ಕೊಪ್ಪಳ: ಸಾಲ ಬಾಧೆ ತಾಳಲಾರದೆ ಕೊಪ್ಪಳದಲ್ಲಿ ನಿನ್ನೆ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಪ್ಪಳದ ಇರಕಲ್ಗಡ ಗ್ರಾಮದಲ್ಲಿ ಮಂಜುನಾಥ್ ಪಿನ್ನಿ ಎಂಬ ರೈತ 2 ಲಕ್ಷ ರೂಪಾಯಿಗಳನ್ನು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಅಲ್ಲದೆ ಖಾಸಗಿ ವ್ಯಕ್ತಿಗಳಿಂದಲೂ ಸಾಲ ಪಡೆದಿದ್ದರು.
ಈ ಮೂಲಕ ಕಳೆದ ತಿಂಗಳಿನಿಂದ ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 8ಕ್ಕೇರಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಪರಿಹಾರಕ್ಕೆ ಪರಿಗಣನೆ ಅಥವಾ ಅನುಮೋದನೆ ನೀಡುವ ಕೃಷಿ ಇಲಾಖೆಯ ಸಹಾಯಕ ಆಯುಕ್ತರ ನೇತೃತ್ವದ ಸಮಿತಿ ಮುಂದೆ ಈ 8 ಆತ್ಮಹತ್ಯೆ ಕೇಸುಗಳು ಕೂಡ ದಾಖಲಾಗಿಲ್ಲ. 2016-17ನೇ ವರ್ಷದ 5 ಆತ್ಮಹತ್ಯಾ ಕೇಸುಗಳಿಗೆ ಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ. ಒಂದು ಕೇಸು ತಿರಸ್ಕೃತವಾಗಿದೆ. ಇತರ ಆರು ಜನರಿಗೆ ಪರಿಹಾರಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯದಲ್ಲಿ ಇಬ್ಬರು ರೈತರು ಆತ್ಮಹತ್ಯೆ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಜಗದೀಶ್ ಎಂಬ ರೈತ ಮಂಡ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಡಿ.ಹಲಸಹಳ್ಳಿಯವರಾಗಿದ್ದಾರೆ.
ಜಗದೀಶ್ 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡವರು.ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಶ್ಯಾಲನಗೆರೆ ಎಂಬಲ್ಲಿ ರಾಮಚಂದ್ರ ಎಂಬ ಮತ್ತೊಬ್ಬ ರೈತರು ತಾವು ಪಡೆದಿದ್ದ 5 ಲಕ್ಷ ರೂಪಾಯಿ ಸಾಲವನ್ನು ಹಿಂತಿರುಗಿಸಲಾಗದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics