ಬೆಂಗಳೂರು ಎಟಿಎಂ ದರೋಡೆ ಪ್ರಕರನ, ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು: ಬಾಗಲಗುಂಟೆ ಎಟಿಎಂ ದರೋಡೆ ನಡೆಸಿದ ಆರೋಪಿಗಳು ಪಾರ್ಟಿ ಮಾಡಿದ್ದಲ್ಲದೆ ಅವರ ಸ್ನೇಹಿತರಿಗೂ ಲಕ್ಷಗಟ್ಟಲೆ ಹಣ ಹಂಚಿದ್ದಾರೆ. ದರೋಡೆ ನಡೆದ 24 ಗಂಟೆಗಳೊಳಗೆ ಆರೋಪಿಗಳು ಸುಮಾರು ಮೂರು ಲಕ್ಷದಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಇದೀಗ ಪೋಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿ ಅವರಿಂದ 15.25 ಲಕ್ಷ ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.
"ಹಲಗೂರು ಮೂಲದ ನಿತೀಶ್ ಮತ್ತು ರಾಕೇಶ್ ಅವರುಗಳನ್ನು ಈ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಎರಡು ವರ್ಷಗಳಿಂದ ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು. ದರೋಡೆ ಮಾಡಿದ ಬಳಿಕ ಅವರು ಹಲವಾರು ಸ್ಥಳಗಳನ್ನು ಸುತ್ತಿಕೊಂಡು ಮಳವಳ್ಳಿಗೆ ಬಂದಿದ್ದಾರೆ." ಆರೋಪಿಗಳನ್ನು ಬಂಧಿಸಿರುವ ಮಳವಳ್ಳಿಯ ಪೋಲೀಸ್ ಇನ್ಸ್ ಪೆಕ್ಟರ್ ಗಂಗಾಧರ್ ಹೇಳಿದರು. ‘ಸೆಕ್ಯೂರ್ ಏಜೆನ್ಸಿ’ಯಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್‌ಗೆ, ಅದೇ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿದ್ದ ಸಾಗರ್ ನ ಸ್ನೇಹ ಬೆಳೆಸಿದ್ದ. ತಿಂಗಳ ಹಿಂದೆಯೇ ಎಟಿಎಂ ದರೋಡೆ ಸಂಚು ರೂಪಿಸಿದ್ದ ಅವರು, ಅದಕ್ಕೆ ನಿತೀಶ್‌ನ ಸಹಾಯ ಪಡೆದರು. ಅದಾಗಲೇ ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡಿದ್ದ ನಿತೀಶ್ ದೊಡ್ಡ ಪ್ರಮಾಣದ ಹಣ ಒಟ್ಟಿಗೇ ಸಿಗುವುದೆನ್ನುವ ಆಸೆಯಿಂದ ಈ ಕೃತ್ಯಕ್ಕೆ ಒಪ್ಪಿದ್ದನು.
ಅದರಂತೆ ಅ.30ರಂದು ಬೆಳಗಿನ ಜಾವ ಜಾಲಹಳ್ಳಿ ಕ್ರಾಸ್‌ನ ಐಸಿಐಸಿಐ ಬ್ಯಾಂಕ್ ಎಟಿಎಂ ಘಟಕಕ್ಕೆ ಹಣ ತುಂಬಲು ಸಹೋದ್ಯೋಗಿಗಳಾದ ಮೋಹನ್ ಹಾಗೂ ಪ್ರಸನ್ನ ಅವರ ಜತೆ ತೆರಳಿದ ಸಮಯಕ್ಕೆ ಪೂರ್ವಯೋಜನೆಯಂತೆ ನಿತೀಶ್ ಹಾಗೂ ರಾಕೇಶ್, ಸಾಗರ್ ಮೇಲೆ ದಾಳಿ ನಡೆಸಿ ಅವನ ಹೊಟ್ಟೆ ಹಾಗೂ ತೊಡೆಗೆ ಚಾಕುವಿನಿಂದ ಚುಚ್ಚಿದ್ದರು. ಬಳಿಕ ಹಣದೊದನೆ ಪರಾರಿಯಾಗಿದ್ದರು.
ಸಾಗರ್ ಗೆ ತೀವ್ರವಾಗಿ ಗಾಯಗಳಗಿದ್ದ ಇಕಾರಣ ಅವನ ಮೇಲೆ ಅನುಮಾನ ಬಂದಿರಲಿಲ್ಲ. ಆದರೆ ನಿತೀಶ್ ಮತ್ತು ರಾಕೇಶ್ ಹೇಳಿಕೆಯ ತರುವಾಯ ಸಾಗರ್ ಸಹ ಇದರಲ್ಲಿ ನೇರವಾಗಿ ಭಾಗಿಯಾಗಿರುವುದು ತಿಳಿದಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಗರ್ ನನ್ನು ಅವನು ಚೇತರಿಸಿಕೊಳ್ಳುತ್ತಿದ್ದಂತೆ ವಶಕ್ಕೆ ಪಡೆಯಲಾಗುತ್ತದೆ ಎಂಎದು ಪೋಲೀಸರು ಹೇಳಿದ್ದಾರೆ. ಬ್ಯಾಂಕ್ ಅಥವಾ ಗುತ್ತಿಗೆದಾರ ಸಂಸ್ಥೆ ಈ ಹಣವನ್ನು ಎಟಿಎಂ ಗೆ ಮರುಪೂರಣ ಮಾಡಲಿದೆಯೆ? ಎಂದು ಕೇಳಲಾದ ಪ್ರಶ್ನೆಗೆ "ನಾವು ರಿಸರ್ವ್ ಬ್ಯಾಂಕ್ ನ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತೇವೆ" ಎಂದು ಉತ್ತರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos