ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ನಡೆದ ಸುಮಾರು 30 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಮಂದಿ ತಂಡವನ್ನು ಬಂಧಿಸಿರುವ ಆಗ್ನೇಯ ವಿಭಾಗ ಪೊಲೀಸರು 20 ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಜಯಪ್ರಕಾಶ್ ಅಲಿಯಾಸ್ ವರುಣ್ ಕುಮಾರ್ (22), ನಿತೀನ್ ಕುಮಾರ್ (21), ಜಿತೇಂದ್ರ (22), ಕಪಿಲ್ ಕುಮಾರ್ (25) ಹಾಗೂ ನಂದ ಕಿಶೋರ್ (33) ಬಂಧಿತ ಆರೋಪಿಗಳು. . ಅವರಿಂದ ರು 20 ಲಕ್ಷ ಮೌಲ್ಯದ 15 ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ಜಪ್ತಿ ಮಾಡಲಾಗಿದೆ.
ಆರೋಪಿಗಳು ಉತ್ತರ ಪ್ರದೇಶದ ಶಮಿಲ್ ಗ್ರಾಮದವರಾಗಿದ್ದು, ರೈಲ್ವೆ ನಿಲ್ದಾಣಗಶಳಲ್ಲಿ ನಡೆದಿರುವ ಹಲವು ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಬೆಂಗಳೂರು ಸೇರಿದಂತೆ ಹಲವು ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಸರಗಳ್ಳತನ ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
‘ಆರೋಪಿಗಳು ಉತ್ತರಹಳ್ಳಿಯ ಎ.ಕೆ. ಕಾಲೊನಿಯ ಮನೆಯಲ್ಲಿ ಬಾಡಿಗೆಗಿದ್ದರು. ನ. 2ರಂದು ಕೆಂಗೇರಿಯ ಕೋಟೆ ಪ್ರದೇಶದಲ್ಲಿ ಮನೆ ಎದುರು ಕಸಗುಡಿಸುತ್ತಿದ್ದ ಸಾವಿತ್ರಮ್ಮ ಎಂಬುವರ ಸರವನ್ನು ಕಿತ್ತುಕೊಂಡು ಹೋಗಿದ್ದರು. ಘಟನಾ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಿಂದ ಆರೋಪಿಗಳ ಮುಖಚಹರೆ ಹಾಗೂ ಪಲ್ಸರ್ ಬೈಕ್ ಗುರುತು ಪತ್ತೆಯಾಗಿತ್ತು’ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics