ಕ್ಯಾಬ್ ಚಾಲಕ ಜಗದೀಶ್ 
ರಾಜ್ಯ

ಓಲಾ ಕ್ಯಾಬ್ ಚಾಲಕನ ಮೇಲೆ ಹಿಂದಿ ಭಾಷಿಕರಿಂದ ಹಲ್ಲೆ!

ನಾಡಿನಲ್ಲಿ ಕನ್ನಡಿಗರ ಮೇಲೆ ಅನ್ಯಭಾಷಿಕರ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಹಿಂದಿ ಭಾಷೆ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಓಲಾ ಕ್ಯಾಬ್ ಚಾಲಕನೊಬ್ಬನ ಮೇಲೆ ಹಿಂದಿ ಭಾಷಿಕರು ಹಲ್ಲೆ ನಡೆಸಿರುವ ಘಟನೆಯೊಂದು ನಗರದ ಗುಟ್ಟಹಳ್ಳಿ...

ಬೆಂಗಳೂರು: ನಾಡಿನಲ್ಲಿ ಕನ್ನಡಿಗರ ಮೇಲೆ ಅನ್ಯಭಾಷಿಕರ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಹಿಂದಿ ಭಾಷೆ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಓಲಾ ಕ್ಯಾಬ್ ಚಾಲಕನೊಬ್ಬನ ಮೇಲೆ ಹಿಂದಿ ಭಾಷಿಕರು ಹಲ್ಲೆ ನಡೆಸಿರುವ ಘಟನೆಯೊಂದು ನಗರದ ಗುಟ್ಟಹಳ್ಳಿ ಮುಖ್ಯರಸ್ತೆಯಲ್ಲಿರುವ ಬಿಡಿಎ ಕಾಂಪ್ಲೆಕ್ಸ್ ಬಳಿ ಶನಿವಾರ ರಾತ್ರಿ ನಡೆದಿದೆ. 
ಜಗದೀಶ್ ಹಿಂದಿ ಭಾಷಿಕರಿಂದ ಹಲ್ಲೆಗೊಳಗಾದ ಕ್ಯಾಬ್ ಚಾಲಕ. ಪ್ರಕರಣ ಸಂಬಂಧ ಹಿಮಾಚಲ ಪ್ರದೇಶಗ ಪರಮ್ ಮತ್ತು ದೆಹಲ ಮೂಲದ ಠಾಕೂರ್ ಎಂಬಾತನನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 
ಶನಿವಾರ ರಾತ್ರಿ ಪರಮ್ ಎಂಬಾತ ಓಲಾ ಕ್ಯಾಬ್ ಬುಕ್ ಮಾಡಿದ್ದು, ರಾತ್ರಿ ಪಾಳಿಯಲ್ಲಿದ್ದ ಕಾರ್ಯನಿರ್ವಹಿಸತ್ತಿದ್ದ ಜಗದೀಶ್ ಅವರ ಕ್ಯಾಬ್ ಅನ್ನು ಹತ್ತಿದ್ದಾನೆ. ಬುಕ್ಕಿಂಗ್ ನಲ್ಲಿ ತಾನು ಇಳಿಯುವ ಸ್ಥಳವನ್ನು ಗುಟ್ಟಹಳ್ಳಿ ಮುಖ್ಯರಸ್ತೆ ಸಮೀಪ ಇರುವ ಸೂರ್ಯ ಪಾರ್ಕ್ ಎಂದು ನಮೂದಿಸಿದ್ದಾರೆ. ಇದರಂತೆ ಜಗದೀಶ್ ಅವರು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. 
ಬಳಿಕ ನೀವು ಹೇಳಿದ ಸ್ಥಳಕ್ಕೆ ಬಂದಿದ್ದೇನೆ. ನೀವು ಇಳಿದರೆ ಬುಕ್ಕಿಂಗ್ ಪೂರ್ಣಗೊಳಿಸುತ್ತೇನೆಂದು ಪರಮ್ ಅವರಿಗೆ ತಿಳಿಸಿದ್ದಾರೆ. ಬಳಿಕ ಪರಮ್ ನಾನು ಹೇಳಿದ ಸ್ಥಳ ಇದಲ್ಲ ನನ್ನ ಮನೆ ಇರುವುದು ಗುಟ್ಟಹಳ್ಳಇ ಮುಖ್ಯರಸ್ತೆಯಲ್ಲಿರುವ ಬಿಡಿಎ ಕಾಂಪ್ಲೆಕ್ಸ್ ಎಂದು ಹೇಳಿದ್ದಾನೆ. ಈ ವೇಳೆ ಪರಮ್, ಜಗದೀಶ್ ಅವರನ್ನು ಹಿಂದಿ ಭಾಷೆ ಮಾತನಾಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. 
ಸರಿಯಾಗಿ ಮಾತನಾಡಿ, ನೀವು ಕನ್ನಡದಲ್ಲಿ ಮಾತನಾಡಿ, ಇದು ಕರ್ನಾಟಕ ಎಂದು ಮರು ಉತ್ತರ ನೀಡಿದ್ದರು. ಹೀಗೆ 20 ನಿಮಿಷಗಳ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಬೇಸತ್ತ ಜಗದೀಶ್ ಅವರು, ಕೊನೆಗೆ ಪರಮ್ ನನ್ನು ಆತನ ಮನೆ ಸಮೀಪ ಕರೆದುಕೊಂಡು ಹೋಗಿದ್ದಾರೆ. ಇದಕ್ಕೂ ಮುನ್ನವೇ ಸ್ನೇಹಿತರಿಗೆ ಪರಮ್ ಸಂದೇಶ್ ಕಳುಹಿಸಿದ್ದ. ಆರೋಪಿ ಮನೆ ಬಳಿ ಕಾರು ನಿಲ್ಲಿಸುತ್ತಿದ್ದಂತೆ ಪರಮ್ ಹಾಗೂ ಆತನ ಸ್ನೇಹಿತ ಜಗದೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳೀಯರು ಮಧ್ಯಪ್ರವೇಶ ಮಾಡಿ ಜಗಳವನ್ನು ಬಿಡಿಸಿದ್ದಾರೆ. 
ಬಳಿಕ ಚಾಲಕ ಜಗದೀಶ್ ಅವರು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಘಟನೆಯ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿದ್ದಾರೆ. 
ಘಟನೆ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿ, ಪ್ರಕರಣ ಸಂಬಂಧ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಈಗಾಗಲೇ ಪೊಲೀಸರ ತಂಡ ಪರಮ್ ಮನೆಗೆ ತೆರಳಿದ್ದು, ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಆರೋಪಿಗಳಿಬ್ಬರೂ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಮ್ ಹಿಮಾಚಲ ಪ್ರದೇಶ ಮೂಲದವನಾಗಿದ್ದು, ಮತ್ತೊಬ್ಬ ಆರೋಪಿ ಠಾಕೂರ್ ದೆಹಲಿ ಮೂಲದವನಾಗಿದ್ದಾನೆಂದು ಹೇಳಿದ್ದಾರೆ. 
ಜಗಳವಾಗುತ್ತಿದ್ದ ವೇಳೆ ಜಗದೀಶ್ ಅವರನ್ನು ರಕ್ಷಣೆ ಮಾಡಿದ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಈ ಹಿಂದೆ ಕೂಡ ಪರಮ್ ಸ್ಥಳೀಯರೊಂದಿಗೆ ಜಗಳ ಮಾಡಿದ್ದ ಎಂಬುದು ತಿಳಿದುಬಂದಿದೆ ಎಂದಿದ್ದಾರೆ. 
ಘಟನೆ ಕುರಿದಂದೆ ಚಾಲಕ ಜಗದೀಶ್ ಅವರು ಮಾತನಾಡಿ, 10 ಗಂಟೆ ಸುಮಾರಿಗೆ ಪರಮ್ ಎಂಬ ವ್ಯಕ್ತಿ ಕ್ಯಾಬ್ ಬುಕ್ ಮಾಡಿದ್ದರು. ಆದರೆ, ಡ್ರಾಪ್ ಮಾಡಬೇಕಿದ್ದ ಸ್ಥಳವನ್ನು ಹಾಕಿರಲಿಲ್ಲ. ಬಳಿಕ ಅವರು ನಮೂದಿಸಿದ್ದ ಸ್ಥಳಕ್ಕೆ ಡ್ರಾಮ್ ಮಾಡಿದ್ದೆ. ಡ್ರಾಪ್ ಮಾಡಿದ ಬಳಿಕ ಪರಮ್ ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದ್ದ. ಬಳಿಕ ತನ್ನ ಇಬ್ಬರು ಸ್ನೇಹಿತರನ್ನು ಕರೆಸಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದ ಎಂದು ಹೇಳಿಕೊಂಡಿದ್ದಾರೆ. 
ಜಗದೀಶ್ ಅವರ ಸಂಬಂಧಿಯೊಬ್ಬರು ಮಾತನಾಡಿ, ಆರೋಪಿಗಳು ಜಗದೀಶ್ ಅವರ ಮುಖ ಹಾಗೂ ಎದೆ ಭಾಗಕ್ಕೆ ಹೊಡೆದಿದ್ದಾರೆ. ಗಾಯಗೊಂಡಿದ್ದ ಜಗದೀಶ್ ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಗಿತ್ತು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ