ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ( ಬಿಎಂ ಆರ್ ಸಿ ಎಲ್) ಅಧಿಕಾರಿಗಳು ಈಗ ಹೆಬ್ಬಗೋಡಿ ಬಳಿ ಮೆಟ್ರೋ ಕಾಮಗಾರಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.ಇದು ಆರ್ ವಿ ರಸ್ತೆ, ಬೊಮ್ಮಸಂದ್ರದ ಲೇನ್ ನಲ್ಲಿನ ಮೆಟ್ರೋ ನಿಲ್ದಾಣಕ್ಕೆ ಅಗತ್ಯವಾಗಿದ್ದು ಇದು ಫೇಸ್ II ನ ರೀಚ್ 5 ಅಡಿಯಲ್ಲಿ ಬರಲಿದೆ. ಹೆಬ್ಬಗೋಡಿ ಡಿಪೋ ನಿರ್ಮಾಣಕ್ಕಾಗಿ 30 ಎಕರೆಯಷ್ಟು ಜಾಗದ ಅಗತ್ಯವಿದೆ. "ಭೂ ಮಾಲೀಕರು ಭೂಮಿ ಸ್ವಾದೀನದ ವಿರುದ್ಧ ಎರಡನೇ ಬಾರಿಗೆ ಬಿಎಂ ಆರ್ ಸಿ ಎಲ್ ಅನ್ನು ಕೋರ್ಟ್ ಗೆ ಎಳೆದಿದ್ದಾರೆ",ಎಂದು ಬಿಎಂ ಆರ್ ಸಿ ಎಲ್ ಜನರಲ್ ಮ್ಯಾನೇಜರ್ (ಜಿಎಂ) ಎಂ ಎಸ್ ಚೆನ್ನಪ್ಪ ಗೌಡರ್ ಅವರು ಎಕ್ಸ್ ಪ್ರೆಸ್ ಗೆ ತಿಳಿಸಿದರು.
"ನಮಗೆ ಬೇಕಾದ 30 ಎಕರೆಗಳಲ್ಲಿ 25 ಎಕರೆಗಳನ್ನು ಗೋಪಾಲನ್ ಫೌಂಡೇಶನ್ ಸ್ವಾದೀನದಲ್ಲಿದ್ದು ಅದರಲ್ಲಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳನ್ನು ಪ್ರಾರಂಭಿಸಲು ಅವರು ಉದ್ದೇಶಿಸಿದ್ದಾರೆ. ಆದ ಕಾರಣ ಅವರು ನಮ್ಮ ಸ್ವಾಧೀನಕ್ಕೆ ಭೂಮಿ ಹಸ್ತಾಂತರಿಸಲು ನಿರಾಕರಿಸಿದ್ದಾರೆ" ಎಂದು ಅವರು ಹೇಳಿದರು. 2012 ರಲ್ಲಿ ಅಲ್ಲಿ ಕಾಲೇಜು ಸ್ಥಾಪನೆಗೆ ಸರ್ಕಾರ ಅನುಮತಿ ನೀಡೀದ್ದರೂ ಸಹ ಎರಡು ವರ್ಷಗಳ ಅವಧಿಯಲ್ಲಿ ಫೌಂಡೇಷನ್ ಅಲ್ಲಿ ಯಾವ ಅಭಿವೃದ್ಧಿ ಕೆಲಸವನ್ನೂ ಕೈಗೊಂಡಿಲ್ಲ. ಮೆಟ್ರೋ ನಿಲ್ದಾಣ, ಡಿಪೋ ಸ್ಥಾಪನೆಗೆ ಇದು ಉತ್ತಮ ಸ್ಥಳವೆಂದು ಡಿಪಿಆರ್ ಭಾವಿಸಿದೆ ಎಂದು ಹೇಳಿದರು.
ಬಿಎಂಆರ್ಸಿಎಲ್ ಒಂದು ಚದರ ಅಡಿಗೆ 4,000 ರೂ.ಗಳನ್ನು ಪಾವತಿಸಲು (ಪರಿಹಾರ ಮತ್ತು ಭೂ ಸ್ವಾಧೀನ ವೆಚ್ಚ) ಸಿದ್ಧವಾಗಿತ್ತು. "ಇದು ಕೃಷಿ ಭೂಮಿ ಗೆ ನಾವು ಪಾವತಿಸಲು ಅನುಮತಿಸಿರುವ ಮೊತ್ತ . ಹಾಗಿದ್ದರೂ, ಮಾಲೀಕರು ಸೈಟ್ ಗಳಾಗಿ ಮಾರಿದರೆ ಬರುವ ದರವನ್ನು ಬಯಸುತ್ತಿದ್ದಾರೆ, "ಅವನು ವಿವರಿಸಿದರು.
ಏಪ್ರಿಲ್ 4, 2016 ರಂದು ಬಿಎಂಆರ್ ಸಿ ಎಲ್ ಅಂತಿಮ ಪ್ರಕಟಣೆಯ ಮೂಲಕ ತಮ್ಮ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿರುವ ವಿರುದ್ಧ ಗೋಪಾಲನ್ ಫೌಂಡೇಶನ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. 2016 ರ ಜೂನ್ ನಲ್ಲಿ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂದ ನ್ಯಾಯಾಲಯವು ಮೆಟ್ರೋ ನಿಗಮದ ವಿಶೇಷ ಭೂ ಸ್ವಾಧೀನ ಅಧಿಕಾರಿ ಗೆ ಈ ವಿಚಾರ ಗಮನಿಸುವಂತೆ ಮನವಿ ಮಾಡಿತು. ಅದಾದ ನಂತರ 2016 ರ ಜುಲೈ 10 ರಂದು ಭೂ ಸ್ವಾಧೀನಕ್ಕೆ ಸಂಬಂಧಿಸಿ ಬಿಎಂಆರ್ ಸಿ ಎಲ್ ಹೊಸ ಪ್ರಕಟಣೆಯನ್ನು ಹೊರಡಿಸಿದೆ.
"ಮೆಟ್ರೋ ನಿಲ್ದಾಣದ ಸಮೀಪದಲ್ಲಿ ಈ ಭೂಮಿ ಇರುವುದರಿಂದ, ನಾವು ಇದರ ಕುರಿತು ಆಸಕ್ತಿ ಹೊಂದಿದ್ದೇವೆ. ಒಂದೊಮ್ಮೆ ಡಿಪೋ, ನಿಲ್ದಾಣದಿಂದ ದೂರದಲ್ಲಿದ್ದರೆ, ಬಿಎಂಆರ್ ಸಿ ಎಲ್ ಗೆ ನಿರ್ಮಾಣ ವೆಚ್ಚವು ಹೆಚ್ಚಾಗುತ್ತದೆ, ಭೂಮಾಲೀಕರು ಪ್ರತಿ ಚದರ ಅಡಿಗೆ 10,000 ರೂಪಾಯಿ ನೀಡಿದರೆ ಭೂಮಿ ಹಸ್ತಾಂತರಿಸಲು ಸಿದ್ಧರಿದ್ದಾರೆ" ಗೌಡರ್ ಹೇಳಿದರು.