ತುಮಕೂರು: ನಿಧಿ ಆಸೆ ತೋರಿಸಿ ವಂಚಿಸುತ್ತಿದ್ದ ಗ್ಯಾಂಗ್ ಪೋಲೀಸರ ವಶ
ತುಮಕೂರು: ನಿಧಿ ಆಸೆ ತೋರಿಸಿ ಯುವತಿಗೆ ವಂಚಿಸಲು ಯತ್ನಿಸಿದ್ದ ವಂಚಕರ ಗ್ಯಾಂಗ್ ಒಂದನ್ನು ತುಮಕೂರು ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ.
ನಿನ್ನೆ ತಡರಾತ್ರಿ ಕಾರ್ಯಾಚರಣೆಗಿಳಿದ ಪೋಲೀಸರು ನಿಧಿ ಹೆಸರಿನಲ್ಲಿ ಇಜ್ಜಿಲು ತುಂಬಿ ಕೊಡುತ್ತಿದ್ದ ಗ್ಯಾಂಗ್ ನ್ನು ಬಂಧಿಸಿದ್ದಾರೆ. ಯಲ್ಲಾಪುರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಸ್ಥಳೀಯ ಯುವತಿಯೊಬ್ಬಳಿಗೆ ನಿಧಿ ನೀಡುವುದಾಗಿ ಆಸೆ ತೋರಿಸಿ ಈ ಗ್ಯಾಂಗ್ ನವರ್ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದೆ.ಇದೇ ತಕ್ಷಣ ಯುವತಿ ಈ ವಿಚಾರವನ್ನು ಪೋಲೀಸರಿಗೆ ತಿಳಿಸಿದ್ದಾಳೆ.ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಗ್ರಾಮಾಂತರ ಠಾಣೆ ಡಿಸಿಬಿ ಇನ್ಸ್‌ಪೆಕ್ಟರ್ ರಾಘವೇಂದ್ರ ಅವರನ್ನೊಳಗೊಂಡ ತಂಡ ಹಣ ನೀಡುವ ನೆಪದಲ್ಲಿ ಗ್ಯಾಂಗ್ ನ ಸಂಪರ್ಕ ಸಾಧಿಸಿದೆ. ಆ ವೇಳೆ ಗ್ಯಾಂಗ್ ನ ಸದಸ್ಯರಾದ ಹರೀಶ್ ಮತ್ತು ರಮೇಶ್ ಎನ್ನುವವರು ಪೋಲೀಸರ ಬಲೆಗೆ ಬಿದ್ದಿದ್ದಾರೆ.
ಕಾರ್ಯಾಚರಣೆ ನಡೆದ ವೇಳೆ ಗ್ಯಾಂಗ್ ನ ಇನ್ನಿಬ್ಬರು ಸದಸ್ಯರು ತಪ್ಪಿಸಿಕೊಂಡಿದ್ದು ಅವರ ಪತ್ತೆಗೆ ಕ್ರಮ ಕೈಗೊಂಡಿರುವುದಾಗಿ ಪೋಲೀಸ್ ಮೂಲಗಳು ತಿಳಿಸಿದೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos