ಬೆಂಗಳೂರು: ರೈಲು ಡಿಕ್ಕಿ ಹೊಡೆದ ಪರಿಣಾಮ ಕರಾಟೆ ಶಿಕ್ಷಕರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟಂೆಯೊಂದು ಯಲಹಂಕ ಬಳಿಯಿರುವ ಅಲ್ಲಲಸಂದ್ರ ರೈಲ್ವೇ ಗೇಟ್ ಬಳಿ ಶನಿವಾರ ನಡೆದಿದೆ.
ಮನೋಜ್ ಕುಮಾರ್ (26) ಮೃತ ಕರಾಟೆ ಶಿಕ್ಷಕರಾಗಿದ್ದಾರೆ. ಅಮೃತಹಳ್ಳಿಯ ನಿವಾಸಿಯಾಗಿರುವ ಮನೋಜ್ ಅವರು, ಜಕ್ಕೂರಿನಲ್ಲಿ ಕರಾಟೆ ತರಬೇತಿ ಶಾಲೆಯನ್ನು ನಡೆಸುತ್ತಿದ್ದರು.
ಮನೋಜ್ ಕುಮಾರ್ ಅವರು ತಮ್ಮ ಗೆಳೆಯರೊಂದಿಗೆ ಊಟಕ್ಕೆಂದು ಸ್ಥಳೀಯ ಹೋಟೆಲ್ ವೊಂದಕ್ಕೆ ಬಂದಿದ್ದರು. ಈ ವೇಳೆ ಮನೋಜ್ ಅವರ ಮೊಬೈಲ್'ಗೆ ಸಂಬಂಧಿಕರೊಬ್ಬರ ಕರೆಯೊಂದು ಬಂದಿದೆ. ಕರೆ ಸ್ವೀಕರಿಸಿದ ಮನೋಜ್ ಅವರು ಮಾತನಾಡುತ್ತಾ ರೈಲ್ವೇ ಹಳಿ ಬಳಿ ಹೋಗಿದ್ದಾರೆ. ಈ ವೇಳೆ ಸ್ಥಳೀಯ ಪ್ರಯಾಣಿಕ ರೈಲು ಬರುತ್ತಿರುವುದನ್ನು ಮನೋಜ್ ಅವರು ಗಮನಿಸಿಲ್ಲ.
ವೇಗವಾಗಿ ದೊಡ್ಡಬಳ್ಳಾಪುರಕ್ಕೆ ಹೋಗುತ್ತಿದ್ದು ರೈಲು ಮನೋಜ್ ಅವರಿಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಬಳಿಕ ಸಿಬ್ಬಂದಿಗಳು ಯಶವಂತಪುರ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರೈಲು ಡಿಕ್ಕಿ ಹೊಡೆದ ಕೂಡಲೇ ಸ್ಥಳಕ್ಕೆ ಬಂದ ಸ್ನೇಹಿತರು ಮನೋಜ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ರೈಲು ಡಿಕ್ಕಿ ಹೊಡೆದ ಪರಿಣಾಮ ಮನೋಜ್ ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದ ಕಾರಣ ಮನೋಜ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics