ಸೋಮವಾರಪೇಟೆ: ಕೊಟ್ಟಿಗೆಯಲ್ಲಿ ಕಟ್ಟಿದ್ದ 8 ಹಸುಗಳನ್ನು ಕದ್ದು, ಟೆಂಪೊದಲ್ಲಿ ಮಂಗಳೂರಿಗೆ ಸಾಗಿಸುತ್ತಿದ್ದ ಆರೋಪಿ ಗಳನ್ನು ಶನಿವಾರ ಬೆಳಿಗ್ಗೆ ಬೆನ್ನಟ್ಟಿದ ಪೊಲೀಸರು, ಸಮೀಪದ ದೋಣಿಗಲ್ ಬಳಿ ವಶಕ್ಕೆ ಪಡೆದಿದ್ದಾರೆ.
ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಹಿಂಬಾಲಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಏಳು ಜನರ ತಂಡ ರಾಸುಗಳನ್ನು ಕಳವು ಮಾಡಿ ಒಯ್ಯುತ್ತಿತ್ತು. ಇದರಲ್ಲಿ ಐವರು ಪರಾರಿಯಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.ವಶಪಡಿಸಿಕೊಂಡ ರಾಸುಗಳನ್ನು ಕೊಡ್ಲಿಪೇಟೆ ಠಾಣೆ ಆವರಣದಲ್ಲಿ ಕಟ್ಟಿದ್ದು, ಅಲ್ಲಿಯೇ ಕೃತ್ಯಕ್ಕೆ ಬಳಸಿದ ವಾಹನವನ್ನೂ ನಿಲ್ಲಿಸಲಾಗಿತ್ತು.
ಮಾಹಿತಿ ತಿಳಿದು ಠಾಣೆ ಬಳಿ ಗುಂಪುಗೂಡಿದ ಸಾರ್ವಜನಿಕರು, ರಾಸುಗಳ ಕಳವಿಗೆ ಬಳಸಿದ ವಾಹನಕ್ಕೆ ಬೆಂಕಿಹಚ್ಚಿದ್ದಾರೆ.ಕಳುವಾದ ರಾಸುಗಳು ಬೇಳೂರು, ತೊರೆನೂರು ಗ್ರಾಮಕ್ಕೆ ಸೇರಿವೆ. ಹಸುಗಳನ್ನು ಕದ್ದು ಟೆಂಪೊ ಟ್ರಾವೆಲ್‌ನಲ್ಲಿ ತುಂಬಿಸಿ ಕೊಡ್ಲಿಪೇಟೆ ಮಾರ್ಗವಾಗಿ ಮಂಗಳೂರಿಗೆ ಸಾಗಿಸುತ್ತಿದ್ದರು.
ವಿಷಯ ತಿಳಿದ ಪೊಲೀಸರು ಶನಿವಾರಸಂತೆ ಠಾಣೆ ವ್ಯಾಪ್ತಿಯ, ಸಕಲೇಶಪುರ ತಾಲ್ಲೂಕು ದೋಣಿಗಲ್ ಬಳಿ ಟೆಂಪೊ ಅಡ್ಡಗಟ್ಟಿದರು. ಆಗ ದುಷ್ಕರ್ಮಿಗಳು ಪೊಲೀಸರ ಮೇಲೆ ವಾಹನ ಹರಿಸಲು ಯತ್ನಿಸಿದ್ದಾರೆ. ಕೊನೆಗೆ ರಾಸುಗಳನ್ನು ರಕ್ಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics