ಧಾರವಾಡ: ಖಾಸಗಿ ಬಸ್ ಪಲ್ಟಿ ಒಬ್ಬ ಸಾವು, ಆರು ಮಂದಿಗೆ ಗಾಯ
ಧಾರವಾಡ: ಖಾಸಗಿ ಬಸ್ ಪಲ್ಟಿ ಆದ ಕಾರಣ ಒಬ್ಬ ವ್ಯಕ್ತಿ ಸತ್ತು, 6 ಜನ ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕು ಪ್ರಭುನಗರ ಹೊನ್ನಾಪೂರ ಎನ್ನುವಲ್ಲಿ ನಡೆದಿದೆ. ಬಸ್ ನಲ್ಲಿ ಸುಮಾರು 50 ಪ್ರಯಾಣಿಕರು ಇದ್ದರೆನ್ನಲಾಗಿದೆ.
ಬೆಂಗಳೂರಿನಿಂದ ಗೋವಾ ಗೆ ಹೊರಟಿದ್ದ ಖಾಸಗಿ ಬಸ್ ಹೊನ್ನಾಪೂರಯ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಆ ಸಮಯದಲ್ಲಿ ಒಬ್ಬ ಪ್ರಯಾಣಿಕ ಸ್ಥಳದಲ್ಲೇ ಮೃತರಾದರೆ 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಧಾರವಾಡ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಸಮೀಪದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಬಸ್ ನಲ್ಲಿ ಇಬ್ಬರು ಚಾಲಕರಿದ್ದು ಓರ್ವ ಚಾಲಕ ಮಲಗಿದ್ದು ಇನ್ನೊಬ್ಬ ಚಾಲಕ ಬಸ್ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos