ರಾಜ್ಯ

ಮೆಟ್ರೊದಲ್ಲಿ ದೊಡ್ಡ ಧ್ವನಿಯಲ್ಲಿ ಪ್ರಕಟಣೆ: ನಿಯಂತ್ರಣಾಧಿಕಾರಿಯನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ ಪೊಲೀಸರು

Sumana Upadhyaya
ಬೆಂಗಳೂರು: ವಿಜಯನಗರ ಮೆಟ್ರೊ ರೈಲು ನಿಲ್ದಾಣದಲ್ಲಿ  ತಡರಾತ್ರಿಯಲ್ಲಿ ಅತಿ ಜೋರಾಗಿ ಸ್ವಯಂಚಾಲಿತ ಪ್ರಕಟಣೆ ಮಾಡುವುದರಿಂದ ತೊಂದರೆಯಾಗುತ್ತದೆ ಎಂದು ನಿವಾಸಿಯೊಬ್ಬರು ದೂರು ನೀಡಿದ್ದರಿಂದ ಮೊನ್ನೆ ಶುಕ್ರವಾರ ತಡರಾತ್ರಿ ಮೆಟ್ರೊ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ನಿಯಂತ್ರಕರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಈ ಘಟನೆ ನಂತರ ತಮ್ಮ ಸುರಕ್ಷತೆ ಬಗ್ಗೆ ಪ್ರಯಾಣಿಕರಲ್ಲಿ ಆತಂಕವುಂಟಾಗಿದ್ದು ಮೆಟ್ರೊ ನಿಗಮದ ಅಧಿಕಾರಿಗಳು ವಿಷಯವನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದಾರೆ.
ಈ ಘಟನೆ ಮೊನ್ನೆ ಶುಕ್ರವಾರ ರಾತ್ರಿ 11.15ರ ಸುಮಾರಿಗೆ ನಡೆದಿದೆ. ಹೊಯ್ಸಳ ವಾಹನದಲ್ಲಿ  ಬಂದ ಪೊಲೀಸರು ವಿಜಯನಗರ ಮೆಟ್ರೊ ನಿಲ್ದಾಣದ ನಿಯಂತ್ರಣ ಕೊಠಡಿಗೆ ಹೋಗಿ ಕರ್ತವ್ಯದಲ್ಲಿರುವ ನಿಯಂತ್ರಕರು ತಮ್ಮ ಜೊತೆ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದಾರೆ. ಅಲ್ಲಿ ಸುಮಾರು ಒಂದು ಗಂಟೆ ಕಾಲ ಬಂಧಿಸಿಟ್ಟಿದ್ದರು ಎಂದು ಮೆಟ್ರೊದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೇಳಿಕೆಯೊಂದಕ್ಕೆ ಸಹಿ ಹಾಕಿದ ನಂತರವೇ ಪೊಲೀಸ್ ಠಾಣೆಯಿಂದ ಹೋಗುವಂತೆ ನಿಯಂತ್ರಕರಿಗೆ ಸೂಚಿಸಿದ್ದರು.
ವಿಜಯನಗರ ನಿವಾಸಿಯಾಗಿರುವ ದೂರುದಾರ ಎಂ.ಎಲ್.ರವಿ ಕುಮಾರ್ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ರಾತ್ರಿ ವೇಳೆ ಸ್ವಯಂಚಾಲಿತ ಪ್ರಕಟಣೆಯ ಮಟ್ಟ ಅಧಿಕವಾಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತದೆ ಎಂದು ದೂರು ನೀಡಿದ್ದರು.
SCROLL FOR NEXT