ರಾಜ್ಯ

ಮುಂದುವರೆದ ವೈದ್ಯರ ಮುಷ್ಕರ: ರೋಗಿಗಳ ಪರದಾಟ

Manjula VN
ಬೆಂಗಳೂರು: ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ಬೆಳಗಾವಿಯಲ್ಲಿ ನಡಸಿದ ಮುಷ್ಕರದ ಬಿಸಿ ಸೋಮವಾರ ರಾಜಧಾನಿಯಲ್ಲಿರುವ ರೋಗಿಗಳಿಗೆ ತಟ್ಟಿದೆ. 
ವೈದ್ಯರ ಕೊರತೆಯಿಂದಾಗಿ ನಗರದ ಕಿಮ್ಸ್, ಅಪೋಲೋ, ಎಂ.ಎಸ್ ರಾಮಯ್ಯ ಆಸ್ಪತ್ರೆಗಳು ಸೇರಿದಂತೆ ನಗರತ ಕೆಲ ಆಸ್ಪತ್ರೆಗಳು ಹೊರರೋಗಿಗಳ ಚಿಕಿತ್ಸೆಯನ್ನು ಬಂದ್ ಮಾಡಿದ್ದವು. 
ಕೆಪಿಎಂಇ ತಿದ್ದುಪಡಿ ಕಾಯ್ದೆ ವಿರೋಧಿಸಿ 20,000 ವೈದ್ಯರು ನಿನ್ನೆ ಬೆಳಗಾವಿ ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ. ರೋಗಿಗಳು ಪರದಾಡುವಂತಾಗಿತ್ತು. 
ಪ್ರತಿಭಟನೆ ಕುರಿತಂತೆ ಮಾತನಾಡಿರುವ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ವೀರಣ್ಣ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆವು. ಮಾತುಕತೆ ವೇಳೆ ನಮ್ಮ ಆಗ್ರಹಗಳ ಕುರಿತಂತೆ ಅಧಿವೇಶನ ಸಂದರ್ಭದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಚರ್ಚೆಯಾಗುವವರೆಗೂ ನಾವು ಸುಮ್ಮನೆ ಕೂರಬೇಕಿದೆ. ಹೀಗಾಗಿ ನಮ್ಮ ಪ್ರತಿಭಟನೆಯನ್ನು ನಾವು ಮುಂದುವರೆಸುತ್ತಿದ್ದೇವೆ. ಇಂದು ಕೂಡ 300 ವೈದ್ಯರು ಆಗ್ರಹಗಳು ಈಡೇರಿವವರೆಗೂ ಉಪವಾಸ ಸತ್ಯಾಗ್ರಹ ಕೂರುತ್ತಿದ್ದಾರೆ. ಬೆಂಗಳೂರಿನಲ್ಲಿಯೂ 1,500 ರಿಂದ 2,000 ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆಂದು ಹೇಳಿದ್ದಾರೆ. 
ಹೆಲ್ತ್ ಕೇರ್ ಗ್ಲೋಬಲ್ ಮುಖ್ಯಸ್ಥ ಡಾ.ಬಿ.ಎಸ್. ಅಜಯ್ ಕುಮಾರ್ ಅವರು ಮಾತನಾಡಿ, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಬೆಂಗಳೂರು ಮತ್ತು ಕಲಬುರ್ಗಿಯಲ್ಲಿರುವ ನಮ್ಮ ಆಸ್ಪತ್ರೆಗಳ 100ಕ್ಕೂ ಹೆಚ್ಚು ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ನಮ್ಮ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಚಿಕಿತ್ಸೆಯನ್ನು ಬಂದ್ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ. 
ಕೆಂಪೇಗೈಡ ವೈದ್ಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ (ಒಪಿಡಿ) ಸಂಪೂರ್ಣ ಬಂದ್ ಮಾಡಲಾಗಿತ್ತು. ಹೀಗಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ನಗರ ಸೇರಿದಂತೆ ದೂರದ ಊರುಗಳಿಂಗ ಆಗಮಿಸಿದ್ದ ರೋಗಿಗಳು ಚಿಕಿತ್ಸೆ ದೊರೆಯದೆ ವಾಪಸ್ ಆಗಬೇಕಾಯಿತು. ಜ್ವರ ಸೇರಿದಂತೆ ಕೆಲ ಸಮಸ್ಯೆಗಳಿಗೆ ಚಿಕಿತ್ಸೆಗೆ ಆಗಮಿಸಿದ್ದ ಜನರು ಬೇರೆ ಆಸ್ಪತ್ರೆಗಳಿದೆ ದಾರಿ ಹಿಡಿದು ಹೋಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. 
ಫೋರ್ಟಿಸ್ ಆಸ್ಪತ್ರೆಯ ವೈದ್ಯ ವಿವೇದ್ ಜವಾಲಿಯವರು ಮಾತನಾಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಮಗೆ ಸಮಯವಿಲ್ಲ. ಅರ್ಧದಷ್ಟು ನಮ್ಮ ಸಿಬ್ಬಂದಿಗಳು ಹೊರರೋಗಿಗಳ ವಿಭಾಗದಲ್ಲಿ ಕೆಲಸ ಮಾಡತ್ತಿದ್ದಾರೆಂದು ಹೇಳಿದ್ದಾರೆ. 
ಅಪೋಲೋ ಆಸ್ಪತ್ರೆಯ ವೈದ್ಯ ಗೋವಿಂದಯ್ಯ ಯತೀಶ್ ಅವರು ಮಾತನಾಡಿ, 150 ವೈದ್ಯರು ಪ್ರತಿಭಠನೆಯಲ್ಲಿ ಭಾಗಿಯಾಗಿದ್ದಾರೆಂದು ತಿಳಿಸಿದ್ದಾರೆ. 
SCROLL FOR NEXT