ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವು ಆಸ್ಪತ್ರೆಯ ಆಡಳಿತ ಮಂಡಳಯನ್ನು ನಿಯಂತ್ರಿಸುತ್ತದೆಯೇ ವಿನಃ ವೈದ್ಯರನಲ್ಲ ಎಂದು ಸಾರ್ವಜಿಕ ಆರೋಗ್ಯ ಸಂಶೋಧಕರು ಹೇಳಿದ್ದಾರೆ.
ವೈದ್ಯಕೀಯ ಚಿಕಿತ್ಸೆಗಳಿಗೆ ಸರ್ಕಾರ ಶುಲ್ಕವನ್ನು ನಿಗದಿ ಮಾಡುವುದರಿಂದ ರೋಗಿಗಳಿಗೆ ಅದುಲಾಭವಾಗಿಲಿದೆ ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆಯ ಸಂಸ್ಥಾಪಕ ಡಾ.ಎನ್. ದೇವದಸನ್ ಅವರು ಹೇಳಿದ್ದಾರೆ.
ಈ ಕುರಿತಂತೆ ಬ್ಲಾಗ್ ನಲ್ಲಿ ಬರೆದಿರುವ ಅವರು, ಹೆಚ್ಚಿನ ಹಾಗೂ ಮಧ್ಯಮ ಮಟ್ಟದಲ್ಲಿ ಆದಾಯವನ್ನು ಪಡೆಯುತ್ತಿರುವ ದೇಶಗಳು ವೈದ್ಯಕೀಯ ಚಿಕಿತ್ಸೆಗಳಿಗೆ ಶುಕ್ಲವನ್ನು ನಿಗದಿ ಮಾಡುತ್ತವೆ. ಥೈಲ್ಯಾಂಡ್, ಮಲೇಶಿಯಾ, ಫಿಲಿಪೈನ್ಸ್, ಇಂಡೋನೇಶಿಯಾ, ಮೊರೊಕ್ಕೊ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಸರ್ಕಾರ ಅಥವಾ ವಿಮಾ ಕಂಪನಿಗಳು ಆಸ್ಪತ್ರೆಗಳಿಂದ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ರೀತಿಯ ಸಾಧನೆಗಳನ್ನು ಖರೀದಿ ಮಾಡುತ್ತವೆ. ಬಳಿಕ ಅವರೇ ಶುಲ್ಕವನ್ನು ನಿಗದಿ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ಥೈಲ್ಯಾಂಡ್'ನಲ್ಲಿ ಶೇ.90 ರಷ್ಟು ವೈದ್ಯಕೀಯ ಚಿಕಿತ್ಸಾ ಸಾಧನಗಳನ್ನು ನಿಗದಿತ ಶುಲ್ಕದಲ್ಲಿ ಸರ್ಕಾರವೇ ಖರೀದಿ ಮಾಡುತ್ತವೆ. ಒಂದು ವೇಳೆ ಜನರು ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯಲು ಇಚ್ಛಿಸಿದ್ದೇ ಆದರೆ, ಅವರು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಫಿಲಿಪೈನ್ಸ್ ನಲ್ಲಿಯೂ ಕೂಡ ಇದೇ ರೀತಿ ಅನುಸರಿಸಲಾಗುತ್ತಿದೆ ಎಂದಿದ್ದಾರೆ.
ಇದೇ ವೇಳೆ ಶುಲ್ಕ ನಿಯಮಗಳು ಸಂಶೋಧನೆ ಅಥವಾ ಚಿಕಿತ್ಸಾ ಸಾಧನೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಶುಲ್ಕ ನಿಯಮಗಳು ಇವುಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇಂತಹ ನಂಬಿಕೆಗಳನ್ನು ಹರಡಿರುವುದು ಖಾಸಗಿ ವೈದ್ಯಕೀಯ ಸಂಘಗಳೇ ಎಂದಿದ್ದಾರೆ.
ಕರ್ನಾಟಕ ಜನಾರೋಗ್ಯ ಚಳುವಳಿ ಸಂಚಾಲಕ ಅಖಿಲ ವಾಸನ್ ಅವರು ಮಾತನಾಡಿ, ರೋಗಿಗಳು ಪರಿಹಾರ ಪಡೆಯಲು ಸಮಿತಿಗಳಿಲ್ಲ. ಹಿರಿಯ ನಾಗರಿಕರ ಕಾಯ್ದೆ, ಲೈಂಗಿಕ ದೌರ್ಜನ್ಯ ಕಾನೂನು ಕುರಿತ ಆಂತರಿಕ ದೂರು ಸಮಿತಿಯಲ್ಲಿ ಯಾವುದೇ ವಕೀಲರಿಲ್ಲ. ಕೇವಲ ವೈದ್ಯರಷ್ಟೇ ಅಲ್ಲ, ರೋಗಿಗಳಿಗೂ ಕೂಡ ವಕೀಲರು ಲಭ್ಯವಿಲ್ಲ. ಹೀಗಾಗಿ ವೈದ್ಯರು ದುರ್ಬಲರಾಗುವುದಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos