ಸಾಂದರ್ಭಿಕ ಚಿತ್ರ 
ರಾಜ್ಯ

500 ಕೋಟಿ ರು. ನೀಡುವಂತೆ ವಿಪ್ರೋಗೆ ಇ-ಮೇಲ್ ಬೆದರಿಕೆ

ನಗರದ ಪ್ರಮುಖ ಸಾಫ್ಟ್ ವೇರ್ ಕಂಪನಿ ವಿಪ್ರೋಗೆ ಅನಾಮದೇಯ ಇ-ಮೇಲ್ ಮೂಲಕ ಸಂಸ್ಥೆಯ ಸಿಬ್ಬಂದಿಗೆ ಕೊಲೆ ಬೆದರಿಕೆ....

ಬೆಂಗಳೂರು: ನಗರದ ಪ್ರಮುಖ ಸಾಫ್ಟ್ ವೇರ್ ಕಂಪನಿ ವಿಪ್ರೋಗೆ ಅನಾಮದೇಯ ಇ-ಮೇಲ್ ಮೂಲಕ ಸಂಸ್ಥೆಯ ಸಿಬ್ಬಂದಿಗೆ ಕೊಲೆ ಬೆದರಿಕೆ ಹಾಕಲಾಗಿದ್ದು, 500 ಕೋಟಿ ರುಪಾಯಿಗೆ ಬೇಡಿಕೆಯಿಡಲಾಗಿದೆ.
20 ದಿನದಲ್ಲಿ 500 ಕೋಟಿ ರುಪಾಯಿ ಕೊಡಿ ಇಲ್ಲದಿದ್ದರೆ ಕಚೇರಿ ಆವರಣ ಸೇರಿದಂತೆ ಹಲವು ಕಡೆ ವಿಷಕಾರಿ ಪ್ರೋಟೀನ್ ಡ್ರಗ್ ಹಾಕುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ವಿಪ್ರೋ ದೂರು ನೀಡಿದ್ದು, ಶುಕ್ರವಾರ ಬೆಳಗ್ಗೆ ತಮಗೆ ಅನಾಮದೇಯ ಮೇಲ್ ವೊಂದು ಬಂದಿದ್ದು, ಮೇ 25ರೊಳಗೆ ಆನ್ ಲೈನ್ ಮೂಲಕ 500 ಕೋಟಿ ರುಪಾಯಿ ವರ್ಗಾವಣೆ ಮಾಡದಿದ್ದರೆ ಲಿಕ್ವಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Ramesh2@protonmail.com ಮೇಲ್ ಐಡಿಯಿಂದ ಬೆದರಿಕೆ ಮೇಲ್ ಬಂದಿದ್ದು, ಈಗಾಗಲೇ ಒಂದು ಕೆ.ಜಿ. ವಿಷಕಾರಿ ರಿಸಿನ್ ಸಂಗ್ರಹಿಸಲಾಗಿದೆ ಮತ್ತು ಈ ಮೇಲ್ ನಕಲಿ ಅಲ್ಲ ಎಂದು ತೋರಿಸುವುದಕ್ಕಾಗಿ ವಿಪ್ರೋ ಕಚೇರಿ ಇಬ್ಬರು ಸಿಬ್ಬಂದಿಗೆ ಎರಡು ಗ್ರಾಂ ನಷ್ಟು ಎನ್ವೆಲೊಪ್ ಮೂಲಕ ಕಳುಹಿಸಲಾಗುತ್ತಿದೆ ಎಂದು ಮೇಲ್ ನಲ್ಲಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಅಂತರ್ಜಾಲ ಭಯೋತ್ಪಾದನೆ ಕಾಯ್ದಯಡಿ ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಿಸಿನ್ ಒಂದು ವಿಷಕಾರಿ ಪ್ರೋಟಿನ್ ಪೌಡರ್ ಆಗಿದ್ದು, ಇದನ್ನು ಜೈವಿಕ ಶಸ್ತ್ರಾಸ್ತ್ರಗಳಲ್ಲಿ ಬಳಸಲಾಗುತ್ತದೆ. ಒಂದು ಸ್ಪೂನ್ ರಿಸಿನ್ ಒಬ್ಬ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಕೊಲ್ಲುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran war: ಶಾಂತಿ ಕರಡು ಪ್ರತಿಗೆ ತಿದ್ದುಪಡಿ: ಪರಮಾಣು ಮುಕ್ತ ಇರಾನ್‌ಗೆ ಟ್ರಂಪ್ ಪಟ್ಟು, ಕೊನೆ ಕ್ಷಣದಲ್ಲಿ ಬಿಗ್ ಶಾಕ್ ಕೊಟ್ಟ ಅಮೆರಿಕಾ..!

ರೂ.1,413 ಕೋಟಿ ಆಸ್ತಿ, ರೂ.900 ಕೋಟಿಯ ಮಾಲ್.. ಆದ್ರೆ ನಮ್ಮ ಮುಂದಿನ ಸಿಎಂ ಡಿಕೆಶಿ ಹೆಸರಲ್ಲಿರೋದು ಒಂದೇ ಒಂದು ಹಳೇ ಕ್ವಾಲಿಸ್ ಕಾರ್..!

ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಭಾರೀ ಕಸರತ್ತು: ಸಿದ್ದು-ಡಿಕೆಶಿ ಬಣ ಸಮತೋಲನಕ್ಕೆ ಮಾಸ್ಟರ್‌ಪ್ಲ್ಯಾನ್, 11:11:11 ಫಾರ್ಮುಲಾಗೆ ಹೈಕಮಾಂಡ್ ಗ್ರೀನ್ ಸಿಗ್ನಲ್..?

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಅಣ್ವಸ್ತ್ರ ಹೊಂದಲು ಅವಕಾಶವೇ ಇಲ್ಲ, ಶಾಂತಿ ಮಾತುಕತೆ ವಿಫಲವಾದರೆ ದಾಳಿ ಖಚಿತ: ಅಮೆರಿಕಾ ಎಚ್ಚರಿಕೆ

ಸಮಗ್ರತೆ, ಸಮರ್ಪಣೆ ಉದ್ದೇಶದೊಂದಿಗೆ ಕರ್ನಾಟಕ ಜನತೆಗೆ ಸೇವೆ ಸಲ್ಲಿಸಲು ಬದ್ಧ: ಡಿಕೆ ಶಿವಕುಮಾರ್

SCROLL FOR NEXT