ರಾಜ್ಯ

ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕೆಲ ವಾರಗಳಲ್ಲಿ ಉಚಿತ ವೈ ಫೈ ಸೌಲಭ್ಯ

Shilpa D
ಬೆಂಗಳೂರು: ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕಾಯುವ ಪ್ರಯಾಣಿಕರಿಗೆ ಕೆಲವೇ ವಾರಗಳಲ್ಲಿ ಉಚಿತ ವೈಫೈ ಸೌಲಭ್ಯ ಸಿಗಲಿದೆ. 
ಮೆಜೆಸ್ಟಿಕ್, ಶಿವಾಜಿನಗರ, ಶಾಂತಿನಗರ, ಜಯನಗರ, ಬನಶಂಕರಿ, ಯಶನಂತಪುರ, ಕೆಂಗೇರಿ, ದೊಮ್ಮಲೂರು, ವೈಟ್ ಫೀಲ್ಡ್ ಬನ್ನೇರುಘಟ್ಟ ಮತ್ತು ಕೋರಮಂಗಲ ಬಸ್ ನಿಲ್ದಾಣಗಳಲ್ಲಿ  ಉಚಿತ ವೈಫೈ ಸಂಪರ್ಕ ಅಳವಡಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. 
ಈ ಎಲ್ಲಾ ಬಸ್ ಟರ್ಮಿನಲ್ ಗಳಲ್ಲಿ ಖಾಸಗಿ ಕಂಪನಿ ವೈ ಪೈ ಅಳವಡಿಸಿ ಇಂಟರ್ನೆಟ್ ಸಂಪರ್ಕ ಕಲ್ಪಿಸಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಐಟಿ ಕಾರಿಡಾರ್ ಗಳಾದ ಐಟಿಪಿಬಿ, ಮತ್ತು ಎಲೆಕ್ಟ್ರಾನಿಕ್ ಸಿಟಿಗಳಿಗೆ ಸಂಚರಿಸುವ ಹವಾ ನಿಯಂತ್ರಿತ ಬಸ್ ಗಳಲ್ಲಿ ವೈಫೈ ಅಳವಡಿಕೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ವಾಯು ವಜ್ರ ಬಸ್ ಗಳಲ್ಲಿ ಮಾತ್ರ ವೈಫೈ ಸೌಲಭ್ಯ ನೀಡಲಾಗಿದೆ. ಈ ಯೋಜನೆಯಡಿ ಪ್ರಯಾಣಿಕರು ತಮ್ಮ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳಿಗೆ ಇಂಟರ್ನೆಟ್ ಸೌಲಭ್ಯ ಪಡೆದುಕೊಳ್ಳುಬಹುದಾಗಿದೆ, ಬ್ರ್ಯಾಂಡ್ ಬ್ಯಾಂಡ್ ವೇಗ 7.2 ಎಂಪಿಪಿಎಸ್ ಇರುತ್ತದೆ. ಡೌನ್ ಲೋಡ್ ಗಾಗಿ ಹೆಚ್ಚಿನ ಡಾಟಾ ಬಳಸಿದರೇ ಅದಕ್ಕೆ ದರ ವಿಧಿಸಲಾಗುತ್ತದೆ. 
SCROLL FOR NEXT