ಬೆಂಗಳೂರು: ಖಾಸಗಿ ಗುರುತು ಮಾಹಿತಿಯನ್ನು ಹೊಂದಿರುವ ಪ್ರಮುಖ ಸರ್ಕಾರಿ ವೆಬ್ ಸೈಟ್ ಗಳಲ್ಲಿ ಮಾಹಿತಿ ಭದ್ರತಾ ವ್ಯವಸ್ಥೆ ಕೊರತೆಯಿಂದ ದೇಶದ ನಾಗರಿಕರ ಆಧಾರ್ ಸಂಖ್ಯೆ ಸೋರಿಕೆಯಾಗಿ ಗುರುತು ಮತ್ತು ಹಣಕಾಸಿನ ವಂಚನೆಗೆ ಸಾಮಾನ್ಯವಾಗಿ ಬಲಿಯಾಗುತ್ತಾರೆ ಎಂದು ಸಂಶೋಧನಾ ವರದಿ ತಿಳಿಸಿದೆ.
ಅಂತರ್ಜಾಲ ಮತ್ತು ಸೊಸೈಟಿ ಕೇಂದ್ರದ ಅಂಬರ್ ಸಿನ್ಹಾ ಮತ್ತು ಶ್ರೀನಿವಾಸ್ ಕೊಡಲಿ ಸಲ್ಲಿಸಿದ ಪತ್ರಿಕೆಯಲ್ಲಿ ನಾಲ್ಕು ಸರ್ಕಾರಿ ವೆಬ್ ಸೈಟ್ ಗಳನ್ನು ವಿಶ್ಲೇಷಿಸಲಾಗಿದ್ದು ವೈಯಕ್ತಿಕ ಗುರುತು ಮಾಹಿತಿಗೆ ಸೇರಿದ 13 ಕೋಟಿಗೂ ಅಧಿಕ ಆಧಾರ್ ಸಂಖ್ಯೆಗಳು ವೆಬ್ ಸೈಟ್ ನಲ್ಲಿ ದೊರಕುತ್ತಿದ್ದು ಭದ್ರತೆಯ ಕೊರತೆ ಕಂಡುಬರುತ್ತದೆ.
ಕ್ರಿಯೇಟಿವ್ ಕಾಮನ್ಸ್ ಅಡಿ ವರದಿ ಪ್ರಕಟಗೊಂಡಿದ್ದು, ಆಧಾರ್ ನ ಮಾಹಿತಿ ಭದ್ರತಾ ಅಭ್ಯಾಸಗಳು: ಖಾಸಗಿ ಹಣಕಾಸು ಮಾಹಿತಿಯೊಂದಿಗೆ ಆಧಾರ್ ಸಂಖ್ಯೆಗಳ ಸಾರ್ವಜನಿಕ ಲಭ್ಯತೆಯ ದಾಖಲೆಗಳು ವರದಿ ನಿನ್ನೆ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು.
ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಆಂಧ್ರ ಪ್ರದೇಶ ಸರ್ಕಾರದ ಚಂದ್ರಣ್ಣ ಭೀಮ ಯೋಜನೆ, ದಿನ ನಿತ್ಯದ ಆನ್ ಲೈನ್ ಪಾವತಿ ವರದಿ, ಆಂಧ್ರ ಪ್ರದೇಶ ಸರ್ಕಾರದ ನರೇಗಾ ಯೋಜನೆಯ ಅಂಕಿಅಂಶಗಳನ್ನು ಸಿನ್ಹಾ ಮತ್ತು ಕೊಡಾಲಿ ಅಧ್ಯಯನ ಮಾಡಿದ್ದಾರೆ.
ಹಣ ಪಾವತಿ ಮತ್ತು ಬ್ಯಾಂಕ್ ವಹಿವಾಟಿಗೆ ಆಧಾರ್ ನ್ನು ಬಳಸುವ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳನ್ನು ನಾವು ಆಯ್ಕೆ ಮಾಡಿಕೊಂಡೆವು. ಈ ಪೋರ್ಟಲ್ ಗಳಲ್ಲಿ ವೈಯಕ್ತಿಕ ದಾಖಲೆಗಳು ಮತ್ತು ಮಾಹಿತಿಗಳು ಹಾಗೂ ಸೂಕ್ಷ್ಮ ವಿಷಯಗಳನ್ನು ಕಂಡಿದ್ದೇವೆ ಎಂದು ವರದಿ ಹೇಳಿದೆ.
ವೆಬ್ ಸೈಟ್ ನಲ್ಲಿ ಸಿಗುವ ಸಂಖ್ಯೆಗಳ ಪ್ರಕಾರ ಈ ನಾಲ್ಕು ಪೋರ್ಟಲ್ ಗಳಲ್ಲಿ ಸೋರಿಕೆಯಾದ ಆಧಾರ್ ಸಂಖ್ಯೆಗಳ ಸಂಖ್ಯೆ 130ರಿಂದ 135 ದಶಲಕ್ಷವಾಗಿದ್ದು, ಸೋರಿಕೆಯಾದ ಬ್ಯಾಂಕ್ ಖಾತೆ ಸಂಖ್ಯೆಗಳು 100 ದಶಲಕ್ಷವಾಗಿದೆ.
ಇದು ಪಿಂಚಣಿ ಮತ್ತು ಉದ್ಯೋಗ ಯೋಜನೆಗೆ ಸಂಬಂಧಪಟ್ಟ ಎರಡು ಪ್ರಮುಖ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಮಾಹಿತಿ ಸೋರಿಕೆಯಾದ ಬಗ್ಗೆ ಮಾತ್ರವಾಗಿದೆ.ನೇರ ವರ್ಗಾವಣೆ ತೆರಿಗೆಗೆ ಸಹ ಆಧಾರ್ ಸಂಖ್ಯೆಯನ್ನು ಬಳಸಿಕೊಳ್ಳಲಾಗುತ್ತದೆ. ಆಧಾರ್ ಸಂಖ್ಯೆಯನ್ನು ಸಂಪರ್ಕಿಸುವ ಸರ್ಕಾರದ ಯೋಜನೆಗಳಿಗೆ ಮಾಹಿತಿ ಇನ್ನಷ್ಟು ಸೋರಿಕೆಯಾಗುವ ಅಪಾಯವಿದೆ ಎಂದು ಅಂಕಿಅಂಶ ತಿಳಿಸಿದೆ.
ಆಧಾರ್ ಹಣ ಪಾವತಿ ಅಸುರಕ್ಷಿತ: ಆಧಾರ್ ಮೂಲಕ ಪಾವತಿ ವ್ಯವಸ್ಥೆಯ ಮೂಲಕ ಹಣಕಾಸಿನ ವಂಚನೆ ನಡೆದರೆ, ಗ್ರಾಹಕರು ತಮ್ಮ ಪರಿಹಾರವನ್ನು ಕೇಳಲು ಸಾಧ್ಯವಾಗುವುದಿಲ್ಲ. ಇದರಿಂದ ಗ್ರಾಹಕರಿಗೆ ಮತ್ತು ಬ್ಯಾಂಕುಗಳಿಗೆ ಹಣಕಾಸಿನ ಅಪಾಯಗಳು ಹೆಚ್ಚಾಗುತ್ತವೆ.
ಸೋರಿಕೆಯಾದ ಸರ್ಕಾರಿ ವೆಬ್ ಸೈಟ್ ಗಳು:
ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ
ಆಧಾರ್ ಸಂಖ್ಯೆ, ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳ ಸ್ಥಿತಿ 94,32,605.
ಆಧಾರ್ ಗೆ ಸಂಪರ್ಕಗೊಂಡ ಬ್ಯಾಂಕ್ ಖಾತೆಗಳು-14,98,919
ಆಧಾರ್ ಸಂಖ್ಯೆಗೆ ಸಂಪರ್ಕಗೊಂಡ ಅಂಚೆ ಕಚೇರಿ ಖಾತೆಗಳು
1,56,42,083 ಇದ್ದರೂ ಎಲ್ಲವೂ ಬ್ಯಾಂಕ್ ಖಾತೆಗಳಿಗೆ ಸಂಪರ್ಕಗೊಂಡಿಲ್ಲ.
ನರೇಗಾ ಯೋಜನೆ:
ಉದ್ಯೋಗ ಕಾರ್ಡು ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್/ ಅಂಚೆ ಕಚೇರಿ ಖಾತೆ ಸಂಖ್ಯೆ, ಕೆಲಸ ಮಾಡಿದ ದಿನಗಳು, ದಾಖಲಾತಿ ಸಂಖ್ಯೆ, ನಿಷ್ಟ್ಕಿಯಗೊಂಡ ಖಾತೆಗಳ ಸಂಖ್ಯೆ.
78,74,315.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos