ಬೆಂಗಳೂರು: ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪ್ರಿಯಕರನ ಹತ್ಯೆ, ಯುವತಿ ಬಂಧನ
ಬೆಂಗಳೂರು: ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯ ಮಾಡುತ್ತಿದ್ದ ಪ್ರಿಯಕರನ ವರ್ತನೆಯಿಂದ ಬೇಸತ್ತ ಯುವತಿ ಅವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಖಾಸಗಿ ಬಸ್ ನಿರ್ವಾಹಕನಾಗಿರುವ ಮುತ್ತುರಾಜ್ ಕೊಲೆಯಾಗಿದ್ದಾನೆ.
ಮುತ್ತುರಾಜ್, ಸುನಂದಾ ಎನ್ನುವ ಯುವತಿಯನ್ನು ಪ್ರೀತಿಸುತ್ತಿದ್ದನು. ನಿತ್ಯವೂ ಕುಡಿದು ಬರುತ್ತಿದ್ದ ಆತ ಸುನಂದಾ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಡ ಹೇರುತ್ತಿದ್ದನು. ಪ್ರಿಯತಮನ ಈ ವರ್ತನೆಯಿಂದ ಬೇಸತ್ತ ಆಕೆ ಅವನ ತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಹತ್ಯೆ ಮಾಡಿದ ಬಳಿಕ ಕುಡಿದ ಮತ್ತಿನಲ್ಲಿ ಆತ ಸಾವನ್ನಪ್ಪಿರುವುದಾಗಿ ಬಿಂಬಿಸಲು ಮುಂದಾದ ಸುನಂದಾ ಅವನ ಮೃತದೇಹವನ್ನು ಪಕ್ಕದ ರೋಡಿಗೆ ತಂದು ಎಸೆದಿದ್ದಾಳೆ.
ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಕೋಣನಕುಂಟೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಸತ್ಯ ಹೊರಬಂದಿದೆ. ತದನಂತರ ಆರೋಪಿ ಸುನಂದಾಳನ್ನು ಬಂಧಿಸಿದ ಪೋಲೀಸರು ತನಿಖೆ ನಡೆಸಿದ್ದಾರೆ. ಆಗ ಸುನಾಂದಾ ತಾನೇ ಅವನನ್ನು ಕೊಂದಿರುವುದಾಗಿ ಒಪ್ಪಿದ್ದಾಳೆ ಅಲ್ಲದೆ ತಾನು ಆತನೊದನೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದದ್ದಾಗಿಯೂ ಹೇಳಿದ್ದಾಳೆ ಎನ್ನಲಾಗಿದೆ.