ಬೆಂಗಳೂರು: ನಕಲಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ನೀಡಿ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 23 ಜನರ ವಿರುದ್ಧ ವಿದಾನ ಸೌಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಆರ್. ಕೆ. ರಮೇಶ್ ಬಾಬು ಸಲ್ಲಿಸಿದ ದೂರಿನ ಅನುಸಾರ "23 ಅಭ್ಯರ್ಥಿಗಳು ಉದ್ಯೋಗಕ್ಕಾಗಿ ನಕಲಿ ಪ್ರಮಾಣಪತ್ರ ಮತ್ತು ನಕಲಿ ಅಂಕ ಪಟ್ಟಿಗಳನ್ನು ಸಲ್ಲಿಸಿದ್ದಾರೆ"
ಐಪಿಸಿ ಸೆಕ್ಷನ್ 420 (ವಂಚನೆ), 471 (ದಾಖಲಾತಿಗಳು ಅಥವಾ ಎಲೆಕ್ಟ್ರಾನಿಕ್ ದಾಖಲೆಗಳ ನಕಲು), 472 (ನಕಲಿ ಸೀಲ್ ತಯಾರಿಸುವುದು ಅಥವಾ ಹೊಂದುವುದು), 465 ಮತ್ತು 468 (ವಂಚನೆ ಉದ್ದೇಶಕ್ಕಾಗಿ ನಕಲು ಮಾಡುವುದು) ಅಡಿಯಲ್ಲಿ ಕೊಪ್ಪಳದ ಶಿವಬಸಪ್ಪ ಮಸಿಕಿ, ಅಹರನ ಗೌಡ ಮತ್ತು ಪಂಚಕ್ಷರಾಯ, ಬಳ್ಳಾರಿಯ ವಿರೂಪಾಕ್ಷ, ಬೆಳಗಾವಿಯ ಎಸ್ತಾರ್ ಸರೀನಾ ಕುಮಾರಿ, ರಾಯಚೂರುನ ಚೇತನ್ ಪಾಟೀಲ್ ಮತ್ತು ಗುರುರಾಜ್ ಸಿದ್ಧರಾಮನ ಗೊಡಗೇರಿ, ಬಾಗಲಕೋಟೆಯ ಫಿರೋಜ್ ಅಹ್ಮದ್, ಬೀದರ್ ನ ಮಹಾದೇವಿ, ಕಲಬುರ್ಗಿಯ ಮಿಥುನ್ ಮೊದಲಾದವರ ಮೇಲೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದಾದ್ಯಂತ 2,160 ಸಹಾಯಕ ಪ್ರಾದ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು 2014 ನಡೆಸಲಾಗಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಅವರು ಆಯ್ಕೆಗೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos