ರಾಜ್ಯ

ಬಡವರ ಹಸಿವು ನೀಗಿಸಲು ನಿಸ್ವಾರ್ಥ ದಾಸೋಹ: ನಿತ್ಯ ತಾವೇ ಉಪ್ಪಿಟ್ಟು ತಯಾರಿಸಿ ಉಚಿತವಾಗಿ ನೀಡುವ ಕಲಬುರಗಿಯ ಹಿರಿಯ ಜೀವ

Manjula VN
ಕಲಬುರಗಿ: ಆಧುನಿಕ ಯುಗದಲ್ಲಿ ನಾನು, ನನ್ನದು ಎಂಬ ಸ್ವಾರ್ಥವೇ ತುಂಬು ತುಳುಕ್ಕಿರುವವರ ಮಧ್ಯೆ ಕಲಬುರಗಿಯಲ್ಲಿರುವ ನಿಸ್ವಾರ್ಥ ಹಿರಿಯ ಜೀವವೊಂದು ಪ್ರತೀನಿತ್ಯ ಬಡವರು, ಭಿಕ್ಷುಕರಿಗೆ ಹೊಟ್ಟೆಯನ್ನು ತುಂಬಿಸುತ್ತಿದ್ದಾರೆ. 
ಕಲಬುರಗಿಯಲ್ಲಿರುವ 75 ವರ್ಷದ ಮಹಾದಾಸೋಹಿ ವಿರೂಪಕಾಕ್ಷ ಜಂಬಣ್ಣ ನಾಗಲಿಕರ್ ಅವರು ಪ್ರತೀನಿತ್ಯ ಬೆಳಿಗ್ಗೆ ಬಡವರು ಹಾಗೂ ಭಿಕ್ಷುಕರಿಗೆ ಉಪ್ಪಿಟ್ಟು ಹಾಗೂ ಕೇಸರಿ ಬಾತ್ ನೀಡಿ ದಾಸೋಹ ನಡೆಸುತ್ತಿದ್ದಾರೆ. 
ಬೆಳಿಗ್ಗೆ 5 ಗಂಟೆಗೆ ಎದ್ದೇಳುವ ವಿರೂಪಾಕ್ಷ ಅವರು ತಾವೇ ತಮ್ಮ ಕೈಯಿಂದ ಅಡುಗೆ ಮಾಡಿ ಬೆಳಿಗ್ಗೆ 10.30ರವರೆಗೂ ಹಸಿದವರ ಹೊಟ್ಟೆಯನ್ನು ತುಂಬಿಸುತ್ತಿದ್ದಾರೆ, ಕಳೆದ 10 ವರ್ಷಗಳಿಂದಲೂ ವಿರೂಪಾಕ್ಷ ಅವರು ಈ ದಾಸೋಹವನ್ನು ನಡೆಸುತ್ತಿದ್ದಾರೆ. 
ಭಾನುವಾರವನ್ನು ಹೊರತು ಪಡಿಸಿ ವಾರದ 6 ದಿನಗಳೂ ಬಡವರಿಗೆ ಉಪ್ಟಿಟ್ಟು ಹಾಗೂ ಕೇಸರಿಬಾತ್ ನ್ನು ನೀಡಲಾಗುತ್ತಿದೆ. ಆರಂಭದಲ್ಲಿ ಜನರ ಸಂಖ್ಯೆ ಕಡಿಮೆಯಿತ್ತಾದರೂ ಇದೀಗ ಬಡವರು, ಭಿಕ್ಷಕರು ಹಾಗೂ ಮಧ್ಯಮವರ್ಗದ ಜನರು ಸಾಲಿನಲ್ಲಿ ನಿಂತು ಆಹಾರವನ್ನು ತೆಗೆದುಕೊಂಡು ಹೋಗುತ್ತಿದ್ದಾರೆಂದು ಸ್ಥಳೀಯರು ಹೇಳಿದ್ದಾರೆ. 
ವಿರೂಪಾಕ್ಷ ಅವರು ಬಟ್ಟೆಯನ್ನು ಅಂಗಡಿಯೊಂದನ್ನು ನಡೆಸುತ್ತಿದ್ದು, ಬಡವರಿಗೆ ಸಹಾಯದ ಹಸ್ತವನ್ನು ಚಾಚುತ್ತಿದ್ದರು. ಒಮ್ಮೆ ಗೆಳೆಯರೊಬ್ಬರು ಹಣವನ್ನು ನೀಡುವ ಬದಲು ಬಡವರಿಗೆ ಆಹಾರ ನೀಡುವಂತೆ ಸಲಹೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ವಿರೂಪಾಕ್ಷ ಅವರು ಅಂದಿನಿಂದ ತಮ್ಮ ಅಂಗಡಿಯ ಮುಂದೆಯೇ ಬಡವರಿಗೆ ಸಿಹಿ ಹಂಚಲು ಆರಂಭಿಸಿದ್ದರು. ವಯಸ್ಸಾದ ಬಳಿಕ ಮಕ್ಕಳು ಮನೆಯಲ್ಲಿರುವಂದೆ ಸೂಚಿಸಿದ್ದರು. ಬಳಿಕ ಬಡವರ ಹೊಟ್ಟೆ ತುಂಬಿಸಲು ಮುಂದಾದ ವಿರೂಪಾಕ್ಷ ಅವರು ಸ್ವತಃ ತಾವೇ ಉಪ್ಪಿಟ್ಟನ್ನು ತಯಾರಿಸಿ ಮನೆ ಮುಂದೆ ಬರುವ ಬಡವರಿಗೆ ಹಂಚಲು ಆರಂಭಿಸಿದ್ದರು. 
ನಮಸ್ಕಾರವೆಂದು ಮನೆ ಬಾಗಿಲಿಗೆ ಬರುವ ಜನರಿಗೆ ಪ್ರಸಾದ ತಿನ್ನುವಂತೆ ತಿಳಿಸಿ ಉಪ್ಪಿಟ್ಟು ಹಾಗೂ ಕೇಸರಿ ಬಾತ್ ನೀಡಲು ಆರಂಭಿಸಿದ್ದರು. ವರ್ಷಗಳ ಹಿಂದೆ ವ್ಯಾಪಾರ ಬಿಟ್ಟು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದರು. ಇದೀಗ ನಾನು ಬಡವರಿಗೆ ಸಹಾಯ ಮಾಡಲು ಮುಂದಾಗಿದ್ದೇನೆ. ಪ್ರತೀದಿನ ರೂ.500 ಖರ್ಚಾಗುತ್ತಿದ್ದು, ತಿಂಗಳಿಗೆ ರೂ.13,000 ವೆಚ್ಚವಾಗುತ್ತಿದೆ ಎಂದು ವಿರೂಪಾಕ್ಷ ಅವರು ಹೇಳಿದ್ದಾರೆ. 
ನನ್ನ ಪುತ್ರ ವೈದ್ಯನಾಗಿದ್ದು, ನನ್ನ ಈ ಕಾರ್ಯಕ್ಕೆ ಕುಟುಂಬಸ್ಥರು ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದ್ದಾರೆ. 
ಪ್ರತಿ ನಿತ್ಯ ಅಜ್ಜ ನೀಡುವ ಉಪ್ಪಿಟ್ಟನ್ನು ತೆಗೆದುಕೊಳ್ಳಲು ಬಹಳ ಇಷ್ಟವಾಗುತ್ತದೆ. ಬಹಳ ಇಷ್ಟಪಟ್ಟು ಇಲ್ಲಿಗೆ ಬರುತ್ತೇವೆಂದು ಸ್ಥಳೀಯರು ಹೇಳಿದ್ದಾರೆ. 
ಕಳೆದ 5 ವರ್ಷಗಳಿಂದಲೂ ಅಜ್ಜನ ಮನೆಯ ಮುಂದೆ ಬರುತ್ತಿದ್ದೇನೆ. ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಬೆಳಿಗ್ಗೆ 8.30ಕ್ಕೆ ಏದ್ದೇಳುತ್ತಾರೆ. ನಾನು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗಬೇಕು. ಹೀಗಾಗಿ ನಾನು ಅಜ್ಜನ ಮನೆಯ ಬಳಿ ಬಂದು ಆಹಾರವನ್ನು ತೆಗೆದುಕೊಂಡು ತಿಂದು ಹೋಗುತ್ತೇನೆಂದು ದಿನಗೂಲಿ ಕಾರ್ಮಿಕ ತಜೋದ್ದೀನ್ ಅವರು ಹೇಳಿದ್ದಾರೆ. 
ಭಕ್ತಿ ಹಾಗೂ ಪ್ರೀತಿಯಿಂದ ಉಪ್ಪಿಟ್ಟನ್ನು ನೀಡಲಾಗುತ್ತಿದೆ ಎಂದು ಕಲುಬುರಗಿ ಮಹಾನಗರ ಪಾಲಿಕೆ ಕೆಲಸಗಾರರ ರೇವಣ್ಣಪ್ಪ ಹೇಳಿದ್ದಾರೆ. 
ಅಜ್ಜ ನೀಡುವ ಉಪ್ಪಿಟ್ಟನ್ನು ತಿಂದ ಬಳಿಕವೇ ನಾನು ಕೆಲಸಕ್ಕೆ ಹೋಗುತ್ತೇನೆಂದು ತರಕಾರಿ ವ್ಯಾಪಾರಸ್ಥೆ ಶಿವಭಾಯಿಯವರು ತಿಳಿಸಿದ್ದಾರೆ. 
SCROLL FOR NEXT