ರಾಜ್ಯ

ಮಕ್ಕಳ ದಿನಾಚರಣೆ: ಏಳು ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶೌರ್ಯ ಪುರಸ್ಕಾರ

Raghavendra Adiga
ಬೆಂಗಳೂರು: ಮಕ್ಕಳ ದಿನಾಚರಣೆ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಕೆಳದಿ ಚನ್ನಮ್ಮ ಹಾಗೂ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಏಳು ಮಕ್ಕಳನ್ನು ಆತ್ಕೆ ಮಾಡಲಾಗಿದೆ.
ಬಾಲಕರಿಗೆ ಹೊಯ್ಸಳ ಹಾಗೂ ಬಾಲಕಿಯರಿಗೆ ಕೆಳದಿ ಚನ್ನಮ್ಮ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಗಳನ್ನು ಒಳಗೊಂಡಿದೆ. 
ಇದರೊಡನೆ ಮಕ್ಕಳ ಕಲ್ಯಾಣ ಕೆಲಸಗಳಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆ ಮತ್ತು ವ್ಯಕ್ತಿಗಳಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಗಳು ಸಂಸ್ಥೆಗಳಿಗೆ ರೂ.1 ಲಕ್ಷ, ವ್ಯಕ್ತಿಗಳಿಗೆ 25 ಸಾವಿರ ನಗದು ಬಹುಮಾನಗಳನ್ನು ಒಳಗೊಂಡಿದೆ.
ನಗರದ ಕಬ್ಬನ್‌ ಉದ್ಯಾನದಲ್ಲಿರುವ ಜವಾಹರ ಬಾಲಭವನದಲ್ಲಿ ನ.14ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ವಿವರ:
ಕೆ.ಆರ್‌. ನಿತೀನ್, ಪುತ್ತೂರು, ದಕ್ಷಿಣ ಕನ್ನಡ, ಸಿ.ಡಿ. ಕೃಷ್ಣ ನಾಯ್ಕ, ತ್ರಿಮೂರ್ತಿ ನಗರ, ಶಿವಮೊಗ್ಗ, ವೈಶಾಖ್, ಬಂಟ್ವಾಳ, ದಕ್ಷಿಣ ಕನ್ನಡ, ಜುನೇರಾ ಹರಂಮ್, ಮುಬಾರಕ್ ಮೊಹಲ್ಲಾ, ಚಾಮರಾಜನಗರ, ಎಚ್.ಕೆ. ದೀಕ್ಷಿತಾ ಮತ್ತು ಎಚ್.ಕೆ. ಅಂಬಿಕಾ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ನೇತ್ರಾವತಿ ಚವ್ಹಾಣ, ಹುನಗುಂದ, ಬಾಗಲಕೋಟೆ.
ವಿಶೇಷ ಪ್ರಶಸ್ತಿಗೆ ಭಾಜನವಾದ ಸಂಸ್ಥೆಗಳು
ಬೆಂಗಳೂರು ಮತ್ತಿಕೆರೆಯ ಸ್ಪರ್ಶ ಟ್ರಸ್ಟ್, ಚಾಮರಾಜನಗರದ ದೀನಬಂಧು ಸಂಸ್ಥೆ, ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆ, ಬೀದರ್‌ನ ಅರಳು ಸಂಸ್ಥೆ 
ವೈಯಕ್ತಿಕ ಪ್ರಶಸ್ತಿ
ಚ್.ಕೆ. ರಾಮನಾಥ(ಮಕ್ಕಳ ನಾಟಕ), ಮೈಸೂರು, ಬಿ.ಎಸ್. ನಂದಕುಮಾರ್(ಮಹಿಳಾ ಮತ್ತು ಮಕ್ಕಳ ಹಕ್ಕು), ತುಮಕೂರು, ಪದ್ಮಾ ಕೊಡಗು(ರಂಗಭೂಮಿ), ಧಾರವಾಡ, ಜೆ. ಆಡಿಸ್ ಆರ್ನಾಲ್ಡ್(ಮಕ್ಕಳ ಹಕ್ಕು), ಚಾಮರಾಜನಗರ.
ಇದೇ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವ 35 ಮಕ್ಕಳನ್ನು ರಾಷ್ಟ್ರ ಪ್ರಶಸ್ತಿಗೆ ಶಿಫಾರಸ್ ಮಾಡಲಾಗಿದೆ ಅವರ ವಿವರ ಹೀಗಿದೆ-
ಕ್ರೀಡೆ: ಶರೋಲ್ ಆ್ಯನಿ ಲೋಬೋ (ಉಡುಪಿ), ಸೋನಿಕ ಎಂ. ರಾಜ್ (ಹಾಸನ), ಯಂಕಣ್ಣ (ಬಾಗಲಕೋಟೆ), ಪ್ರಿಯದರ್ಶಿನಿ (ಉತ್ತರ ಕನ್ನಡ), ದಾನಮ್ಮ ಗುರವ (ಬಾಗಲಕೋಟೆ), ವೀಣಾ ಶಿವಪ್ಪ ಕಡಕೋಳ (ಬೆಳಗಾವಿ), ಕರುಣಾ ರಾಜನ್ ವಘೇಲಾ (ಬೆಳಗಾವಿ), ಜೈ ಶೈಲೇಶ್ ಪ್ರಭು (ಬೆಳಗಾವಿ), ಶ್ರದ್ಧಾ ಪಾಟೀಲ (ಬೀದರ್)
ಸಾಂಸ್ಕೃತಿಕ: ಅನಘ ಪ್ರಸಾದ್ (ತುಮಕೂರು), ಎಂ. ಅದ್ವಿಕಾ ಶೆಟ್ಟಿ (ದಕ್ಷಿಣ ಕನ್ನಡ), ಸಹನಾ ಬೇವೂರ್ (ಬಾಗಲಕೋಟೆ)
ನಾವಿನ್ಯತೆ: ಎ. ರಾಘವೇಂದ್ರ (ಬೆಂಗಳೂರು ಗ್ರಾಮಾಂತರ), ಕೋಟಾ ಅನಿಕೇತ್ ಶೆಣೈ (ಉಡುಪಿ), ಸ್ವಸ್ತಿಕ್ ಪದ್ಮ (ದಕ್ಷಿಣ ಕನ್ನಡ),  ಆಯುಷ್ ಕೆ. ತಮ್ಮಣ್ಣವರ್ (ಬೆಳಗಾವಿ), ಪಂಪನಗೌಡ (ರಾಯಚೂರು)
ಸಮಾಜ ಸೇವೆ: ನಿಖಿಯಾ ಶಂಷೇರ್ (ಬಳ್ಳಾರಿ), ಮಲ್ಲಮ್ಮ (ಕೊಪ್ಪಳ), ಕೆ.ಪಿ. ಸುಚಿತ್ರಾ (ಚಾಮರಾನಗರ), ಒ. ನಯನಾ (ಚಿತ್ರದುರ್ಗ)
ಸಂಗೀತ: ಎಂ. ನಿರೀಕ್ಷಾ (ಬೆಂಗಳೂರು), ಎನ್‌. ಪ್ರಜ್ವಲ್ (ಬೆಂಗಳೂರು), ಭೂಮಿಕಾ ಮಧುಸೂಧನ್ (ಬೆಂಗಳೂರು), ನಿಖಿಲ್ ಮೃತ್ಯುಂಜಯ ಹೂಲಿ (ಬಾಗಲಕೋಟೆ)
ಕಲೆ: ಕೆ. ಪ್ರದೀಶ್ (ಉಡುಪಿ), ಎಸ್‌.ವಿ. ವೈವಸ್ವತ ತಂಡುಲ (ಚಿಕ್ಕಮಗಳೂರು)
ತಾರ್ಕಿಕ: ಜಿ. ಮೋನಾ (ತುಮಕೂರು), ಎಲ್‌. ಅಗ್ನಿತೇಜ್‌ (ಚಿಕ್ಕಮಗಳೂರು), ಪಲ್ಲವಿ ಶಿರಹಟ್ಟಿ (ಬಾಗಲಕೋಟೆ)
ಇತರ: ಎಚ್‌. ವಿಶ್ವನಾಯಕ (ಬೆಂಗಳೂರು ಗ್ರಾಮಾಂತರ), ಎ.ಜಿ. ಐಶ್ವರ್ಯಾ (ಕೊಡಗು), ಮಹೇಶ್‌ ಮಹಾನಿಂಗಪ್ಪ ಗೌರಿ (ಬೆಳಗಾವಿ) ಮತ್ತು ಆರತಿ ಎ. ಮಡಿವಾಳ (ಉಡುಪಿ).
SCROLL FOR NEXT