ಸಾಂದರ್ಭಿಕ ಚಿತ್ರ 
ರಾಜ್ಯ

ಕೋಲಾರ: ದಂತ ವೈದ್ಯನಿಂದ ಕೀವಿ ನೋವಿಗೆ ಚಿಕಿತ್ಸೆ, ಬಾಲಕ ಸಾವು

ವೈದ್ಯರ ನಿರ್ಲಕ್ಷ್ಯದಿಂದಾಗಿ 16 ವರ್ಷದ ಬಾಲಕ ಪ್ರಾಣ ಕಳೆದುಕೊಂಡ ಘಟನೆ ಗುರುವಾರ ಕೋಲಾರ ಜಿಲ್ಲೆಯ ಬೆತಮಂಗಲದ....

ಕೋಲಾರ: ವೈದ್ಯರ ನಿರ್ಲಕ್ಷ್ಯದಿಂದಾಗಿ 16 ವರ್ಷದ ಬಾಲಕ ಪ್ರಾಣ ಕಳೆದುಕೊಂಡ ಘಟನೆ ಗುರುವಾರ ಕೋಲಾರ ಜಿಲ್ಲೆಯ ಬೆತಮಂಗಲದ ಶಾರಧ ಕ್ಲಿನಿಕ್ ನಲ್ಲಿ ನಡೆದಿದೆ.
ಹಲ್ಲು ನೋವಿಗೆ ಚಿಕಿತ್ಸೆ ನೀಡುವ ದಂತ ವೈದ್ಯರೊಬ್ಬರು ಕೀವಿಯ ಸೋಂಕಿಗೆ ಚಿಕಿತ್ಸೆ ನೀಡಿದ ಪರಿಣಾಮ ಬಾಲಕ ಅಭಿರಾಮ್ ಸಾವನ್ನಪ್ಪಿದ್ದಾರೆ. ಬಾಲಕನ ಸಾವಿನ ನಂತರ ಕ್ಲಿನಿಕ್ ಸುತ್ತಮುತ್ತ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ದಂತ ವೈದ್ಯರಾಗಿರುವ ನವೀನ್ ರಾಮ್ ಅವರು ಅಭಿರಾಮ್ ಕೀವಿ ನೋವಿಗೆ ಚಿಕಿತ್ಸೆ ನೀಡಿ ಔಷಧಿ ಕೊಟ್ಟಿದ್ದಾರೆ. ಆದರೆ ಔಷಧಿ ತೆಗೆದುಕೊಂಡ ಕೆಲ ಗಂಟೆಗಳ ನಂತರ ಬಾಲಕನ ಸ್ಥಿತಿ ಮತ್ತಷ್ಟು ಗಂಭೀರವಾಗಿ ಮೃತಪಟ್ಟಿದ್ದಾನೆ.
ನವೀನ್ ರಾಮ್ ಅವರು ಅರ್ಹ ವೈದ್ಯರಲ್ಲ. ಅವರ ನಿರ್ಲಕ್ಷ್ಯದಿಂದಾಗಿಯೇ ಬಾಲಕ ಮೃತಪಟ್ಟಿದ್ದಾನೆ ಎಂದು ಅಭಿರಾಮ್ ಅವರ ಸಂಬಂಧಿಕರು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಲಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿಜಯ್ ಕುಮಾರ್ ಅವರು, ನವೀನ್ ರಾಮ್ ಅವರು ಒಬ್ಬ ದಂತ ವೈದ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ನವೀನ್ ರಾಮ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಿರುವುದಾಗಿ ಕೋಲಾರ ಉಪ ಆಯುಕ್ತ ಕೆವಿ ತ್ರಿಲೋಕ್ ಚಂದ್ರ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್