ರಾಜ್ಯ

ಚಿಕ್ಕಬಳ್ಳಾಪುರ: ಮಹಿಳೆಯರ ಪಿಜಿಗೆ ನುಗ್ಗಿ ಅತ್ಯಾಚಾರ ಯತ್ನ; ಆರೋಪಿ ಕಾಲಿಗೆ ಗುಂಡೇಟು- ವಿಕೃತ ಕಾಮಿ ಬಂಧನ


ಚಿಕ್ಕಬಳ್ಳಾಪುರ: ಮಹಿಳೆಯರ ಪಿಜಿಗೆ ನುಗ್ಗಿ ಅತ್ಯಾಚಾರ ಯತ್ನ; ಆರೋಪಿ ಕಾಲಿಗೆ ಗುಂಡೇಟು- ವಿಕೃತ ಕಾಮಿ ಬಂಧನ
ಬಂಧಿತ ಆರೋಪಿ ನರೇಶ್
Published On :

ಚಿಕ್ಕಬಳ್ಳಾಪುರ: ಮಹಿಳೆಯರ ಪಿಜಿಗೆ ನುಗ್ಗಿ ಅತ್ಯಾಚಾರ ಯತ್ನ, ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿ ಕಾಲಿಗೆ ಶೂಟ್ ಮಾಡಿರುವ ಚಿಕ್ಕಜಾಲ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಮದನಪಲ್ಲಿ ಮೂಲದ ನರೇಶ್ ಕಾಲಿಗೆ ಗುಂಡೇಟು ಬಿದ್ದಿದೆ. ಆರೋಪಿಯು ಹೆಣ್ಣುಮಕ್ಕಳ ಪಿಜಿ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಪಿಜಿ ಗಳಿಗೆ ನುಗ್ಗಿ ಮೊಬೈಲ್ ಸಹ ಕಳವು ಮಾಡಿ ಪರಾರಿಯಾಗುತ್ತಿದ್ದ.

ಹುಣಸಮಾರನಹಳ್ಳಿ ಬಳಿ ಪಿಜಿಯೊಂದಕ್ಕೆ ನುಗ್ಗಿ ಯುವತಿ ಮೇಲೆ ಅತ್ಯಾಚಾರ ಯತ್ನಿಸಿದ್ದ. ಬಂಧಿಸಲು ತೆರಳಿದ್ದ ಇಬ್ಬರು ಪಿಸಿ ಗಳ ಮೇಲೆ ದಾಳಿಗೆ ಮುಂದಾಗಿದ್ದ. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತನೆ, ಅತ್ಯಾಚಾರ ಯತ್ನ ಸೇರಿ ಆರೋಪಿ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು ಎನ್ನಲಾಗಿದೆ.

ಆರೋಪಿ ನರೇಶ್​​ನ ಬಂಧನಕ್ಕಾಗಿ ಪೊಲೀಸರು ತೆರಳಿದ್ದರು. ಆದರೆ ಈ ವೇಳೆ ಮೊಂಡಾಟ ತೋರಿರುವ ಆತ ಅವರ ಮೇಲೆಯೇ ಹಲ್ಲೆಗೆ ಯತ್ನ ನಡೆಸಿದ್ದಾನೆ. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು‌ ಹಾರಿಸಿ ವಾರ್ನಿಂಗ್ ನೀಡಿದರೂ ಎಚ್ಚೆತ್ತುಕೊಳ್ಳದ ಆರೋಪಿ ಅಟ್ಯಾಕ್​​ ಮಾಡಿ ಎಸ್ಕೇಪ್​​ ಆಗಲು ಯತ್ನಿಸಿದ್ದಾನೆ.

ಹೀಗಾಗಿ ಆತ್ಮರಕ್ಷಣೆಯ ಅನಿವಾರ್ಯತೆಯಿಂದಾಗಿ ಚಿಕ್ಕಜಾಲ ಪೊಲೀಸ್​​ ಇನ್​​​ಸ್ಪೆಕ್ಟರ್​ ಮಲ್ಲಿಕಾರ್ಜುನ್​​ ಅವರು ಫೈರಿಂಗ್​​ ಮಾಡಿದ್ದಾರೆ. ನರೇಶ್​​ ಕಾಲಿಗೆ ಗುಂಡು ತಾಗಿದೆ. ಆರೋಪಿ ಮತ್ತು ಗಾಯಗೊಂಡ ಪೊಲೀಸರಿಗೆ ಯಲಹಂಕ‌ ಬಳಿಯ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಡಿಸಿಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ.

ಇನ್ನು ವಿಕೃತ ಕಾಮಿಯಾಗಿರುವ ಈ ನರೇಶ್​​, ಮಹಿಳೆಯರ‌‌ ಪಿಜಿಗೆ ನುಗ್ಗಿ ಖಾಸಗಿ ಅಂಗ ಪ್ರದರ್ಶನ ಮಾಡ್ತಿದ್ದ. ನಿನ್ನೆಯೂ ಚಿಕ್ಕಜಾಲ ಮತ್ತು ಯಲಹಂಕದಲ್ಲಿನ‌ ಖಾಸಗಿ ಮಹಿಳಾ ಪಿಜಿಗಳಿಗೆ ನುಗ್ಗಿದ್ದ ಈತ ಇದೇ ರೀತಿ ಮಾಡಿ ಮೊಬೈಲ್ ಕಸಿದುಕೊಂಡಿದ್ದ. ಒರ್ವ ಯುವತಿಯ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದ. ಒಂದೇ ದಿನ ನಡೆದ ಎರಡು ಪ್ರಕರಣದಿಂದ‌ ಪಿಜಿಯಲ್ಲಿನ ಯುವತಿಯರು ಬೆಚ್ವಿಬಿದ್ದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.