ಗೌರಿ ಲಂಕೇಶ್ 
ರಾಜ್ಯ

ಬೆಳಗಾವಿ ಅಧಿವೇಶನ: ವಿಧಾನ ಪರಿಷತ್ ನಲ್ಲಿ ಗೌರಿ ಲಂಕೇಶ್ ಗಿಲ್ಲ ಸಂತಾಪ!

ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ವಿಧಾನಸಭೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ....

ಬೆಳಗಾವಿ: ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲ ದಿನ ಶಾಸಕರ ಹಾಜರಾತಿ ಅತ್ಯಂತ ವಿರಳವಾಗಿತ್ತು. ಮೊದಲ ದಿನದ ಅಧಿವೇಶನ ಪ್ರಾರಂಭವಾದಾಗ ಒಟ್ಟು ಶಾಸಕರ ಪೈಕಿ ಶೇ .10 ರಷ್ಟು ಕೇವಲ 22 ಶಾಸಕರು ಮಾತ್ರ ಉಪಸ್ಥಿತರಿದ್ದರು. ದಿನದ ಅಂತ್ಯದ ವೇಳೆಗೆ 224 ಶಾಸಕರ ಪೈಕಿ 80 ಮಂದಿ ಅಷ್ಟೇ ಹಾಜರಿದ್ದರು.
ಆರಂಭದ ದಿನವೇ ಅಗತ್ಯ ಕೋರಂ ಇಲ್ಲದಿದ್ದರಿಂದ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಬೇಸರ ವ್ಯಕ್ತಪಡಿಸಿದರು. ಬೆಳಿಗ್ಗೆ 11ಗಂಟೆಗೆ ಸದನ ಪ್ರಾರಂಭವಾಗಬೇಕಾಗಿದ್ದಾಗ ಅಗತ್ಯ ಸಂಖ್ಯೆಯಲ್ಲಿ ಸದಸ್ಯರು ಇಲ್ಲದ ಕಾರಣ ಸದನವನ್ನು ಕೆಲ ಕಾಲ ಮುಂದೂಡಬೇಕಾಯಿತು.
"ಕೋರಂ ಇಲ್ಲದಿರುವುದರಿಂದ ನೋವಿನಿಂದ ಸದನವನ್ನು ಕೆಲ ಸಮಯ ಮುಂದೂಡುತ್ತಿದ್ದೇನೆ" ಎಂದ ಸಭಾಧ್ಯಕ್ಷ  ಕೋಳಿವಾಡ ಹೇಳಿದ್ದ ಸಮಯದಲ್ಲಿ ಪ್ರಮುಖ ಸಚಿವರುಗಳಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪ ಮಾತ್ರವೇ ಉಪಸ್ಥಿತರಿದ್ದರು.. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಹಿರಿಯ ಕ್ಯಾಬಿನೆಟ್ ಮಂತ್ರಿಗಳು ಮತ್ತು ಇತರ ಪ್ರಮುಖ ನಾಯಕರು ಸಹ ನಂತರ ಸಭೆಗೆ ಆಗಮಿಸಿದ್ದರು.
ಕಡೆಗೆ ಸದನ ಪ್ರಾರಂಬವಾದಾಗಲೂ ಹಾಜರಿದ್ದ ಸದಸ್ಯರ ಸಂಖ್ಯೆ ಕೇವಲ 30. ಮಧ್ಯಾಹ್ನ 12 ಗಂಟೆ ಗೆ ಸದನದಲ್ಲಿ 55 ಸದಸ್ಯರು ಉಪಸ್ಥಿತರಿದ್ದರು. ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಸಲುವಾಗಿ ನಿರ್ಣಯ ಕೈಗೊಂಡರು. ಆ ವೇಳೆ ಸದಸ್ಯ ಬಲ 130 ಆಗಿತ್ತು.
ಇನ್ನು ವಿಧಾನ ಪರಿಷತ್ತಿನಲ್ಲಿ ಸಹ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕಡ್ದಾಯವಾಗಿ ಹಾಜರಾಗಬೇಕಿದ್ದ ಸಚಿವರ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆ ಕಂಡಿತ್ತು. ಇದರಿಂದ ಕೆರಳಿದ ಬಿಜೆಪಿ ಶಾಸಕರು ತಾವು ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿಕ್ಕಾಗಿ ಇಲ್ಲಿ ಸೇರಿದ್ದೇವೆ ಆದರೆ ಇಲ್ಲಿ ಸಚಿವರೇ ಇಲ್ಲದ ಕಾರಣ ನಾವಾರನ್ನು ಕೇಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸೋಮವಾರದ ಕಾರ್ಯಸೂಚಿ ಪಟ್ಟಿಯಂತೆ ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಉತ್ತರಿಸಬೇಕಾದ ಸಚಿವರ ಪಟ್ಟಿಯಲ್ಲಿ ರಮೇಶ್‌ಕುಮಾರ್‌, ಆಂಜನೇಯ, ಯು.ಟಿ.ಖಾದರ್‌, ಉಮಾಶ್ರಿ, ಡಾ.ಶರಣಪ್ರಕಾಶ್‌ ಪಾಟೀಲ್‌, ಎಂ.ಆರ್‌.ಸೀತಾರಾಂ, ಪ್ರಿಯಾಂಕ್‌ ಖರ್ಗೆ ಇವರೇ ಮೊದಲಾದವರ ಹೆಸರುಗಳಿದ್ದವು. ಆದರೆ, ಸದನ ಆರಂಭವಾದಾಗ ಆಂಜನೇಯ, ಸೀತಾರಾಂ, ಖಾದರ್‌ ಮಾತ್ರ ಇದ್ದರು.
ಇನ್ನು 224-ಸದಸ್ಯರ ಬಲದ ವಿಧಾನ ಸಭೆಯಲ್ಲಿ 80 ಸದಾಸ್ಯರು ಮಾತ್ರವೇ ಹಾಜರಾಗಿದ್ದರು. ಅವರುಗಳಲ್ಲಿ 6 ಜೆಡಿ (ಎಸ್) , 15 ಬಿಜೆಪಿ ಮತ್ತು 51 ಕಾಂಗ್ರೆಸ್ ಶಾಸಕರು ಸೇರಿದ್ದಾರು. ಶಾಸಕರಲ್ಲಿನ ಈ ಅಸಡ್ಡೆಯ ಮನೋಭಾವನೆ ವಿಧಾನ ಮಂಡಲ ಅಧಿವೇಶನದ ಕುರಿತಂತೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಸಿದೆ. ಬೆಳಗಾವಿ ಅಧಿವೇಶನ ಕೇವಲ ವಾರ್ಷಿಕ ಕಾರ್ಯಕ್ರಮವೆ? ಎನ್ನುವಂತಹಾ ಪ್ರಶ್ನೆಯನ್ನು ಅದು ಎತ್ತಿದೆ.
ಸುವರ್ಣ ವಿಧಾನ ಸೌಧವನ್ನು 400 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಇದನ್ನು ವರ್ಷದಲ್ಲಿ ಕೇವಲ ಒಂದು ವಾರವಷ್ಟೇ ಬಳಸಲಾಗುತ್ತದೆ. ಉಳಿದ 350 ದಿನಗಳು ಖಾಲಿ ಇರುತ್ತದೆ . ಬೆಳಗಾವಿಯಲ್ಲಿ ನಡೆಯುತ್ತಿರುವ 10 ದಿನಗಳ ಅಧಿವೇಶನಕ್ಕೆ 26 ಕೋಟಿ  ರೂ. ವೆಚ್ಚವಾಗಲಿದೆ. ಅಂದರೆ ಒಂದು  ದಿನಕ್ಕೆ 2.6 ಕೋಟಿ  ರೂ.ಖರ್ಚು ತಗುಲಲಿದೆ. ಇಷ್ಟೋಂದು ದುಬಾರಿ ಖರ್ಚು ವೆಚ್ಚಗಳಲ್ಲಿ ನಡೆವ ಅಧಿವೇಶನಕ್ಕೆ ಶಾಸಕರು ಹಾಜರಾಗದೆ ಇದ್ದಲ್ಲಿ ಜನಸಾಮಾನ್ಯರ ಸಮಸ್ಯೆ ಪರಿಹಾರವಾಗುವುದೆ? ತೆರಿಗೆದಾರರ ಹಣವನ್ನು ಪೋಲು ಮಾಡಿದಂತಾಗುವುದಿಲ್ಲವೆ ಎನ್ನುವುಉದು ಪ್ರತಿಯೊಬ್ಬ ನಾಗರಿಕನ ಪ್ರಶ್ನೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ