ಸ್ಕೂಬಾ ಡೈವಿಂಗ್ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿರುವ ತಜ್ಞ
ಉಡುಪಿ: ಸಮುದ್ರದ ಜೀವ ವೈವಿಧ್ಯ ಹಾಗೂ ಸೌಂದರ್ಯವನ್ನು ವೀಕ್ಷಿಸುವ ಸ್ಕೂಬಾ ಡೈವಿಂಗ್ ಜಲಕ್ರೀಡೆಯನ್ನು ಉಡುಪಿಯ ಕಾಪು ಕಡಲ ತೀರದಲ್ಲಿ ಭಾನುವಾರ ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟನೆ ನೆರವೇರಿಸಿದರು.
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಈ ಸಾಹಸ ಜಲಕ್ರೀಡೆಗೆ ಸೂಕ್ತ ಜಾಗವನ್ನು ಪರಿಶೀಲಿಸಿ ಅಂತಿಮವಾಗಿ ಬೋಟ್ ಫೆಡರೇಷನ್ ನೀಡಿದ ಅಭಿಪ್ರಾಯದಂತೆ ಕಾಪು ಬೀಚ್ ನಿಂದ ಸಮುದ್ರದಲ್ಲಿ 8 ಕಿ.ಮೀ ದೂರದ ಮೂಲ್ಕಿ ಪಾಲ್ ಎಂಬಲ್ಲಿ ಸ್ಕೂಬಾ ಡೈವಿಂಗ್ ಗೆ ಅವಕಾಶ ನೀಡಲಾಗಿದೆ.
ಇಲ್ಲಿನ ಸಮುದ್ರದಾಳದಲ್ಲಿ ಹವಳದ ದಿಬ್ಬ, ಆಕರ್ಷಕ ಮೀನುಗಳು ಹಾಗೂ ವೈವಿಧ್ಯಮಯವಾದ ಜಲ ಜೀವರಾಶಿ ಇದೆ. ಅಲ್ಲದೆ, ದೃಶ್ಯಗಳು ಇತರೆಡೆಗಿಂತ ಸ್ಪಷ್ಟವಾಗಿ ಕಾಣಿಸಲಿವೆ. ಸ್ಕೂಬಾ ಡೈವಿಂಗ್ ನಡೆಸಲು ವೆಸ್ಟ್ ಕೋ ಅಡ್ವೆಂಚರ್ಸ್ ಕಂಪನಿ ಉಡುಪಿ ಜಿಲ್ಲಾಡಳಿತದಿಂದ 3 ವರ್ಷಗಳ ಗುತ್ತಿಗೆ ಪಡೆದಿದ್ದು, ಇದೇ ಕಂಪನಿ ಈಗಾಗಲೇ ಗೋವಾ, ಮುಂಬೈ ಮತ್ತು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿದೆ.
ಕಾಪು ಕಡಲತೀರದಲ್ಲಿ ಸ್ಕೂಬಾ ಡೈವಿಂಗ್'ಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಸೊರಕೆಯವರು, ಕಾಪು ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಇನ್ನು ಸ್ಕೂಬಾ ಡೈವಿಂಗ್ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿಲಿದೆ. ಜಿಲ್ಲೆಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ದೃಷ್ಠಿಯಿಂದ ಪಡುಬಿದ್ರೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ ಅನುಕೂಲವೆಂಬ ಅಭಿಮತ ಸರ್ಕಾರದ ಮಟ್ಟದಲ್ಲೂ ಇದೆ ಎಂದು ಹೇಳಿದ್ದಾರೆ.
ವೆಸ್ಟ್ ಕೋ ಅಡ್ವೆಂಚರ್‌ನ ವ್ಯವಸ್ಥಾಪಕ ಪವನ್ ಶೌರಿ ಮಾತನಾಡಿ, ಜಿಲ್ಲೆಯಲ್ಲಿ 2 ವರ್ಷಗಳಿಂದ ಈ ಸಾಹಸ ಜಲಕ್ರೀಡೆಗೆ ಸೂಕ್ತ ಜಾಗವನ್ನು ಪರಿಶೀಲಿಸಿ ಅಂತಿಮವಾಗಿ ಬೋಟ್ ಫೆಡರೇಷನ್ ನೀಡಿದ ಆಭಿಪ್ರಾಯದಂತೆ ಕಾಪು ಬೀಚ್‌ನಿಂದ ಸಮುದ್ರದಲ್ಲಿ 8 ಕಿಮೀ ದೂರದಲ್ಲಿನ ಮೂಲ್ಕಿ ಪಾರ್ ಎಂಬಲ್ಲಿ ಸ್ಕೂಬಾ ಡೈವಿಂಗ್‌ಗೆ ಅವಕಾಶ ದೊರೆತಿದೆ. ಇಲ್ಲಿನ ಸಮುದ್ರದಾಳದಲ್ಲಿ ಹವಳದ ದಿಬ್ಬಗಳು, ಆಕರ್ಷಕ ಮೀನುಗಳು ಹಾಗೂ ವೈವಿಧ್ಯಮಯವಾದ ಜಲ ಜೀವರಾಶಿ ಇದೆ. ಅಲ್ಲದೆ, ಇಲ್ಲಿ ನೀರಿನಾಳದ ದೃಶ್ಯಗಳು ಇತರೆಡೆಗಿಂತ ಅತ್ಯಂತ ಸ್ಪಷ್ಟವಾಗಿ ತೋರಲಿದೆ. ಇದಕ್ಕೆ ಅಗತ್ಯವಾದ ರೂ.35 ಲಕ್ಷ ವೆಚ್ಚದ ಎಲ್ಲಾ ಜೀವ ರಕ್ಷಕ ಉಪಕರಣಗಳು ಇಲ್ಲಿ ಲಭ್ಯವಿದೆ. ಒಬ್ಬರಿಗೆ ರೂ.3,500 ಶುಲ್ಕ ನಿಗದಿಪಡಿಸಿದ್ದು, ಕಾರವಾರದ ನೇತ್ರಾಣಿ ದ್ವೀಪದಲ್ಲಿ ರೂ.6,000 ದರವಿದೆ ಎಂದು ತಿಳಿಸಿದ್ದಾರೆ.
ಸ್ಕೂಬಾ ಡೈವಿಂಗ್ ಗೆ ಈಜು ಬರಬೇಕೆಂಬ ನಿಯಮವಿಲ್ಲ. 10 ವರ್ಷ ಮೇಲ್ಪಟ್ಟ ಎಲ್ಲರೂ ಭಾಗವಹಿಸಬಹುದು. 71 ವರ್ಷದ ವೃದ್ಧೆ ಒಬ್ಬರು ಈಗಲೂ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾರೆ. ಆದರೆ, ಹೃದಯರೋಗ ಸೇರಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂಬ ಬಗ್ಗೆ ಸ್ವಯಂ ಘೋಷಿತ ಪತ್ರಕ್ಕೆ ಸಹಿ ಮಾಡಬೇಕು. ನುರಿತ ತರಬೇತುದಾರರ ಸಹಾಯದಿಂದ ಡೈವಿಂಗ್ ಮಾಡಬಹುದು.
ಸ್ಕೂಬಾ ಡೈವಿಂಗ್ ನಡೆಸಲು ವೆಸ್ಟ್ ಕೋ ಅಡ್ವೆಂಚರ್ಸ್ ಕಂಪೆನಿ ಗುತ್ತಿಗೆ ಪಡೆದಿದ್ದು, ಇದೇ ಕಂಪೆನಿ ಗೋವಾ, ಮುಂಬೈ ಮತ್ತು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿದೆ. ಈ ಕಂಪೆನಿ ಉಡುಪಿ ಜಿಲ್ಲಾಡಳಿತದಿಂದ 3 ವರ್ಷಗಳ ಗುತ್ತಿಗೆ ಪಡೆದುಕೊಂಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos