ರಾಜ್ಯ

ಇಸ್ರೋದಿಂದ ಬೆಂಗಳೂರಿನಲ್ಲಿ ರಾಕೆಟ್ ಉಡಾವಣೆ

Raghavendra Adiga
ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬೆಂಗಳೂರಿನಿಂದ ರಾಕೆಟ್ ಉಡಾವಣೆ ಮಾಡಿದೆ. ಬಾಹ್ಯಾಕಾಶ ಯಾನದಲ್ಲಿ ನೂತನ ಮೈಲಿಗಲ್ಲುಗಳನ್ನು ಸ್ಥಾಪಿಸಿರುವ ಇಸ್ರೋ ಇದೀಗ ಶಾಲಾ ಮೈದಾನದಲ್ಲಿ ನೀರಿನ ರಾಕೆಟ್ ಉದಾವಣೆ ಮಾಡುವ ಮೂಲಕ ಹೊಸ ಪ್ರಯೋಗ ನಡೆಸಿದೆ.
ಜಪಾನ್ ಏರೋಸ್ಪೇಸ್ ಎಕ್ಸ್ಪೋರೇಷನ್ ಏಜೆನ್ಸಿ (ಜೆಎಎಕ್ಸ್ ಎ) ಮತ್ತು ಜಪಾನೀಸ್ ಶಿಕ್ಷಣ, ಸಂಸ್ಕೃತಿ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (ಎಂಇಎಕ್ಸ್ ಟಿ), ಜತೆಗೂಡಿ ಇಸ್ರೋ ಈ ರಾಕೆಟ್ ಉದಾವಣೆ ಕಾರ್ಯಕ್ರಮ ಆಯೋಜಿಸಿತ್ತು. ಕಾಂಬೋಡಿಯಾ , ಥೈಲ್ಯಾಂಡ್, ಜಪಾನ್, ಕೊಲಂಬಿಯಾ ಮತ್ತು ಇತರ ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ದೇಶಗಳ 11 ತಂಡಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು.
ಸಾಫ್ಟ್ ಡ್ರಿಂಕ್ಸ್ ಸಂಸ್ಥೆಗಳಲ್ಲಿ ಬಳಸುವಂತಹಾ ಎರಡು ದೊಡ್ಡ ಬಾಟಲಿಗಳು, ಪಿವಿಸಿ ಶೀಟುಗಳು, ನಿರೋಧಕ ಟೇಪುಗಳು ಮತ್ತು ಕ್ಲೇ ಮಾದರಿಗಳನ್ನು ಬಳಸಿ ಈ ನೀರಿನ ರಾಕೆಟ್ ಗಳನ್ನು ತಯಾರಿಸಲಾಗಿತ್ತು ರಾಕೆಟ್ ಗಳಲ್ಲಿ ಸ್ವಲ್ಪ ನೀರನ್ನು ತುಂಬಿಸಿ ನಂತರ ಅದನ್ನು ಉಡಾವಣೆ ಗೊಳಿಸಲಾಯಿತು. ಈ ರಾಕೆಟ್ ಗಳು, 100 ಮೀಟರ್ಗಳಷ್ಟು ಪ್ರಯಾಣಿಸಿ ಐದು ಅಂತಸ್ತಿನ ಕಟ್ಟಡದಷ್ಟು  ಎತ್ತರವನ್ನು ತಲುಪಿದ್ದವು. ಭಾನುವಾರ, ಇಂದಿರಾನಗರದಲ್ಲಿರುವ ಕೆ ವಿ ಸ್ಕೂಲ್ ಸುತ್ತಲಿನ ನಿವಾಸಿಗಳು ವಿಜ್ಞಾನದ ಈ ನೂತನ ಪ್ರಯೋಗಕ್ಕೆ ಸಾಕ್ಷಿಯಾದರು.
ಏಷ್ಯಾ ಪೆಸಿಫಿಕ್ ಪ್ರಾದೇಶಿಕ ಬಾಹ್ಯಾಕಾಶ ಏಜೆನ್ಸಿ ಫೋರಮ್ (ಎಪಿಆರ್ಎಸ್ಎಫ್) ದ ಆಶ್ರಯದಲ್ಲಿ ಆಯೋಜಿಸಿರುವ ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ರಾಕೆಟ್ ವಿಜ್ಞಾನವನ್ನು ಬೋಧನೆ ಮಾಡುವ ಗುರಿಯನ್ನು ಹೊಂದಿದೆ.  "ಇಸ್ರೋ ನೀರಿನ ರಾಕೆಟ್ ಉಡಾವಣೆಯು ಪ್ರಭಾವ ಕಾರ್ಯಕ್ರಮದ ಒಂದು ಭಾಗವಾಗಿದೆ," ಎಂದು ಇಸ್ರೋ ತಿಳಿಸಿದೆ.
SCROLL FOR NEXT