ಮಾಡುತ್ತಾರೆ ಎನ್ನುತ್ತಾರೆ.
ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ನ ಹಿರಿಯ ವ್ಯವಸ್ಥಾಪಕಿ ಸ್ವಾತಿ ಮಾತನಾಡಿ, ಹಲವಾರು ಸಮಯಗಳಿಂದ ಹೀಗೆ ನಡೆಯುತ್ತಿದೆ. ಇಂತಹ ಕರೆಗಳಿಂದಾಗಿ ನಿಜವಾಗಿಯೂ ಸಂಕಷ್ಟದಲ್ಲಿರುವವರು ಕರೆ ಮಾಡಿದಾಗ ಸ್ವೀಕರಿಸಲು ಮನಸ್ಸಾಗುವುದಿಲ್ಲ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics