ಹಂಪಿ: ಅರ್ಚಕನೊಡನೆ ಸಿಕ್ಕಿಬಿದ್ದ ವಿದೇಶೀ ಯುವತಿ, ಪೋಲೀಸರಿಗೆ ಒಪ್ಪಿಸಿದ ಸ್ಥಳೀಯರು
ಹಂಪಿ: ಮೂರು ದಿನಗಳ ಹಂಪಿ ಉತ್ಸವದ ಮೊದಲ ದಿನವೇ ಅವಾಂತರ ಒಂದು ನಡೆದಿದೆ. ಸ್ಥಳೀಯ ದೇವಾಲಯದ ಅರ್ಚಕ, ವಿದೇಶೀ ಮಹಿಳೆಯ ಜತೆ ಇರುವಾಗಲೇ ಸ್ಥಳೀಯರಿಗೆ ಸಿಕ್ಕಿ ಬಿದ್ದಿದ್ದಾನೆ.
ಇಂದು ಬೆಳಗ್ಗೆ ಹಂಪಿಯ ಯಂತ್ರೋದ್ದಾರಕ ಹನುಮಾನ್ ಮಂದಿರದ ಆವರಣದಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯರು ಪ್ರಶ್ನಿಸಿದಾಗ ಅರ್ಚಕ, ಆಕೆ ತನ್ನ ಗೆಳತಿ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಜನರ ಗುಂಪಿನಿಂದ ತಪ್ಪಿಸಿಕೊಂಡು ಹೋಗುವ ಸಮಯದಲ್ಲಿ ಸ್ಥಳೀಯ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾನೆ.
ವಿದೇಶೀ ಮಹಿಳೆ ರಷ್ಯಾ ಮೂಲದವಳಾಗಿದ್ದು ಅರ್ಚಕನೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯ ಜನರು ಒಟ್ಟಾಗಿ ದೇಶಿ ಮಹಿಳೆಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಇಬ್ಬರೂ ಪೋಲೀಸರ ವಶದಲ್ಲಿದ್ದು ಅರ್ಚಕನೊಬ್ಬ ಹಳೆಯ ಅಪರಾಧಿ ಎನ್ನುವುದಾಗಿ ಪೋಲೀಸರು ತಿಳಿಸಿದ್ದಾರೆ.
ನಿನ್ನೆಯಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು ದೇಶ, ವಿದೇಶಗಳಿಂದ ಸಾವಿರಾರು ಮಂದಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.