ರಾಜ್ಯ

ಕೆಪಿಎಂಇ ಕಾಯ್ದೆ ವಿವಾದ: ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ರಮೇಶ್ ಕುಮಾರ್'ಗೆ ಭಾರೀ ಬೆಂಬಲ

Manjula VN
ಬೆಂಗಳೂರು: ಕೆಪಿಎಂಇ ಕಾಯ್ದೆ ವಿವಾದ ಕುರಿತಂತೆ ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ರಾಜ್ಯ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿರುವ ಬೆನ್ನಲ್ಲೇ ಸಾಮಾಜಿಕ ಜಾಲಾತಾಣಗಳಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಭಾರೀ ಬೆಂಬಲಗಳು ವ್ಯಕ್ತವಾಗತೊಡಗಿವೆ. 
ಕೆಪಿಎಂಇ ಕಾಯ್ದೆ ಕುರಿತಂತೆ ಸಾಮಾಜಿಕ ಜಾಲತಾಣಗಳಾದ ಫೇಸ್'ಬುಕ್, ಟ್ವಿಟರ್ ನಲ್ಲಿ ಹ್ಯಾಷ್ ಟ್ಯಾಗ್ ಗಳ ಮೂಲಕ 'ವಿ ಸಪೋರ್ಟ್ ರಮೇಶ್ ಕುಮಾರ್' ಎಂದು ಜನರು ಟ್ವೀಟ್ ಮಾಡುವ ಮುಖಾಂತರ ಜನರು ಸಚಿವರಿಗೆ ಬೆಂಬಲಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 
ಚಿಕಿತ್ಸಾ ಪ್ರಕ್ರಿಯೆಗಳಿಗೆ ಸರ್ಕಾರವೇ ಶುಲ್ಕವನ್ನು ನಿಗದಿ ಮಾಡುವುದರಿಂದ ಆಸ್ಪತ್ರೆಗಳಲ್ಲಿರುವ ಪಾರದರ್ಶಕತೆ ಕುರಿತು ಜನರಿಗೆ ಮಾಹಿತಿ ತಿಳಿಯುತ್ತದೆ. ಇದಕ್ಕೆ ನೀವೇಕೆ ಪ್ರತಿಭಟಿಸುತ್ತಿದ್ದೀರಿ ಎಂದು ವಿದ್ಯಾ ಸಿಂಗ್ ಎಂಬುವವರು ಪ್ರಶ್ನಿಸಿದ್ದಾರೆ. 
ಕೆಪಿಎಂಇ ಕಾಯ್ದೆಯಿಂದ ಬಡವರಿಗೆ ಸಹಾಯವಾಗಲಿದ್ದು, ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ಸರ್ಕಾರ ತೆಗೆದುಕೊಳ್ಳುತ್ತಿರುವ ಈ ನಿರ್ಧಾರ ಉತ್ತಮವಾಗಿದೆ ಎಂದು ಜೀವಾ ಮಡಿಕೇರಿ ಎಂಬುವವರು ಹೇಳಿದ್ದಾರೆ. 
ಪ್ರಸ್ತುತ ಸರ್ಕಾರ ಜಾರಿಗೆ ತರುತ್ತಿರುವ ಕಾಯ್ದೆ ಬಡವರ ಪರವಾಗಿದೆ. ಖಾಸಗಿ ವಲಯಗಳು ಆಸ್ಪತ್ರೆಗಳನ್ನು ವ್ಯವಹಾರ ಮಾಡಿಕೊಂಡು ಬಿಟ್ಟಿವೆ. ಇದಕ್ಕೆ ಅಂತ್ಯ ಹಾಡುವುದು ಬೇಡವೇ? ಖಾಸಗಿ ವಲಯಗಳು ನಡೆಸುತ್ತಿರುವ ದೌರ್ಜನ್ಯಗಳಿಗೆ ಸಾಮಾನ್ಯ ಜನರು ಬಲಿಪಶುಗಳಾಗಬೇಕೆ?: ಕೆಪಿಎಂಪಿ ಕಾಯ್ದೆಗೆ ನಮ್ಮ ಬೆಂಬಲ ಎಂದು ತಿಳಿಸಿದ್ದಾರೆ. 
SCROLL FOR NEXT