ಮಂಗಳೂರಿನಲ್ಲಿ ಕರಾಟೆ ಚಾಂಪಿಯನ್ ಶಿಪ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು: ಕೇವಲ ಸ್ವರಕ್ಷಣೆಯಲ್ಲದೆ, ಮಹಿಳೆಯರು ಕರಾಟೆಯಂತಹ ಮಾರ್ಷಲ್ ಆರ್ಟ್ಸ್ ಗಳನ್ನು ಕಲಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಮಂಗಳೂರಿನಲ್ಲಿ ಕರಾಟೆ ಚಾಂಪಿಯನ್ ಶಿಪ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನಗೆ ಕರಾಟೆ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ಮೇಯರ್ ಕವಿತಾ ಸುನಿಲ್ ಅವರು ಬ್ಲ್ಯಾಕ್ ಬೆಲ್ಟ್ ಅಂತೆ. ನನಗೆ ಕರಾಟೆಯಲ್ಲಿ ಬೆಲ್ಟ್ ಎಷ್ಟಿದೆ ಎನ್ನುವುದೂ ಗೊತ್ತಿಲ್ಲ. ಸ್ವರಕ್ಷಣಾ ಕರೆಯನ್ನು ಸಿನಿಮಾದಲ್ಲಷ್ಟೇ ನೋಡಿದ್ದೇನೆ. ಆದೂ ಬ್ರೂಸ್ಲಿಯದ್ದು ಎಂದು ಹೇಳಿದ್ದಾರೆ.
ಕವಿತಾ ಸುನಿಲ್ ಅವರಂತೆ ಎಂದಹುದ್ದೇ ಕಠಿಣ ಪರಿಸ್ಥಿತಿಗಳು ಎದುರಾಗದರೂ ಅವುಗಳನ್ನು ಎದುರಿಸುವಂತಹ ಶಕ್ತಿಶಾಲಿ ಹೊಂದಿರುವವರಾಗಿರಬೇಕು. ಮಾರ್ಷಲ್ ಆರ್ಟ್ಸ್ ಜನರ ಬಲವನ್ನು ಹೆಚ್ಚಿಸುತ್ತದೆ. ಪ್ರಮುಖವಾಗಿ ಮಹಿಳೆಯರಿಗೆ. ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ಪೈಶಾಚಿಕ ಮನಸ್ಥಿತಿಯವರು ಎಸಗುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಬೇಕಾದರೆ, ಸ್ವರಕ್ಷಣಾ ವಿಧಾನವಾದ ಕರಾಟೆಯನ್ನು ಮಹಿಳೆಯರು ಕಲಿಯುವುದು ಒಳ್ಳೆಯದು. ಎಲ್ಲಾ ಹೆಣ್ಣು ಮಕ್ಕಳು ಮೇಯರ್ ಕವಿತಾ ಅವರಂತೆ ಕರಾಟೆ ಪಟುಗಳಾಗಬೇಕು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವಂತೆ ಮೇಯರ್ ಕವಿತಾ ಅವರು ವೈಯಕ್ತಿಕವಾಗಿ ಹಾಗೂ ಸಚಿವ ಬಿ. ರಾಮನಾಥ್ ರೈ ರಿಂದ ಕೇಳುತ್ತಿದ್ದರು. ಕವಿತಾ ಅವರೇ ಕಾರ್ಯಕ್ರಮವನ್ನು ಆಯೋಜಿಸಲು ಆಸಕ್ತಿ ತೋರಿಸಿದ್ದರು ಎಂದಿದ್ದಾರೆ.